ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಲ್ಲಿ ಹರಿದಾಡಿತು ಪಾಕ್‌ಪರ ವಾಟ್ಸಪ್ ಸಂದೇಶ!

By ಮಂಗಳೂರು ಪ್ರತಿನಿಧಿ
|
Google Oneindia Kannada News

ಪುತ್ತೂರು, ಮಾರ್ಚ್, 25: ಪಾಕಿಸ್ತಾನದ ಪರ ವಾಟ್ಸಪ್ ಸಂದೇಶಗಳನ್ನು ಕಳಿಸಿದ ಆರೋಪದಲ್ಲಿ ಪುತ್ತೂರಿನ ಇಂಡಸ್ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ತಾಲೂಕು ದಂಡಾಧಿಕಾರಿಗಳ ಮುಂದೆ ಹಾಜರುಪಡಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

ಭಾರತ ಮತ್ತು ಪಾಕಿಸ್ತಾನದ ನಡುವಿನ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯದ ವೇಳೆ ಪಾಕ್ ಪರ ಘೋಷಣೆಗಳನ್ನೊಳಗೊಂಡ ವಾಟ್ಸಪ್ ಸಂದೇಶ ರವಾನಿಸಿದ್ದ ಆರೋಪ ಕೇಳಿ ಬಂದಿತ್ತು. ಪೊಲೀಸರು ಸೆಕ್ಷನ್ 103ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದರು. [ಟೀಂ ಇಂಡಿಯಾ ಸೆಮಿಫೈನಲ್ ಹೇಗೆ ತಲುಪಬಹುದು?]

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ

whatsapp

ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಮ್ಯಾಚ್ ನಡೆಯುತ್ತಿದ್ದ ಸಂದರ್ಭ ವಾಟ್ಸಪ್ ಗ್ರೂಪಿನಲ್ಲಿ ತಮ್ಮ ತಮ್ಮಲ್ಲಿ ಚರ್ಚಿಸುವ ಸಲುವಾಗಿ ಕೆಲವೊಂದು ಸಂದೇಶಗಳನ್ನು ಪರಸ್ಪರ ರವಾನಿಸಿಕೊಂಡಿದ್ದಾರೆ. ಆದರೆ ಈ ನಡುವೆ ಕೆಲವು ಆಯ್ದ ಸಂದೇಶಗಳನ್ನು ಇತರರಿಗೆ ರವಾನಿಸಿ ದೇಶದ ಅವಹೇಳನ ಮಾಡಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು.[ಹಗಲು ಬೀದಿಗಿಳಿಯಲಾಗುತ್ತಿಲ್ಲ, ರಾತ್ರಿ ತಣ್ಣಗೆ ಮಲಗಲಾಗುತ್ತಿಲ್ಲ]

ಇದಾದ ಮೇಲೆ ಪೊಲೀಸರು ಕಾಲೇಜು ವಿದ್ಯಾರ್ಥಿಗಳನ್ನು ಕರೆಸಿ ವಿಚಾರಿಸಿದಾಗಮೇಲಿನ ಹಲವು ವಿಚಾರಗಳು ಸ್ಪಷ್ಟವಾಗಿದ್ದವು. ಈ ಬಗ್ಗೆ ವಿದ್ಯಾರ್ಥಿಗಳಿಂದ ಮುಚ್ಚಳಿಕೆಯನ್ನು ಪಡೆದುಕೊಳ್ಳಲಾಗಿದೆ ಎಂದು ದಕ್ಷಿಣ ಕನ್ನಡ ಪೊಲೀಸ್ ಅಧೀಕ್ಷರು ಸ್ಪಷ್ಟನೆ ನೀಡಿದ್ದಾರೆ.

ಪಾಕ್ ಪರ ಸಂದೇಶ ಹರಿದಾಡುತ್ತಿರುವುದು ವಿಶ್ವ ಹಿಂದೂ ಪರಿಷತ್ ನ ಕೃಷ್ಣಪ್ರಸಾದ್ ಎಂಬುವರಿಗೆ ಗೊತ್ತಾಗಿದೆ. ಅವರು ವಾಟ್ಸಪ್ ಸ್ಕ್ರೀನ್ ಶಾಟ್ ಇಟ್ಟುಕೊಂಡು ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ಮಾಹಿತಿ ಕಲೆ ಹಾಕಿದ ಪೊಲೀಸರು ವಿದ್ಯಾರ್ಥಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

English summary
Mangaluru: Two students held for posting pro-Pakistan slogans on WhatsApp. Incident reported from Puttur, a discussion within a college students' WhatsApp group got leaked, resulting in some students being pulled up by the police. The incident happened on recent India-Pak T20 match.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X