• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಗಳೂರು ಟೌನ್‌ಹಾಲ್ ನವೀಕರಣ ಮುಗಿಯುವುದೆಂದು?

By ಐಸಾಕ್ ರಿಚರ್ಡ್, ಮಂಗಳೂರು
|

ಮಂಗಳೂರು, ನವೆಂಬರ್ 02 : ಮಂಗಳೂರು ಪುರಭವನದ ನವೀಕರಣ ಕಾರ್ಯ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ನ.14ಕ್ಕೆ ಎಲ್ಲಾ ಕೆಲಸ ಮುಗಿಯಲಿದೆ ಎಂದು ಅಧಿಕಾರಿಗಳು ಹೇಳಿದ್ದರು. ಆದರೆ, ಈಗ ಕಾಮಗಾರಿ ನಡೆಯುತ್ತಿರುವ 'ವೇಗ' ನೋಡಿದರೆ ನವೆಂಬರ್ 30ಕ್ಕೂ ಕೆಲಸಗಳು ಮುಗಿಯುವುದು ಅನುಮಾನ.

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮನಾಥ ರೈ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಮೇಯರ್ ಜೆಸಿಂತಾ, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಮುಂತಾದವರು ಹಲವು ಬಾರಿ ಪುರಭವನದ ನವೀಕರಣ ಕಾರ್ಯದ ಪ್ರಗತಿ ಪರಿಶೀಲನೆ ನಡೆಸಿದ್ದಾರೆ. ಕಾಮಗಾರಿ ಬೇಗ ಮುಗಿಯುತ್ತದೆ ಎಂದು ಭರವಸೆ ನೀಡಿದ್ದಾರೆ. [ಮಂಗಳೂರು : ಪುರಭವನದ ನವೀಕರಣ ಮುಗಿಯುತ್ತಿಲ್ಲ]

ಸದ್ಯ, ನವೆಂಬರ್ 14ಕ್ಕೆ ನವೀಕರಣಗೊಂಡ ಪುರಭವನದ ಉದ್ಘಾಟನೆ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳು ಘೋಷಿಸಿದ್ದರು. ಆದರೆ, ಪುರಭವನದಲ್ಲಿ ಕುರ್ಚಿ ಜೋಡಿಸುವ ಕೆಲಸವೇ ಇನ್ನೂ ಮುಗಿದಿಲ್ಲ. 900 ಆಸನಗಳನ್ನು ಜೋಡಿಸಲು 15 ದಿನ ಸಾಲದು ಎನ್ನುತ್ತಾರೆ ಕಾಮಗಾರಿಯ ಉಸ್ತುವಾರಿ ನೋಡಿಕೊಳ್ಳುತ್ತಿರುವವರು. ಹಾಗಾದರೆ ನವೆಂಬರ್ 14ರ ಮಕ್ಕಳ ದಿನಾಚರಣೆಯಂದು ಪುರಭವನ ಉದ್ಘಾಟನೆಯಾಗಲಿದೆಯೇ? ಕಾದು ನೋಡಬೇಕು.

ಹೆಚ್ಚಳವಾಗಲಿದೆ ಟೌನ್‌ಹಾಲ್ ಬಾಡಿಗೆ : ನವೀಕರಣಗೊಂಡ ಟೌನ್‌ಹಾಲ್ ಬಾಡಿಗೆ ಹೆಚ್ಚಳವಾಗಲಿದೆ. ಬಾಡಿಗೆಯನ್ನು ಎಷ್ಟು ಹೆಚ್ಚಿಸಬೇಕು ಎಂಬ ಕುರಿತು 2 ಸಭೆಗಳು ನಡೆದಿವೆ. ಆದರೆ, ಅಂತಿಮ ನಿರ್ಧಾರವನ್ನು ಇನ್ನೂ ಕೈಗೊಂಡಿಲ್ಲ. ನವೀಕರಣದ ಲೆಕ್ಕಾಚಾರ ನೋಡಿದಾಗ ಬಾಡಿಗೆ ಈಗಿರುವುದಕ್ಕಿಂತ 3 ರಿಂದ 4 ಪಟ್ಟು ಹೆಚ್ಚಾಗುವ ಸಾಧ್ಯತೆ ಇದೆ.[ನವೀಕರಣಗೊಂಡ ಬೆಂಗಳೂರು ಟೌನ್ ಹಾಲ್ ಚಿತ್ರಗಳು]

ಹಿಂದೆ ಟೌನ್‌ಹಾಲ್ ನವೀಕರಣಕ್ಕೆ 2 ಕೋಟಿ ಖರ್ಚಾಗಬಹುದು ಎಂದು ಯೋಜನೆ ರೂಪಿಸಲಾಗಿತ್ತು. ಆದರೆ, ಈಗ ಅದು 4.5 ಕೋಟಿಗೆ ತಲುಪಿದೆ. ಸಂಪೂರ್ಣ ಹವಾನಿಯಂತ್ರಿತವಾದ ಭವನದಲ್ಲಿ ನಾಟಕ , ಸಂಗೀತ ಕಾರ್ಯಕ್ರಮಗಳಿಗಾಗಿ ಮುಂಬೈ ಮಾದರಿಯ ಆಧುನಿಕ ತಾಂತ್ರಿಕತೆಯನ್ನು ಅಳವಡಿಸಲಾಗಿದೆ. ಈ ಬದಲಾವಣೆಗಳಿಗೆ ತಕ್ಕಂತೆ ಬಾಡಿಗೆ ನಿಗದಿಪಡಿಸಿದರೆ ಪುರಭವನದಲ್ಲಿ ನಾಟಕಗಳೇ ನಡೆಯುವುದಿಲ್ಲ ಎನ್ನುತಾತೆ ಜನರು.

ಹಿಂದೆ ದೇವಣ್ಣ ಶೆಟ್ಟಿ ಅವರು ಮೇಯರ್ ಆಗಿದ್ದ ಕಾಲದಲ್ಲಿ ಪುರಭವನ ನವೀಕರಣಗೊಂಡಿತ್ತು. ಆಗಲು ಬಾಡಿಗೆ ಹೆಚಿಸಲಾಗಿತ್ತು. ಆಗಿನ ಬಾಡಿಗೆಯನ್ನು ವಿರೋಧಿಸಿ ಕಲಾವಿದರು ಹೋರಾಟ ನಡೆಸಿದ್ದರು. ಬಳಿಕ ಬಾಡಿಗೆ ಸ್ವಲ್ಪ ಇಳಿಕೆ ಮಾಡಲಾಗಿತ್ತು.

ಸದ್ಯ, ಬಾಡಿಗೆ ನಿಗದಿ ಕುರಿತು ಸಾಲು-ಸಾಲು ಸಭೆ ನಡೆಯುತ್ತಿರುವುದು ನೋಡಿದರೆ ಕಲಾವಿದರು ಮತ್ತೊಂದು ಸುತ್ತಿನ ಹೋರಾಟಕ್ಕೆ ಸಿದ್ಧವಾಗಬೇಕೋ ಎಂದು ಅನ್ನಿಸುತ್ತಿದೆ. ಪುರಭವನ ಎಂದು ಬಾಗಿಲು ತೆರೆಯುತ್ತೇ? ಎಂದು ಸಾಂಸ್ಕೃತಿಕ ಕಾರ್ಯಕ್ರಮದ ಆಯೋಜಕರು ಕಾದು ಕುಳಿತಿದ್ದಾರೆ.

English summary
Mangaluru Town hall expected to be opened on Children's Day November 14th 2015. The renovation works has missed many deadlines so far. Town Hall closed for renovation form January 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more