ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿಗೆ ಬಂತು ಗಾಳಿ ಅಳೆಯುವ ತಂತ್ರ

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಡಿಸೆಂಬರ್. 13 : ಶುದ್ಧ ಗಾಳಿ ಗುಣಮಟ್ಟವನ್ನು ಅಳೆಯುವ ಯೋಜನೆಯನ್ನು ಇದೀಗ ಎನ್‌ಜಿಓ ಕೈಗೊಂಡಿದೆ. ಜನರಲ್ಲಿ ಪರಿಸರ ಸಂಬಂಧಿ ಜಾಗೃತಿ ಮೂಡಿಸಲು ಪ್ರಜ್ಞಾಪೂರ್ವಕ ಹೆಜ್ಜೆ ಮುಂದಿಟ್ಟಿದೆ.

ಹೊಸ ತಂತ್ರಜ್ಞಾನ ಬಳಸಿ ನಗರದಲ್ಲಿ ಎಷ್ಟು ಪ್ರಮಾಣದಲ್ಲಿ ಶುದ್ಧದ ಗಾಳಿ ಇದೆ ಹಾಗೂ ಗಾಳಿಯ ಗುಣಮಟ್ಟದ ಮೌಲ್ಯಮಾಪನವನ್ನು ಅಳೆಯುವ ಯೋಜನೆಗೆ ಚಾಲನೆ ನೀಡಲಾಗಿದೆ. [ಮಂಗಳೂರಿನ ಬೆಲ್ಲ ಕ್ಯಾಂಡಿ ರುಚಿಯನ್ನು ಸವಿದವನೇ ಬಲ್ಲ!]

ವಾಯು ಮಾಲೀನ್ಯ ಇಲಾಖೆ ಮತ್ತು ಸೇಂಟ್ ಜಾರ್ಜ್ ಹೋಮಿಯೋಪತಿ ಜಂಟಿ ಆಶ್ರಯದಲ್ಲಿ ಈ ಯೋಜನೆಗೆ ಚಾಲನೆ ದೊರೆತಿದೆ. ಮಂಗಳೂರಿನ ಒನ್ ಅರ್ಥ್ಎನ್ವಿರೋ ಲ್ಯಾಬ್ ವಾಯುಮಾಲೀನ್ಯಕ್ಕೆ ಕುರಿತಂತೆ ಸೂಕ್ತ ಮಾಹಿತಿ ಕಲೆ ಹಾಕುತ್ತಿದೆ.

ಈ ನಿಟ್ಟಿನಲ್ಲಿ ಗಾಳಿಯ ಗುಣಮಟ್ಟವನ್ನು ಅಳೆಯುವ ಉಪಕರಣವನ್ನು ನಗರದ ಹಲವೆಡೆ ಅಳವಡಿಸಲು ನಿರ್ಧರಿಸಲಾಗಿದ್ದು, ಮಾತ್ರವಲ್ಲದೆ ಅದರ ಫಲಿತಾಂಶವನ್ನು ಸರಕಾರಕ್ಕೆ ಸಲ್ಲಿಸಲಾಗುತ್ತದೆ. [ಡಿಸೆಂಬರ್ 24, 25ರಂದು ಮಂಗಳೂರಲ್ಲಿ 'ಜನನುಡಿ' ಸಾಹಿತ್ಯ ಸಮಾವೇಶ]

ಇದನ್ನು ಅಳವಡಿಸುವುದರಿಂದ ನಗರದ ಜನತೆಗೆ ಗಾಳಿಯ ಗುಣಮಟ್ಟ ಅರ್ಥಮಾಡಿಕೊಳ್ಳಲು ಸಹಕಾರಿಯಾಗಿದೆಇನ್ನೂ ಈ ಕುರಿತು ಮಾತನಾಡಿದ ಎಡಿಪಿ ಫೌಂಡೇಶನ್ ಸ್ಥಾಪಕ ಅಬ್ದುಲ್ಲಾ ಎ ರೆಹಮಾನ್, ವಾಯು ಮಾಲಿನ್ಯ ಅಪಾಯಕಾರಿ ಮಟ್ಟ ತಲುಪುತ್ತಿದ್ದು, ಕೇಂದ್ರ ಸರಕಾರ ಇತ್ತೀಚೆಗಷ್ಟೇ ವಾಯು ಗುಣಮಟ್ಟ ಸೂಚ್ಯಂಕಕ್ಕೆ (ಎಕ್ಯೂಐ) ಚಾಲನೆ ನೀಡಿದೆ.

ಆದರೆ, ನಮ್ಮ ಕುಡ್ಲದಲ್ಲಿ ಇದನ್ನು ಸರಿಯಾಗಿ ಕಾರ್ಯರೂಪಕ್ಕೆ ತರುವಲ್ಲಿ ಸಾಧ್ಯವಾಗಲಿಲ್ಲ. ನಾವು ಈ ಯೋಜನೆಯನ್ನು ಕಾರ್ಯರೂಪಕ್ಕೆ ತಂದು ಮಂಗಳೂರು ದೇಶದಲ್ಲೇ ಅತೀ ಕಡಿಮೆ ವಾಯುಮಾಲೀನ್ಯ ಹೊಂದಿರುವ ನಗರವನ್ನಾಗಿಸಲು ಉದ್ದೇಶಿಸಿದೇವೆ. ಇದಲ್ಲದೆ ಈಗಾಗಲೇ ಈ ಯೋಜನೆಯು ಪ್ರಗತಿಯ ಹಂತದಲ್ಲಿದೆ ಎಂದು ಹೇಳಿದರು.

ನಗರದ ವಿವಿಧ ಕಡೆಗಳಲ್ಲಿ ಸಾಧನಗಳ ಅಳವಡಿಕೆ

ನಗರದ ವಿವಿಧ ಕಡೆಗಳಲ್ಲಿ ಸಾಧನಗಳ ಅಳವಡಿಕೆ

ಗಾಳಿಯ ಶುದ್ದತೆಯನ್ನು ಅಳೆಯುವ ಸಾಧನವನ್ನು ನಗರದ ಪಿವಿಎಸ್ ಜಂಕ್ಷನ್, ಹಂಪನಕಟ್ಟೆ, ಬಂದರ್, ಸೆಂಟ್ರಲ್ ಮಾರ್ಕೆಟ್, ಲಾಲ್ಬಾಗ್ ಬಿಜೈ, ಜ್ಯೋತಿ ಸರ್ಕಲ್, ನಂತೂರ್ ಬೈಕಂಪಾಡಿ, ಪಂಪ್ ವೆಲ್, ಕಂಕನಾಡಿ ಮತ್ತು ಅತ್ತಾವರ ದಲ್ಲಿ ಇಡಲಾಗಿದೆ. ಹೀಗೆ ಈ ಸಾಧನ ಎಂಟು ಗಂಟೆಗಳ ಕಾಲ ಕಾರ್ಯ ನಿರ್ವಹಿಸಲಿದೆ.

10 ದಿನಗಳೊಳಗಾಗಿ ಸಂಕ್ಷಿಪ್ತ ವರದಿ

10 ದಿನಗಳೊಳಗಾಗಿ ಸಂಕ್ಷಿಪ್ತ ವರದಿ

10 ದಿನಗಳೊಳಗಾಗಿ ಸಂಕ್ಷಿಪ್ತ ವರದಿಯನ್ನು ಜಿಲ್ಲಾಡಳಿತ , ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರಿಗೆ ಕಳುಹಿಸಲಾಗುವುದು ಎಂದು ಎಡಿಪಿ ಫೌಂಡೇಶನ್ ಸ್ಥಾಪಕ ಅಬ್ದುಲ್ಲಾ ಎ ರೆಹಮಾನ್ ಹೇಳಿದರು.

ಪಿಲಿಕುಳದಲ್ಲಿ ಕೊನೆಯ ಉಪಕರಣ

ಪಿಲಿಕುಳದಲ್ಲಿ ಕೊನೆಯ ಉಪಕರಣ

ನಗರದ ಪ್ರಮುಖ 12 ಕಡೆಗಳಲ್ಲಿ ಈ ಯಂತ್ರವನ್ನು ಅಳವಡಿಸಲು ನಿರ್ಧರಿಸಿದ್ದೇವೆ ಈ ಪೈಕಿ ಪಿಲಿಕುಳದಲ್ಲಿ ಕೊನೆಯದಾಗಿ ಈ ಉಪಕರಣವನ್ನು ಅಳವಡಿಸಲು ನಿರ್ಧರಿಸಲಾಗಿದೆಅಬ್ದುಲ್ಲಾ ಎ ರೆಹಮಾನ್ ಎಂದು ಹೇಳಿದರು.

ಈ ಯೋಜನೆ ಉದ್ದೇಶ ಏನು?

ಈ ಯೋಜನೆ ಉದ್ದೇಶ ಏನು?

ಈ ಮೊದಲಿಗೆ ಸರ್ಕಾರವು ಗಾಳಿಯ ಗುಣಮಟ್ಟ ಅಳೆಯುವ ಉಪಕರಣವನ್ನು ಬೈಕಂಪಾಡಿಯ ಕೈಗಾರಿಕಾ ಪ್ರದೇಶದಲ್ಲಿ ಇರಿಸಿದೆ. ಆದರೆ ಅದು ಕೇವಲ ಆ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದೆ. ನಗರದ ಹಲವೆಡೆ ವಾಹನ ದಟ್ಟಣೆಯಿಂದ ವಾಯುಮಾಲೀನ್ಯ ಹೆಚ್ಚಾಗುತ್ತಿದೆ. ಈ ಕಾರಣದಿಂದಲೇ ನಮ್ಮ ಸುತ್ತಮುತ್ತಲಿನ ಪರಿಸರ, ಶಾಲಾ ಕಾಲೇಜು ವಾತಾವರಣದಲ್ಲಿ ಗಾಳಿಯ ಗುಣಮಟ್ಟ ಹೇಗಿದೆ ಎಂಬುದನ್ನು ಪರೀಕ್ಷಿಸುವ ಸಲುವಾಗಿ ಈ ಯೋಜನೆಯನ್ನು ಕೈಗೊಂಡಿರುವ ಮೂಲ ಉದ್ದೇಶ ಎಂದರು.

ಭಾರತದಲ್ಲೇ ಸ್ವಚ್ಛ ನಗರಗಳಲ್ಲಿ 8ನೇ ಸ್ಥಾನ

ಭಾರತದಲ್ಲೇ ಸ್ವಚ್ಛ ನಗರಗಳಲ್ಲಿ 8ನೇ ಸ್ಥಾನ

ಮಂಗಳೂರು ನಗರ ಭಾರತದಲ್ಲೇ ಅತ್ಯಂತ ಸ್ವಚ್ಛ ನಗರಗಳಲ್ಲಿ 8ನೇ ಸ್ಥಾನದಲ್ಲಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಜನಸಂಖ್ಯೆಯಲ್ಲಿ ತೀವ್ರ ಹೆಚ್ಚಳ, ವಾಹನಗಳ ದಟ್ಟಣೆಯಿಂದ ಮಾಲೀನ್ಯ ಮಟ್ಟದಲ್ಲಿ ಏರಿಕೆ ಉಂಟಾಗಿದೆ ಎಂದರು.

English summary
A city-based NGO has taken up Shuddha Gaali, a project to assess the air quality at 12 prominent spots. The project is floated by APD Foundation in association with St George's Homeopathy, a firm promoting better health.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X