ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಲ್ಲಿ ರಾಷ್ಟ್ರಪತಿ ವಾಸ್ತವ್ಯ; ಕರಾವಳಿ ಖಾದ್ಯಗಳ ಆತಿಥ್ಯ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಅಕ್ಟೋಬರ್ 07: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇದೇ ಮೊದಲ ಬಾರಿಗೆ ಮಂಗಳೂರಿಗೆ ಆಗಮಿಸುತ್ತಿದ್ದಾರೆ. ಮಂಗಳೂರಿನ ಸರ್ಕ್ಯೂಟ್ ಹೌಸ್‌ನಲ್ಲಿ ರಾಮನಾಥ್ ಕೋವಿಂದ್ ಎರಡು ದಿನ ವಾಸ್ತವ್ಯ ಮಾಡಲಿದ್ದಾರೆ.

ಇಡೀ ಮಂಗಳೂರು ನಗರ ಪೊಲೀಸ್ ಸರ್ಪಗಾವಲಿನಲ್ಲಿದೆ. ಶೃಂಗೇರಿಯ ಶಾರಾದಾಂಬೆಯ ದರ್ಶನ ಪಡೆಯುವ ಸಲುವಾಗಿ ಮಂಗಳೂರಿಗೆ ಗುರುವಾರ ರಾತ್ರಿ 6.15ಕ್ಕೆ ರಾಷ್ಟ್ರಪತಿ ಆಗಮಿಸಲಿದ್ದಾರೆ. ರಾಷ್ಟ್ರಪತಿಯವರ ಆಗಮನದ ಹಿನ್ನಲೆಯಲ್ಲಿ ಸರ್ಕ್ಯೂಟ್ ಹೌಸ್ ಮದುವಣಗಿತ್ತಿಯಂತೇ ಸಿಂಗಾರಗೊಂಡಿದ್ದು, ದೇಶದ ಮೊದಲ ಪ್ರಜೆಗೆ ವಿಶೇಷ ಆತಿಥ್ಯ ನೀಡಲು ದಕ್ಷಿಣ ಕನ್ನಡ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.

 ರಾಷ್ಟ್ರಪತಿ ಭೇಟಿ ಹಿನ್ನೆಲೆ: ಅ.8ರಂದು ಶೃಂಗೇರಿ ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿಷೇಧ ರಾಷ್ಟ್ರಪತಿ ಭೇಟಿ ಹಿನ್ನೆಲೆ: ಅ.8ರಂದು ಶೃಂಗೇರಿ ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿಷೇಧ

ರಾಜ್ಯ ಪ್ರವಾಸದಲ್ಲಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶುಕ್ರವಾರ ಬೆಳಗ್ಗೆ ಶೃಂಗೇರಿಗೆ ಭೇಟಿ‌ ನೀಡಲಿದ್ದಾರೆ. ಈ ಹಿನ್ನಲೆಯಲ್ಲಿ ಗುರುವಾರ ರಾತ್ರಿ ಮಂಗಳೂರಿಗೆ ಬಂದು, ಶುಕ್ರವಾರ ಬೆಳಗ್ಗೆ ಸೇನಾ ವಿಮಾನದ ಮೂಲಕ ಶೃಂಗೇರಿಯನ್ನು ತಲುಪಲಿದ್ದಾರೆ.

 ರಾಷ್ಟ್ರಪತಿ ಕೋವಿಂದ್ ಬೆಂಗಳೂರಿಗೆ ಆಗಮನ, ಸಿಎಂರಿಂದ ಸ್ವಾಗತ ರಾಷ್ಟ್ರಪತಿ ಕೋವಿಂದ್ ಬೆಂಗಳೂರಿಗೆ ಆಗಮನ, ಸಿಎಂರಿಂದ ಸ್ವಾಗತ

Mangaluru Style Food Arrangements For Ram Nath Kovind

ವಿಶೇಷ ವಿಮಾನದ ಮೂಲಕ ಗುರುವಾರ ಸಂಜೆ ಗಂಟೆ 6.15ಕ್ಕೆ ಮಂಗಳುರು ವಿಮಾನ ನಿಲ್ದಾಣಕ್ಕೆ ರಾಷ್ಟ್ರಪತಿ ಆಗಮಿಸಲಿದ್ದಾರೆ. ವಿಮಾನ ನಿಲ್ದಾಣದಲ್ಲಿ ರಾಷ್ಟ್ರಪತಿಯವರನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಬರಮಾಡಿಕೊಳ್ಳಲಿದ್ದಾರೆ. ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ, ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಜೊತೆ ಇರಲಿದ್ದಾರೆ.

ರಾಷ್ಟ್ರಪತಿ ಭೇಟಿ; ಬಿಳಿಗಿರಿ ರಂಗನ ಬೆಟ್ಟಕ್ಕೆ ಭಕ್ತರ ಪ್ರವೇಶ ನಿಷೇಧ ರಾಷ್ಟ್ರಪತಿ ಭೇಟಿ; ಬಿಳಿಗಿರಿ ರಂಗನ ಬೆಟ್ಟಕ್ಕೆ ಭಕ್ತರ ಪ್ರವೇಶ ನಿಷೇಧ

ಮಂಗಳೂರು ವಿಮಾನ ನಿಲ್ದಾಣದಿಂದ ನಗರದ ಸರ್ಕ್ಯೂಟ್ ಹೌಸ್‌ಗೆ ರಾಷ್ಟ್ರಪತಿ ದಂಪತಿ ಆಗಮಿಸಲಿದ್ದು, ಗುರುವಾರ ರಾತ್ರಿ ಸರ್ಕ್ಯೂಟ್ ಹೌಸ್‌ನಲ್ಲೇ ವಾಸ್ತವ್ಯ ಹೂಡಿ ಶುಕ್ರವಾರ ಬೆಳಗ್ಗೆ 10.55ಕ್ಕೆ ಮತ್ತೆ ವಿಮಾನ ನಿಲ್ದಾಣ ಕ್ಕೆ ಹೋಗಿ ಮೂರು ಸೇನಾ ಹೆಲಿಕಾಪ್ಟರ್ ಮೂಲಕ ಶೃಂಗೇರಿಯನ್ನು ತಲುಪಲಿದ್ದಾರೆ.

ಶುಕ್ರವಾರ ಸಂಜೆ 4.55ಕ್ಕೆ ಪುನಃ ಮಂಗಳೂರಿಗೆ ಆಗಮಿಸಲಿರುವ ರಾಷ್ಟ್ರಪತಿ ಗಳು 5.10 ನಿಮಿಷಕ್ಕೆ ಮಂಗಳೂರು ವಿಮಾನ ನಿಲ್ದಾಣದಿಂದ ದೆಹಲಿಯತ್ತ ಪ್ರಯಾಣ ಬೆಳೆಸಲಿದ್ದಾರೆ.

Mangaluru Style Food Arrangements For Ram Nath Kovind

ರಾಷ್ಟ್ರಪತಿ ರಾಮನಾಥ್ ಕೋವಿಂದ್ ದಂಪತಿಗೆ ವಿಶೇಷ ಆತಿಥ್ಯ ನೀಡಲು ಸರ್ಕ್ಯೂಟ್ ಹೌಸ್‌ನಲ್ಲಿ ವ್ಯವಸ್ಥೆ ಮಾಡಲಾಗಿದೆ. ರಾಷ್ಟ್ರಪತಿಯವರಿಗೆ ಅಡುಗೆ ಸಿದ್ಧಪಡಿಸಲು ದೆಹಲಿಯಿಂದ ಮುಖ್ಯ ಬಾಣಸಿಗ ಮಂಗಳೂರಿಗೆ ಆಗಮಿಸಿದ್ದಾರೆ. ದೆಹಲಿಯ ಬಾಣಸಿಗನ ಜೊತೆಗೆ ಮಂಗಳೂರಿನ 15 ಮಂದಿ ಬಾಣಸಿಗರೂ ಜೊತೆಯಾಗಲಿದ್ದಾರೆ.

ರಾಷ್ಟ್ರಪತಿಯವರ ರಾತ್ರಿಯ ಭೋಜನಕ್ಕಾಗಿ ಗ್ರೀನ್ ಸಲಾಡ್, ಪರ್ವಾಲ್ ಸಬ್ಜಿ, ಹಾಗಲಕಾಯಿ ಪಲ್ಯ, ಬೇಳೆ ಸಾರು, ಮೊಸರು, ದಾಲ್, ರೋಟಿ, ಚಪಾತಿ, ಅನ್ನ, ಸಾರು ಮೆನು ಸಿದ್ಧಗೊಳಿಸಲಾಗಿದೆ.

ಶುಕ್ರವಾರ ಬೆಳಗ್ಗಿನ ಉಪಹಾರಕ್ಕಾಗಿ ಇಡ್ಲಿ, ಉತ್ತಪ್ಪಮ್, ಚಟ್ನಿ, ಸಾಂಬಾರ್ ಇರಲಿದೆ. ರಾಷ್ಟ್ರಪತಿಗಳ ಮಡದಿಗೆ ತುಳುನಾಡಿನ ವಿಶೇಷ ಖಾದ್ಯಗಳನ್ನು ತಯಾರಿಸಲಾಗಿದೆ. ತುಳುನಾಡಿನ ಸಂಜೀರ, ಮದ್ದೂರು ವಡೆ, ಬಾಳೆ ಹಣ್ಣು ಪೋಡಿ, ನೀರು ದೋಸೆ ಸೇರಿದಂತೆ ವಿವಿಧ ಖಾದ್ಯಗಳನ್ನು ತಯಾರಿಸಲಾಗಿದೆ.

ಕರ್ನಾಟಕ ಪ್ರವಾಸ; ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕರ್ನಾಟಕ ಭೇಟಿಗಾಗಿ ಬುಧವಾರ ಸಂಜೆ ಬೆಂಗಳೂರಿಗೆ ಆಗಮಿಸಿದ್ದಾರೆ. ಗುರುವಾರ ಚಾಮರಾಜನಗರದ ಬಿಳಿಗಿರಿ ರಂಗನ ಬೆಟ್ಟಕ್ಕೆ ಅವರು ಭೇಟಿ ನೀಡಿದ್ದಾರೆ.

ಬಳಿಕ ಮಂಗಳೂರು, ಚಿಕ್ಕಮಗಳೂರಿಗೆ ಭೇಟಿ ನೀಡಲಿದ್ದಾರೆ. ಇದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ದಂಪತಿಗಳ ಖಾಸಗಿ ಭೇಟಿಯಾಗಿದೆ. ರಾಷ್ಟ್ರಪತಿಗಳ ಭದ್ರತಾ ಪಡೆಯ ಅಧಿಕಾರಿಗಳು ಈಗಾಗಲೇ ಅವರು ಭೇಟಿ ನೀಡುವ ಸ್ಥಳದಲ್ಲಿ ಭದ್ರತೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ವ್ಯಾಪಾರಿಗಳ ಆಕ್ರೋಶ; ರಾಮನಾಥ್ ಕೋವಿಂದ್ ಭೇಟಿ ಹಿನ್ನಲೆಯಲ್ಲಿ ಗುರುವಾರ ಮತ್ತು ಶುಕ್ರವಾರ ಶೃಂಗೇರಿ ಪಟ್ಟಣ ಬಂದ್ ಮಾಡಿ ಚಿಕ್ಕಮಗಳೂರು ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡುವಂತೆ ಜಿಲ್ಲಾಡಳಿತ ಸೂಚನೆ ನೀಡಿದ್ದು, ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಕೋವಿಡ್ ಕಾರಣದಿಂದಾಗಿ ನಷ್ಟ ಅನುಭವಿಸಿದ್ದೇವೆ. ನವರಾತ್ರಿ ಸಂದರ್ಭದಲ್ಲಿ ಮತ್ತೆ 2 ದಿನ ಅಂಗಡಿ ಮುಂಗಟ್ಟು ಮುಚ್ಚಲು ಆದೇಶ ನೀಡಿದರೆ ನಮಗೆ ಆಗುವ ನಷ್ಟಕ್ಕೆ ಯಾರು ಹೊಣೆ? ಎಂದು ವ್ಯಾಪಾರಿಗಳು ಪ್ರಶ್ನಿಸಿದ್ದಾರೆ.

English summary
President of India Ram Nath Kovind will stay in Circuit House Mangaluru on October 7th night. Mangaluru style food arrangements made for president.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X