ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೋವುಗಳನ್ನು ಕಟುಕರ ಕೈಗೆ ಕೊಡಬೇಡಿ

|
Google Oneindia Kannada News

ಮಂಗಳೂರು, ಡಿ.16 : ಗೋವುಗಳ ಸಂತತಿಯ ಸಂರಕ್ಷಣೆಗಾಗಿ ಗೋಹತ್ಯೆ ನಿಷೇಧ ಜಾರಿಗೊಳಿಸಿ ಗೋ ಸಂಪತ್ತನ್ನು ಉಳಿಸಬೇಕು ಎಂದು ಆಗ್ರಹಿಸಿ ಶ್ರೀರಾಮ ಸೇನೆ ಗೋ ರಥದೊಂದಿಗೆ ಮಂಗಳೂರಿನಲ್ಲಿ ಕಾಲ್ನಡಿಗೆ ಜಾಥಾ ನಡೆಸಿತು. ಉತ್ತರ ಭಾರತ ಮತ್ತು ದಕ್ಷಿಣ ಭಾರತದ ನಾಲ್ಕು ಪಂಥದ ಸಾಧು ಸಂತರು ಜಾಥಾದಲ್ಲಿ ಪಾಲ್ಗೊಂಡಿದ್ದರು.

ಸೋಮವಾರ ದಕ್ಷಿಣ ಕನ್ನಡ ಜಿಲ್ಲಾ ಶ್ರೀರಾಮ ಸೇನೆ ಘಟಕ ಮಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಗೋ ರಥದೊಂದಿಗೆ ಬೃಹತ್ ಕಾಲ್ನಡಿಗೆ ಜಾಥಾ ನಡೆಸಿತು. ಗೋವು ನಮ್ಮ ಶ್ರದ್ಧಾ ಭಕ್ತಿಯ ಪ್ರತೀಕ. ಅದರ ಹತ್ಯೆ ನಿಲ್ಲಿಸಲು ಪ್ರಾಣಿ ದಯಾ ಸಂಘ ಹಾಗೂ ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಯಿತು. [ಹಸುವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ]

Mangaluru

ಜಿಲ್ಲಾಧಿಕಾರಿ ಕಚೇರಿ ಬಳಿ ನಡೆದ ಸಭೆಯಲ್ಲಿ ಮಾತನಾಡಿದ ಶ್ರೀರಾಮ ಸೇನೆಯ ದಕ್ಷಿಣ ಪ್ರಾಂತದ ಅಧ್ಯಕ್ಷ ಮಹೇಶ್ ಕೊಪ್ಪ ಅವರು, ಗೋರಕ್ಷಣೆ, ಭಯೋತ್ಪಾದನೆ ಹತ್ತಿಕ್ಕಲು, ಮತಾಂತರ ನಿಲ್ಲಿಸಲು ಶ್ರೀರಾಮ ಸೇನೆಯು ದೇಶದ 12 ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತದೆ ಎಂದರು.[ರಾಯಚೂರು ಗೋ ಶಾಲೆಯಲ್ಲಿ ಹಸುಗಳ ಸಾವು]

ಭಾರತೀಯ ಗೋವಿನ ವರ್ಣನೆ ಊಹೆಗೂ ನಿಲುಕದ್ದು, ಗೋವಿಗೆ ರಾಜಕೀಯ, ಜಾತಿ, ಧರ್ಮ ಗೊತ್ತಿಲ್ಲ. ಗೋವನ್ನು ನಾವು ಹೇಗೆ ರಕ್ಷಿಸುತ್ತೇವೆಯೋ ಹಾಗೆ ನಮ್ಮನ್ನು ಅದು ಕಾಪಾಡುತ್ತದೆ. ಗೋವಿನ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು. [ಚಿತ್ರಗಳು : ಐಸಾಕ್ ರಿಚರ್ಡ್, ಮಂಗಳೂರು]

cow

ಗೋರಕ್ಷಣೆಗೆ ಆಗ್ರಹಿಸಿದ ಬೇಡಿಕೆ ಹಾಗೂ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಕೆ ಮಾಡಲಾಯಿತು. ಶ್ರೀರಾಮ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ವಾಲ್ಕೆ, ಜಿಲ್ಲಾಧ್ಯಕ್ಷ ಜೀವನ್ ನೀರುಮಾರ್ಗ, ಪ್ರಾಂತ ಉಪಾಧ್ಯಕ್ಷ ಕುಮಾರ್ ಮಾಲೆಮಾರ್ ಮುಂತಾದವರು ಪಾಲ್ಗೊಂಡಿದ್ದರು.

sri rama sena

ಭಾಗವಹಿಸಿದ ಸಾಧುಗಳು : ಹರಿದ್ವಾರದ ಪಂಚಾಯತ್ ನಿರಂಜನ್ ಅಖಾಡಾದ ಶ್ರೀ ಸ್ವಾಮಿ ನಾರಾಯಣ ಗಿರಿ, ಉತ್ತರ ಪ್ರದೇಶದ ಕಾಶಿಯ ಶ್ರೀ ರಾಮದಾಸ್ ಸ್ವಾಮಿ, ಕಾಶಿ ಶಂಕರಾಚಾರ್ಯ ಮಠದ ಶ್ರೀ ಓಂಕಾರ ಸ್ವಾಮಿ, ಮಹಾರಾಷ್ಟ್ರದ ಶ್ರೀ ಪ್ರಕಾಶ್ ಜಾಧವ್ ಸ್ವಾಮಿ ಮುಂತಾದವರು ಕಾಲ್ನಡಿಗೆ ಜಾಥಾದಲ್ಲಿ ಭಾಗವಹಿಸಿದ್ದರು.

English summary
Mangaluru Sri Rama Sena organized a campaign rally for protection of cattle and against cow slaughtering under the slogan 'Nannanu Ulisi' on Monday December 15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X