ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈ ಶಾಲೆಯಲ್ಲಿ 11 ಜೋಡಿ ಅವಳಿ ಮಕ್ಕಳು; ಗುರುತಿಸುವುದೇ ಕಷ್ಟ!

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಡಿಸೆಂಬರ್ 01; ಅವಳಿ ಮಕ್ಕಳು ಅಂದರೆ ಎಲ್ಲರಿಗೂ ಖುಷಿ. ಅವಳಿ ಮಕ್ಕಳ ಹಾವಭಾವ, ಅವರಲ್ಲಿ ಕಂಡುಬರುವ ಸಾಮ್ಯತೆ ಎಲ್ಲವೂ ನೋಡುವುದಕ್ಕೆ ಚಂದ. ಮನೆಯಲ್ಲಿ ಅವಳಿಮಕ್ಕಳಿದ್ದರೆ, ಸಂಬಂಧಿಕರಿಗೆ ಇವರಲ್ಲಿ ದೊಡ್ಡವರು ಯಾರು?, ಸಣ್ಣವರು ಯಾರು? ಅಂತಾ ಗುರುತಿಸೋಕೆ ಕಷ್ಟಪಡಬೇಕಾಗುತ್ತದೆ.

ಅಂತಹುದರಲ್ಲಿ ಮಂಗಳೂರಿನ ಶಾಲೆಯೊಂದರಲ್ಲಿ 11 ಅವಳಿ ಮಕ್ಕಳ ಜೋಡಿಗಳಿವೆ. 11ಅವಳಿ ಮಕ್ಕಳ‌ ಜೋಡಿ ಈಗ ಮೋಡಿ ಮಾಡುತ್ತಿವೆ. ಮಂಗಳೂರು ನಗರ ಹೊರವಲಯದ ಕೈರಂಗಳ ಪುಣ್ಯಕೋಟಿ ನಗರದ ಶಾರಾದಾ‌ವಿದ್ಯಾ ಗಣಪತಿ ಶಾಲೆಯಲ್ಲಿ 11 ಅವಳಿ ಮಕ್ಕಳು ಕಲಿಯುತ್ತಿದ್ದಾರೆ. ಈ ವಿದ್ಯಾಸಂಸ್ಥೆಯಲ್ಲಿ ಪ್ರಾಥಮಿಕ ಶಾಲೆಯಿಂದ ಹಿಡಿದು ಪಿಯುಸಿ ತನಕ ತರಗತಿಗಳಿವೆ.

ದಕ್ಷಿಣ ಕನ್ನಡದ ವಿಶೇಷ ಶಾಲೆ; ಹಸಿರ ಬಳ್ಳಿಯೇ ಮೇಲ್ಛಾವಣಿ ದಕ್ಷಿಣ ಕನ್ನಡದ ವಿಶೇಷ ಶಾಲೆ; ಹಸಿರ ಬಳ್ಳಿಯೇ ಮೇಲ್ಛಾವಣಿ

11 ಅವಳಿ ಮಕ್ಕಳ ಪೈಕಿ 4ನೇ ತರಗತಿಯಲ್ಲಿ 3 ಜೋಡಿ, 5ನೇ ತರಗತಿಯಲ್ಲಿ 2 ಜೋಡಿ, 6, 7, 8ನೇ ತರಗತಿಯಲ್ಲಿ ತಲಾ‌ ಒಂದು ಜೋಡಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಎರಡು ಜೋಡಿ ಅವಳಿ ಮಕ್ಕಳು ಕಲಿಯುತ್ತಿದ್ದಾರೆ. ಈ ಅವಳಿ ಜೋಡಿ ಮಕ್ಕಳ ಪೈಕಿ, 4 ಜೋಡಿ ಹೆಣ್ಣು, 4 ಜೋಡಿ‌ ಗಂಡು ಮತ್ತು 3 ಜೋಡಿ ಗಂಡು ಮತ್ತು ಹೆಣ್ಣು ಮಕ್ಕಳದ್ದಾಗಿದೆ.

ಸರ್ಕಾರಿ ಶಾಲೆ ಉಳಿಸಲು ಕೈ ಜೋಡಿಸಿದ ನಟಿ ನೀತು ಸರ್ಕಾರಿ ಶಾಲೆ ಉಳಿಸಲು ಕೈ ಜೋಡಿಸಿದ ನಟಿ ನೀತು

Twins students

4 ನೇ ತರಗತಿಯಲ್ಲಿ ಸಂಜನಾ-ಸಂಜಯ್, ಜ್ಞಾನೇಶ್-ಜಯೇಶ್, ಲತೇಶ್-ಲವೇಶ್ ಎಂಬ ಮೂರು ಅವಳಿ ಮಕ್ಕಳ‌ ಜೋಡಿಯಿದೆ. 5ನೇ ತರಗತಿಯಲ್ಲಿ ಚೈತನ್ಯಾ-ಚಂದನ, ಧನಶ್ರೀ-ಧನುಶ್ ಎಂಬ ಇಬ್ಬರು ಅವಳಿ ಮಕ್ಕಳ ಜೋಡಿಯಿದೆ. 6ನೇ ತರಗತಿಯಲ್ಲಿ ಭವ್ಯಶ್ರೀ-ದಿವ್ಯಶ್ರೀ, 7ನೇ ತರಗತಿಯಲ್ಲಿ ಕೀರ್ತಿ-ಕೀರ್ತನ್ ಅವಳಿ ಜೋಡಿ ಆಗಿದ್ದಾರೆ.

ವಿಡಿಯೋ; ಶಾಲೆ ಆರಂಭ, ವಿದ್ಯಾರ್ಥಿಗಳಿಗೆ ಸ್ವಾಗತ ಕೋರಿದ ಆನೆ ವಿಡಿಯೋ; ಶಾಲೆ ಆರಂಭ, ವಿದ್ಯಾರ್ಥಿಗಳಿಗೆ ಸ್ವಾಗತ ಕೋರಿದ ಆನೆ

ಇನ್ನು ಎಂಟನೇ ತರಗತಿಯಲ್ಲಿ ಸುಜನ್-ಸುಹಾನ್ ಎಂಬ ಅವಳಿ ಜೋಡಿಯಿದ್ದರೆ, 10ನೇ ತರಗತಿಯಲ್ಲಿ ಶ್ರೀಶಾಂತ್ ಮತ್ತು ಸುಷಾಂತ್ ಎಂಬ ಅವಳಿ ಮಕ್ಕಳಿದ್ದಾರೆ. ಪುಣ್ಯಕೋಟಿ ನಗರದ ಶಾರಾದಾ-ವಿದ್ಯಾಗಣಪತಿ ಸಂಸ್ಥೆಯಲ್ಲಿ ಪಿಯುಸಿ ವಾಣಿಜ್ಯ ವಿಭಾಗವನ್ನೂ ನಡೆಸಲಾಗುತಿದ್ದು, ದ್ವಿತೀಯ ಪಿಯುಸಿಯಲ್ಲಿ ಪ್ರಜ್ಞಾ-ಪ್ರೇಕ್ಷಾ ಮತ್ತು ಪ್ರಥಮ ಪಿಯುಸಿಯಲ್ಲಿ ಮೋಕ್ಷಾ-ಮೋಕ್ಷಿತ ಎಂಬ ಅವಳಿ ಜೋಡಿ ಕಲಿಯುತ್ತಿದೆ.

ಕಳೆದ ಶೈಕ್ಷಣಿಕ ವರ್ಷದಲ್ಲಿ 8 ಅವಳಿ ಮಕ್ಕಳು ಈ ಸಂಸ್ಥೆಯಲ್ಲಿ ಕಲಿಯುತ್ತಿದ್ದು, ಈ ಬಾರಿ ಅವಳಿಗಳ ಸಂಖ್ಯೆ11ಕ್ಕೇರಿದೆ. ಹೀಗಾಗಿ ಮಕ್ಕಳನ್ನು ಗುರುತಿಸೋಕೆ ಶಿಕ್ಷಕರೂ ಕಷ್ಟಪಡುವಂತಾಗಿದೆ.

ಈ ಬಗ್ಗೆ ಮಾತನಾಡಿದ ಶಾಲೆಯ ಪ್ರಾಂಶುಪಾಲ ಶ್ರೀ ಹರಿ, "ಪ್ರಸ್ತುತ ಶಾಲೆಯಲ್ಲಿ 961 ಮಕ್ಕಳು ಕಲಿಯುತ್ತಿದ್ದಾರೆ. ಈ ಮಕ್ಕಳ ಪೈಕಿ 11ಅವಳಿ ಜೋಡಿಗಳೂ ಕೂಡಾ ಇದೆ. ರಜೆ ಮುಗಿಸಿ ಶಾಲೆಗೆ ಬಂದ ಮಕ್ಕಳ ಹೆಸರನ್ನು ಪಕ್ಕ ಹೇಳೋಕೆ ನಮಗೂ ಕಷ್ಟ ಆಯಿತು. ಒಂದು ಅವಳಿ ಜೋಡಿಗಳ ಒಬ್ಬ ವಿದ್ಯಾರ್ಥಿಗೆ ಕಛೇರಿಗೆ ಕರೆದು ಏನೋ ಹೇಳಬೇಕಿತ್ತು. ಆತನನ್ನು ಕಛೇರಿಗೆ ಕರೆದು ತುಂಬಾ ಮಾತನಾಡಿದ ಬಳಿಕ ನಾನು ಅವನಲ್ಲ ನನ್ನ ತಮ್ಮ ಅಂತಾ ಹೇಳಿದ. ಈ ರೀತಿಯ ಹಾಸ್ಯಮಯ ಸಂಗತಿಗಳು ನಡೆದಿದೆ. ಮತ್ತು ಶಾಲೆಯ ಹೆಸರು ಶಾರಾದಾ-ವಿದ್ಯಾಗಣಪತಿ ಅಂತಾ ಅವಳಿ ದೇವರ ಹೆಸರು ಇರೋದರಿಂದ, ಈಗ ಶಾಲೆಯಲ್ಲಿ11 ಅವಳಿ ಮಕ್ಕಳ ಜೋಡಿ ಕಲಿಯುತ್ತಿರೋದು ಆಶ್ಚರ್ಯ ಮೂಡಿಸಿದೆ" ಅಂತಾ ಹೇಳಿದ್ದಾರೆ.

ಇನ್ನು ಅವಳಿ ಜೋಡಿಗಳೂ ತಮ್ಮನ್ನು ವಿಶೇಷವಾಗಿ ಗುರುತಿಸಿರೋದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ. ನಾಲ್ಕನೇ ತರಗತಿ ಕಲಿಯುತ್ತಿರುವ ಸಂಜನಾ-ಸಂಜಯ್ ಮಾತನಾಡಿ, "ಎಲ್‌ಕೆಜಿಯಿಂದ ನಾಲ್ಕನೇ ತರಗತಿವರೆಗೆ ಈ ಶಾಲೆಯಲ್ಲಿ ಕಲಿಯುತ್ತಿದ್ದೇವೆ. ನಾವು ಶಾಲೆಯಲ್ಲಿ ಒಟ್ಟಿಗೆ ಕೂರುತ್ತೇವೆ, ಒಟ್ಟಿಗೆ ಆಟ ಆಡುತ್ತೇವೆ, ನಮ್ಮ ಶಾಲೆಯಲ್ಲಿ ನಮ್ಮ ತರನೇ ಇನ್ನೂ ಹತ್ತು ಮಂದಿ ಇರೋದು ಖುಷಿಯಾಗಿದೆ" ಅಂತಾ ಹೇಳುತ್ತಾರೆ.

Mangaluru news

ಒಟ್ಟಿನಲ್ಲಿ ಶಾಲೆಯ ಮಕ್ಕಳ ಮಾತು, ತುಟಾಂಟ ಆಟ ಪಾಠ ಎಲ್ಲವೂ ಚಂದ. ಪುಣ್ಯ ಕೋಟಿನಗರದ ಈ ಶಾಲೆಯಲ್ಲಿ11ಅವಳಿ ಮಕ್ಕಳು ಇರೋದು ಶಾಲೆಯ ಸಂಭ್ರಮವನ್ನು ಹೆಚ್ಚಿಸಿದೆ.

English summary
Sharada Vidyanikethana Public school at Mangaluru has 11 pairs of student twins. For the teachers it's challenge to find student with his name.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X