ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ಗಲಭೆ ಪೊಲೀಸರ ಪೂರ್ವ ನಿಯೋಜಿತ

|
Google Oneindia Kannada News

ಮಂಗಳೂರು, ಡಿಸೆಂಬರ್ 20: ಮಂಗಳೂರಿನಲ್ಲಿ ನಡೆದ ಗಲಭೆಗೆ ಪೊಲೀಸರೇ ನಿಜವಾದ ಕಾರಣ ಎಂದು ಎಂಎಲ್‌ಸಿ ಹರೀಶ್ ಕುಮಾರ್ ಆರೋಪಿಸಿದ್ದಾರೆ.

ಮಂಗಳೂರಿನಲ್ಲಿ ನಡೆದ ಘಟನೆಗೆ ನೇರ ಕಾರಣ, ಮೊದಲು ಜಿಲ್ಲೆಯ ಜನ ಶಾಂತಿ ಕಾಪಾಡಬೇಕು. ನಿನ್ನೆ ನಡೆದ ಘಟನೆಗೆ ಪೊಲೀಸರೇ ಕಾರಣ. ಒಂದು ಸಾವಿರ ಮಕ್ಕಳು ಬಂದು ಪ್ರತಿಭಟನೆಗೆ ಮುಂದಾದರು ಸ್ಲೋಗನ್ ಕೂಡ ಹಾಕಿರಲಿಲ್ಲ ಎಂದು ಹೇಳಿದರು.

'ಇಷ್ಟು ಗುಂಡು ಹಾರಿಸಿಯೂ ಒಬ್ಬನೂ ಸಾಯಲಿಲ್ಲವಲ್ಲ': ವೈರಲ್ ವಿಡಿಯೋ'ಇಷ್ಟು ಗುಂಡು ಹಾರಿಸಿಯೂ ಒಬ್ಬನೂ ಸಾಯಲಿಲ್ಲವಲ್ಲ': ವೈರಲ್ ವಿಡಿಯೋ

ಪೊಲೀಸ್ ಸಿಬ್ಬಂದಿ 12 ಗಂಟೆಯಿಂದ ಗನ್ ಹಿಡಿದು ಕಾಯುತ್ತಿದ್ದು. ಇದು ಪೊಲೀಸರ ಪೂರ್ವ ನಿಯೋಜಿತ ಪ್ಲಾನ್ ಎನ್ನುವುದು ಸತ್ಯ ಎಂದೆನಿಸುತ್ತದೆ.

Mangaluru Riots Is Pre Plan Of Police

ಕೇರಳದಿಂದ ಜನರನ್ನು ತಂದು ತಯಾರಾಗಿದ್ದಾರೆ ಎಂದು ಗೃಹ ಸಚಿವರು ಹೇಳಿದ್ದಾರೆ. ಹೀಗಾಗಿ ಪೊಲೀಸರೇ ಪೂರ್ವ ನಿಯೋಜಿತವಾಗಿ ತಯಾರಾಗಿ ಗಲಭೆ ತೀವ್ರ ಸ್ವರೂಪ ಪಡೆಯಲು ಕಾರಣಕರ್ತರಾದರು ಎಂದು ದೂಷಿಸಿದರು.

ಜನರಿಗೆ ನೋವಾದರೆ ಪ್ರತಿಭಟನೆ ಮಾಡದೆ ಮನೆಯಲ್ಲಿ ಇರಬೇಕಾ ಅದರಲ್ಲೂ ಅವರು ಪಕ್ಷ ಸಂಘಟನೆಯವರಲ್ಲ, ಮಕ್ಕಳು ಪ್ರತಿಭಟಿಸಿದ್ದು, ಬಂದರು ಪೊಲೀಸ್ ಠಾಣೆಯಲ್ಲಿ ಸಿಸಿಟಿವಿ ಇದೆ.

ಮಂಗಳೂರು ಗೋಲಿಬಾರ್; 1 ಕೋಟಿ ಪರಿಹಾರಕ್ಕೆ ಆಗ್ರಹಮಂಗಳೂರು ಗೋಲಿಬಾರ್; 1 ಕೋಟಿ ಪರಿಹಾರಕ್ಕೆ ಆಗ್ರಹ

ಪ್ರತಿಭಟನಾಕಾರರು ಬೆಂಕಿ ಕೊಡೋಕೆ ಬಂದಿಲ್ಲ. ಏನೂ ಮಾಡಿಲ್ಲ. ಪೊಲೀಸರು ಆಸ್ಪತ್ರೆಗೆ ಹೋಗಿ ಲಾಠಿ ಚಾರ್ಜ್ ಮಾಡಿದ್ದಾರೆ ಇದು ಎಲ್ಲಿಯ ನ್ಯಾಯ ಎಂದು ಪ್ರಶ್ನಿಸಿದರು.

English summary
MLC Harish Kumar Alleged that Mangaluru riots is pre plan of police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X