ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗ್ಳೂರು: ಮಹಿಳಾ ದೌರ್ಜನ್ಯ ತಡೆ 'ರಿಂಗ್ ದ ಬೆಲ್' ಅಭಿಯಾನ ಯಶಸ್ವಿ

By Vanitha
|
Google Oneindia Kannada News

ಮಂಗಳೂರು, ನವೆಂಬರ್, 02 : ಮಹಿಳೆಯರ ಮೇಲೆ ನಡೆಯುತ್ತಿರುವ ಹಿಂಸಾತ್ಮಕ ಕೃತ್ಯಗಳ ವಿರುದ್ಧ ಜನರನ್ನು ಎಚ್ಚರಿಸುವ ಸಲುವಾಗಿ ನಗರದ ಎನ್ ಜಿಒ ಸಂಸ್ಥೆ 'ರಿಂಗ್ ದ ಬೆಲ್' ಎಂಬ ಅಭಿಯಾನ ಆರಂಭಿಸಿತ್ತು. ಇದು ನಗರ ಹಾಗೂ ಹಳ್ಳಿಗರು ಸೇರಿದಂತೆ ಸುಮಾರು 4,000 ಜನರನ್ನು ತಲುಪಿ ಯಶಸ್ವಿಯಾಗಿದೆ.

ರಿಂಗ್ ದ ಬೆಲ್ ಅಭಿಯಾನವು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮತ್ತು ಮಹಿಳೆ ಹಾಗೂ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ 20 ಗ್ರಾಮ ಪಂಚಾಯತ್ ಗಳ ಸಹಯೋಗದೊಂದಿಗೆ 10 ದಿನ ನಡೆದಿದ್ದು, ಮದ್ದುಶೇಡೆ ಗ್ರಾಮ ಪಂಚಾಯತಿಯಿಂದ ಆರಂಭವಾದ ಅಭಿಯಾನ ನವೆಂಬರ್ 1ರ ವೇಳೆಗೆ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದವರೆಗೆ ತಲುಪಿದೆ ಎಂದು ಎನ್ ಜಿಒ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.[ಅತ್ಯಾಚಾರ ತಡೆಗೆ ನಾನು ಸಹಿ ಹಾಕಾಯ್ತು, ನಿಮ್ಮದೊಂದು ಸಹಿ ಸೇರಿಸಿ]

Mangaluru: 'Ring the bell' campaign is the voice of end violence of women

ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಕಣ್ಮಣಿ,' ಗುಲ್ಬರ್ಗಾ, ಕೊಪ್ಪಳ, ರಾಯಚೂರು, ಮೈಸೂರು, ಧಾರವಾಡ, ಉಡುಪಿ, ಶಿವಮೊಗ್ಗ, ಮಂಡ್ಯ, ದಕ್ಷಿಣ ಕನ್ನಡ, ತುಮಕೂರು, ಬೆಂಗಳೂರು ಸೇರಿಕೊಂಡು ಈ ಅಭಿಯಾನದ ಕುರಿತಾಗಿ 2007ರಲ್ಲಿ ಕಾರ್ಯನಿರ್ವಹಿಸಲಾಗಿತ್ತು. ಈ ಅಭಿಯಾನಕ್ಕೆ ಹಲವಾರು ಎನ್ ಜಿಒ, ಸಿಬಿಒ, ಅಂಗನವಾಡಿ ಕಾರ್ಯಕರ್ತರು, ಶಿಕ್ಷಕಿಯರು ಹೀಗೆ ಹಲವಾರು ಮಂದಿ ಕೈಜೋಡಿಸಿದ್ದಾರೆ.

ಬೆಂಗಳೂರು, ಉಡುಪಿ, ತುಮಕೂರು ಸೇರಿದಂತೆ 23,500 ಕ್ಕೂ ಹೆಚ್ಚು ಮಂದಿ ಮಹಿಳಾ ಹಿಂಸಾತ್ಮಕ ಕೃತ್ಯದ ವಿರುದ್ಧ ದನಿ ಎತ್ತಿದ್ದಾರೆ. ಅಲ್ಲದೇ ಈ ಅಭಿಯಾನದ ಮೂಲಕ ಮಹಿಳಾ ಪರ ಇರುವ ಕಾನೂನು, ಕಾಯ್ದೆಗಳ ಮಾಹಿತಿ ನೀಡಲಾಗಿದೆ' ಎಂದು ರಿಂಗ್ ದ ಬೆಲ್ ಅಭಿಯಾನದ ಸಂಪೂರ್ಣ ಮಾಹಿತಿ ನೀಡಿದರು.[ಕುಡಿತದ ಹುಚ್ಚು ಗಂಡನನ್ನೇ ಕೊಲ್ಲುವಂತೆ ಮಾಡುತ್ತಾ?]

ಒಟ್ಟಿನಲ್ಲಿ ಈ ಅಭಿಯಾನದ ಮೂಲಕ ಹಿಂಸಾತ್ಮಕ ಕೃತ್ಯದ ಬಗ್ಗೆ ವಿಚಾರಿಸಿದಾಗ, ಸುಮಾರು 70% ವಿದ್ಯಾವಂತರು ಮಹಿಳೆ ಮೇಲೆ ನಡೆಯುತ್ತಿರುವ ಸಾಮಾಜಿಕ ಸಮಸ್ಯೆಯಾಗಿ ಮಾರ್ಪಡುತ್ತಿದೆ ಎಂದು ಒಪ್ಪಿಕೊಂಡಿದ್ದಾರೆ. 41% ಲಿಂಗ ಅಸಮಾನತೆಯ ಕಾರಣಕ್ಕಾಗಿ ಹಿಂಸೆಗಳು ನಡೆಯುತ್ತಿದೆ ಎಂದಿದ್ದಾರೆ. ಅಲ್ಲದೇ ಗ್ರಾಮೀಣ ಮಹಿಳೆಯರು ಮದ್ಯಪಾನವೇ ಮಹಿಳಾ ಹಿಂಸೆಗೆ ಮೂಲ ಕಾರಣ ಎಂದು ತಿಳಿದು ಬಂದಿದೆ ಎಂದು ಹೇಳಿದರು.

English summary
Mangaluru: 'Ring the bell' campaign is the voice of end violence of women. It started from Mudushedde gram panchayat to Kuvettu village, Beltangady Taluk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X