ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾಗೋ ಹೀಗೋ ಹತ್ತು ವರ್ಷದ ನಂತರ ಉದ್ಘಾಟನೆ ಕಂಡಿತು ಮಂಗಳೂರು ಪಂಪ್ ವೆಲ್ ಮೇಲ್ಸೇತುವೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜನವರಿ 31: ಹತ್ತು ವರ್ಷದ ಹಿಂದೆ ಆರಂಭಗೊಂಡಿದ್ದ ಪಂಪ್ ವೆಲ್ ಫ್ಲೈ ಓವರ್ ಕಾಮಗಾರಿ ಕೊನೆಗೂ ಮುಕ್ತಾಯಗೊಂಡು ಇಂದು ಉದ್ಘಾಟನೆ ಕಂಡಿದೆ. ಪಂಪ್ ವೆಲ್ ಫ್ಲೈ ಓವರ್ ಅನ್ನು ಇಂದು ಸಂಸದ ನಳಿನ್ ಕುಮಾರ ಕಟೀಲ್ ಉದ್ಘಾಟಿಸಿದ್ದಾರೆ.

ಈಚೆಗೆ ಮಂಗಳೂರಿನ ಪಂಪ್ ವೆಲ್ ಫ್ಲೈಓವರ್ ಕಾಮಗಾರಿ ವಿಷಯ ಹೆಚ್ಚು ಚರ್ಚೆಯಾಗಿತ್ತು. ಕೇವಲ 600 ಮೀಟರ್ ಉದ್ದದ ಮೇಲ್ಸೇತುವೆ ಕಾಮಗಾರಿ ಆರಂಭಗೊಂಡು ಹತ್ತು ವರ್ಷ ಕಳೆದರೂ ಮುಗಿಯದೇ ಇದ್ದದ್ದು ಹಲವರ ಆಕ್ರೋಶಕ್ಕೂ ಎಡೆಮಾಡಿಕೊಟ್ಟಿತ್ತು. ಇದೇ ಕಾರಣಕ್ಕೆ ಹಲವು ಪ್ರತಿಭಟನೆ, ವಿರೋಧಗಳೂ ವ್ಯಕ್ತವಾಗಿತ್ತು. ಕೊನೆಗೂ ಇಂದು ಫ್ಲೈ ಓವರ್ ಮುಕ್ತವಾಯಿತು.

 2010ರಲ್ಲಿ ಆರಂಭಗೊಂಡಿದ್ದ ಕಾಮಗಾರಿ

2010ರಲ್ಲಿ ಆರಂಭಗೊಂಡಿದ್ದ ಕಾಮಗಾರಿ

ಮಂಗಳೂರು ಪ್ರವೇಶಿಸುತ್ತಿದ್ದಂತೆ ಸಿಗುವ ಪಂಪ್ ವೆಲ್ ಮಂಗಳೂರಿನ ಕಳಶವಿದ್ದಂತೆ. ಅದಕ್ಕಾಗಿ 10 ವರ್ಷದ ಹಿಂದೆ ಇಲ್ಲಿ ಸರ್ಕಲ್ ನ ಮಧ್ಯೆ ಕಳಶದ ಬೃಹತ್ ಮಾದರಿಯನ್ನು ಇಡಲಾಗಿತ್ತು. 2010ರಲ್ಲಿ ಆರಂಭವಾದ ಮಂಗಳೂರು ಪಂಪ್ ವೆಲ್ ಫ್ಲೈಓವರ್ ಕೆಲಸಕ್ಕೆ ಅಂದಿನ ನೂತನ ಸಂಸದ ನಳಿನ್ ಕುಮಾರ್ ಕಟೀಲ್ ಶಂಕುಸ್ಥಾಪನೆ ಮಾಡಿದ್ದರು. ಕೇವಲ 600 ಮೀಟರ್ ಉದ್ದದ ಫ್ಲೈಓವರ್ ಕಾಮಗಾರಿ 10 ವರ್ಷವಾದರೂ ಪೂರ್ಣಗೊಂಡಿರಲಿಲ್ಲ. ಇದು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಳಿನ್ ವಿರುದ್ಧ ಭಾರೀ ಆಕ್ಷೇಪಕ್ಕೂ ಕಾರಣವಾಗಿತ್ತು.

ಕುಂಟುತ್ತಾ, ತೆವಳುತ್ತಾ ಸಾಗಿದ ಮಂಗಳೂರು ಪಂಪ್​ವೆಲ್ ಫ್ಲೈಓವರ್ ಕೊನೆಗೂ ಸಂಚಾರಕ್ಕೆ ಮುಕ್ತಕುಂಟುತ್ತಾ, ತೆವಳುತ್ತಾ ಸಾಗಿದ ಮಂಗಳೂರು ಪಂಪ್​ವೆಲ್ ಫ್ಲೈಓವರ್ ಕೊನೆಗೂ ಸಂಚಾರಕ್ಕೆ ಮುಕ್ತ

 ಕಾಮಗಾರಿ ಚುರುಕುಗೊಳಿಸುವಂತೆ ಹಲವು ಬಾರಿ ಆಗ್ರಹ

ಕಾಮಗಾರಿ ಚುರುಕುಗೊಳಿಸುವಂತೆ ಹಲವು ಬಾರಿ ಆಗ್ರಹ

ಈ ಪಂಪ್ ವೆಲ್ ಕಾಮಗಾರಿ ಅವ್ಯವಸ್ಥೆ ವಿರುದ್ಧ ನಿತ್ಯ ಸವಾರರು ಶಾಪ ಹಾಕುತ್ತಾ ತಿರುಗುವಂತಾಗಿತ್ತು. ಅದಕ್ಕೆ ಕಾಮಗಾರಿಯಿಂದ ಇಲ್ಲಿ ನಿತ್ಯ ಉಂಟಾಗುತ್ತಿದ್ದ ನರಕ ದರ್ಶನ ಮತ್ತು ದೂಳಿನಿಂದ ಆಗುತ್ತಿದ್ದ ಹಿಂಸೆ ಕಾರಣವಾಗಿತ್ತು. ಇಡೀ ಮಂಗಳೂರಿಗರು ಪಕ್ಷಬೇಧವಿಲ್ಲದೇ ಕಾಮಗಾರಿ ಚುರುಕುಗೊಳಿಸುವಂತೆ ಆಗ್ರಹಿಸಿದ್ದರು. ಇದೇ ಕಾರಣಕ್ಕೆ ನಳಿನ್ ಕುಮಾರ್ ವಿರುದ್ಧ ಟ್ರೋಲ್ ಮಾಡಲು ಅರಂಭಿಸಿದ್ದರು. ಈ ಮಧ್ಯೆ ಮತ್ತೆ ಸಂಸದರಾಗಿ ಆಯ್ಕೆಯಾದ ನಳಿನ್ ಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದರು. ಈ ಪಂಪ್ ವೆಲ್ ವಿಚಾರ ಇದರೊಂದಿಗೆ ರಾಜ್ಯದ ಚರ್ಚಾ ವಸ್ತುವಾಯಿತು.

 600 ಮೀಟರ್ ಫ್ಲೈ ಓವರ್ ಗೆ ಹತ್ತು ವರ್ಷ?

600 ಮೀಟರ್ ಫ್ಲೈ ಓವರ್ ಗೆ ಹತ್ತು ವರ್ಷ?

600 ಮೀಟರ್ ಫ್ಲೈಓವರ್ ಮಾಡಲು 10 ವರ್ಷ ಸಾಕಾಗಿಲ್ಲವೇ ಎಂಬ ವಿರೋಧ ಆರಂಭವಾಯಿತು. ಇದರಿಂದ ತೀವ್ರ ಮುಖಭಂಗ ಎದುರಿಸಿದ್ದ ನಳಿನ್ ಕುಮಾರ್ ಕಟೀಲ್ ಕಳೆದ ಡಿಸೆಂಬರ್ 31ಕ್ಕೆ ಗಡುವು ನೀಡಿದ್ದರು. ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಗುತ್ತಿಗೆ ಪಡೆದಿದ್ದ ನವಯುಗ ಕಂಪೆನಿ ಇದನ್ನು ಪೂರ್ಣಗೊಳಿಸದೇ ಮತ್ತೊಮ್ಮೆ ನಳೀನ್ ಕುಮಾರ್ ಮರ್ಯಾದೆ ಹೋಗುವಂತೆ ಮಾಡಿದ್ದರು. ಡಿಸೆಂಬರ್ 31ರಂದು ಪತ್ರಿಕಾಗೋಷ್ಠಿ ನಡೆಸಿದ್ದ ಕಟೀಲ್, ನವಯುಗ ಟೋಲ್ ನಲ್ಲಿ ಶುಲ್ಕ ಕೊಡದೇ ಹೋಗಿ ಎಂದು ಆದೇಶಿಸಿ ಪ್ರತಿಭಟನೆಯನ್ನು ಕೂಡ ಮಾಡಿಸಿದರು. ಅಂದೇ ಜನವರಿ ತಿಂಗಳಾಂತ್ಯಕ್ಕೆ ಗಡುವು ಕೂಡ ನೀಡಿದರು. ಈಗ ಜನವರಿ ಅಂತ್ಯದ ವೇಳೆಗೆ ಅಂತೂ ಇಂತೂ ಫ್ಲೈ ಕಾಮಗಾರಿ ಮುಕ್ತಾಯವಾಗಿ ಉದ್ಘಾಟನೆ ಕೂಡ ಆಗಿದೆ.

ಇದು ಸುಳ್ಳು ಸುದ್ದಿಯಲ್ಲ; ಶುಕ್ರವಾರ ಪಂಪ್‌ವೆಲ್ ಫ್ಲೈ ಓವರ್ ಉದ್ಘಾಟನೆಇದು ಸುಳ್ಳು ಸುದ್ದಿಯಲ್ಲ; ಶುಕ್ರವಾರ ಪಂಪ್‌ವೆಲ್ ಫ್ಲೈ ಓವರ್ ಉದ್ಘಾಟನೆ

 ಜನರು, ವಾಹನ ಸವಾರರಲ್ಲಿ ಖುಷಿ

ಜನರು, ವಾಹನ ಸವಾರರಲ್ಲಿ ಖುಷಿ

ಸದ್ಯ ಪಂಪ್ ವೆಲ್ ಫ್ಲೈಓವರ್ ಕಾಮಗಾರಿ ಮುಗಿದಿರುವುದು ವಾಹನ ಸವಾರರು ಮತ್ತು ಜನರಲ್ಲಿ ಖುಷಿ ತಂದಿದೆ. ಈ ದೂಳಿನಿಂದ, ಟ್ರಾಫಿಕ್ ಕಿರಿಕಿರಿಯಿಂದ ಮುಕ್ತಿ ಸಿಕ್ಕತಲ್ಲ ಎಂದು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ. ಆದರೆ ಜನರಲ್ಲಿ ಇಷ್ಟು ವರ್ಷ ಅನುಭವಿಸಿದ ಯಾತನೆ ಮಾತ್ರ ಇನ್ನು ಮಾಸಿಲ್ಲ. 2013ರಕ್ಕೆ ಮುಗಿಯಬೇಕಿದ್ದ ಕಾಮಗಾರಿ ಈಗಲಾದರೂ ಮುಗಿತಲ್ಲ ಅಷ್ಟೆ ಸಂತೋಷ ಎಂದು ಹೇಳುತ್ತಿದ್ದಾರೆ. ಆದರೆ ಫ್ಲೈಓವರ್ ಬದಿಗಳಲ್ಲಿ ಹಾಗೂ ಕೆಳ ಭಾಗದಲ್ಲಿ ಇನ್ನೂ ಹೆಚ್ಚಿನ ಕೆಲಸವಿದ್ದು ಅದು ಮುಗಿದರೆ ಮಾತ್ರ ಅಚ್ಚುಕಟ್ಟಾಗುತ್ತದೆ.

ಮೇಲ್ಸೇತುವೆ ಅರ್ಧಂಬರ್ಧ ಕಾಮಗಾರಿ; ತಲಪಾಡಿ ಟೋಲ್ ನಿರಾಕರಣೆಮೇಲ್ಸೇತುವೆ ಅರ್ಧಂಬರ್ಧ ಕಾಮಗಾರಿ; ತಲಪಾಡಿ ಟೋಲ್ ನಿರಾಕರಣೆ

English summary
The Mangaluru Pump Well Fly Over works, which started over ten years ago is inaugurated today by MP Nalin Kumar Kateel
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X