ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ಪಬ್ ದಾಳಿ: ಆರೋಪಿಗಳು ಖುಲಾಸೆಗೊಳ್ಳಲು ಕಾರಣಗಳು

By Manjunatha
|
Google Oneindia Kannada News

ಮಂಗಳೂ, ಮಾರ್ಚ್‌ 17: ಮಂಗಳೂರಿನ ಬಲ್ಮಠ ರಸ್ತೆಯ ಅಮ್ನೇಸಿಯಾ ಪಬ್ ದಾಳಿ ಆರೋಪಿಗಳು ಖುಲಾಸೆಗೊಳ್ಳಲು ಪ್ರಾಸಿಕೂಷನ್‌ ಹಾಗೂ ತನಿಕೆಯಲ್ಲಿನ ಬೇಜವಬ್ದಾರಿ ತನವೇ ಕಾರಣ ಎಂದು ಎಲ್ಲಡೆಯಿಂದ ಟೀಕೆಗಳು ವ್ಯಕ್ತವಾಗಿದ್ದು, ಕೂಡಲೇ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಬೇಕು ಎಂದು ಒತ್ತಾಯ ಸಹ ವ್ಯಕ್ತವಾಗುತ್ತಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಅಂದು ನಡೆದ ಘಟನೆಯ ವಿಡಿಯೋ ತುಣುಕುಗಳು, ಛಾಯಾಚಿತ್ರಗಳು ಮತ್ತು ಹಲ್ಲೆಗೆ ಒಳಗಾದ ಮಹಿಳೆಯರನ್ನು ಸಾಕ್ಷ್ಯವಾಗಿ ಹಾಜರುಪಡಿಸದೇ ಇರುವುದೇ ಆರೋಪಿಗಳು ಖುಲಾಸೆಗೊಳ್ಳಲು ಕಾರಣ. ತೀರ್ಪಿನಲ್ಲಿ ಸಹ 'ತನಿಖೆ ಮತ್ತು ವಿಚಾರಣೆಯ ಎಲ್ಲ ಹಂತಗಳಲ್ಲಿ ಪ್ರಾಸಿಕ್ಯೂಷನ್‌ ಆರೋಪ ಸಾಬೀತು ಮಾಡಲು ಸಂಪೂರ್ಣ ವಿಫಲವಾಗಿವೆ' ಎಂದು ಉಲ್ಲೇಖಿಸಲಾಗಿರುವುದು ಗಮನಾರ್ಹ.

2009ರ ಮಂಗಳೂರು ಪಬ್ ದಾಳಿ ಪ್ರಕರಣ: 25 ಆರೋಪಿಗಳು ಖುಲಾಸೆ2009ರ ಮಂಗಳೂರು ಪಬ್ ದಾಳಿ ಪ್ರಕರಣ: 25 ಆರೋಪಿಗಳು ಖುಲಾಸೆ

ತನಿಖಾ ಲೋಪ ಹಾಗೂ ಆರೋಪಿಗಳು ಖುಲಾಸೆಗೊಳ್ಳಲು ಕಾರಣಗಳನ್ನು ತಿಳಿದುಕೊಳ್ಳಲು ತ್ವರಿತವಾಗಿ ವರದಿ ನೀಡುವಂತೆ ಕಮಿಷನರ್ ಟಿ.ಆರ್.ಪ್ರಕಾಶ್ ಅವರು ಪ್ರಾಸಿಕೂಷನ್‌ಗೆ ಪತ್ರ ಬರೆದಿದ್ದು, ವರದಿ ಬಂದ ನಂತರ ಮುಂದಿನ ನಡೆಯ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದಿದ್ದಾರೆ.

mangaluru pub attack: commissioner asks for detail report

ಘಟನೆ ಕುರಿತ ಹಲವು ವಿಡಿಯೋಗಳು, ಛಾಯಾಚಿತ್ರಗಳು ಲಬ್ಯವಿದ್ದರೂ ಸಹ ನ್ಯಾಯಾಲಯಕ್ಕೆ ಸಾಕ್ಷಿಯಾಗಿ ನೀಡಿರಲೇ ಇಲ್ಲ, ಅಲ್ಲದೆ ಪಬ್ ಮಾಲೀಕ ಹಾಗೂ ಪ್ರತ್ಯಕ್ಷ ದರ್ಶಿಗಳೂ ಸಹಮ ನ್ಯಾಯಾಲಯದಲ್ಲಿ ವ್ಯತಿರಿಕ್ತ ಹೇಳಿಕೆ ನೀಡಿದ ಕಾರಣ ಆರೋಪಿಗಳ ಅಪರಾಧ ಸಾಬೀತಾಗಲಿಲ್ಲ.

2009ರ ಮಂಗಳೂರು ಪಬ್ ದಾಳಿ ಕೇಸ್ : ಮಹಿಳೆಯರ ಬಗ್ಗೆ ಮಾತನಾಡಿದ ಶೋಭಾ ಕರಂದ್ಲಾಜೆ2009ರ ಮಂಗಳೂರು ಪಬ್ ದಾಳಿ ಕೇಸ್ : ಮಹಿಳೆಯರ ಬಗ್ಗೆ ಮಾತನಾಡಿದ ಶೋಭಾ ಕರಂದ್ಲಾಜೆ

ಪೊಲೀಸರು ಹೊರತುಪಡಿಸಿದರೆ ದೂರುದಾರರು, ಸಂತ್ರಸ್ಥರು, ಪ್ರತ್ಯಕ್ಷದರ್ಶಿಗಳು ಯಾರೊಬ್ಬರೂ ಸಹ ಆರೋಪಿಗಳನ್ನು ಹಾಗೂ ಸಂಘಟನೆಯನ್ನು ಗುರುತಿಸಲಿಲ್ಲ ಎಂಬುದು ಪ್ರಾಸಿಕ್ಯೂಷನ್‌ನ ಬಹು ಮುಖ್ಯ ಹಿನ್ನಡೆಯಾಯಿತು.

English summary
Debate going that due to week prosecution and investigation Mangaluru pub attack accused free from charges. So the Mangaluru Police commissioner asks for detail report about the hole prosecution and investigation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X