ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಕ್ರಮ ಗೋ ಸಾಗಾಟಗಾರರಿಗೆ ಮಂಗಳೂರು ಪೊಲೀಸರ ವಾರ್ನಿಂಗ್

|
Google Oneindia Kannada News

ಮಂಗಳೂರು, ಜುಲೈ 3: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಅಕ್ರಮ ಗೋಸಾಗಾಟಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಮುಂದಾಗಿದೆ. ಅಕ್ರಮ ಗೋಸಾಗಾಟಗಾರರ ಹೆಡೆ ಮುರಿಕಟ್ಟಲು ಮಂಗಳೂರು ನಗರ ಪೊಲೀಸರು ಪಣತೊಟ್ಟಿದ್ದು, ಈ ನಿಟ್ಟಿನಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಅಕ್ರಮ ಗೋಸಾಗಾಟಗಾರರ ಪರೇಡ್ ನಡೆಸಿದ್ದಾರೆ.

 ಗೋವುಗಳ ಅಕ್ರಮ ಸಾಗಾಟ, ಹಲ್ಲೆ ಪ್ರಕರಣ; 6 ಜನರ ಬಂಧನ ಗೋವುಗಳ ಅಕ್ರಮ ಸಾಗಾಟ, ಹಲ್ಲೆ ಪ್ರಕರಣ; 6 ಜನರ ಬಂಧನ

ನಗರದ ಇಂಡೋರ್ ಕ್ರೀಡಾಂಗಣದಲ್ಲಿ ದನಕಳ್ಳರ ಪರೇಡ್ ನಡೆಸುವ ಮೂಲಕ ಎಚ್ಚರಿಕೆ ನೀಡಲಾಗಿದೆ. ಮಂಗಳೂರು ವ್ಯಾಪ್ತಿಯ ಒಟ್ಟು 102 ಅಕ್ರಮ‌ ಗೋಸಾಗಾಟಗಾರರು ಪರೇಡ್ ನಲ್ಲಿ ಭಾಗವಹಿಸಿದ್ದು, ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ.

mangaluru police warned illegal cattle transporters

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಅಕ್ರಮ ಗೋಸಾಗಟ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದನ್ನು ಹತ್ತಿಕ್ಕಲು ಈಗಾಗಲೇ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರ ಹೊರತಾಗಿಯೂ ಕಳ್ಳತನ ಮಾಡಿದರೆ ಪೊಲೀಸ್ ಪವರ್ ತೋರಿಸಬೇಕಾಗುತ್ತದೆ ಎಂದು ವಾರ್ನಿಂಗ್ ನೀಡಿದ್ದಾರೆ. ವಿಶ್ವ ಹಿಂದೂ ಪರಿಷತ್ ಜಿಲ್ಲೆಯಾದ್ಯಂತ ಅಕ್ರಮ ಗೋಸಾಗಾಟವನ್ನು ವಿರೋಧಿಸಿ ಪ್ರತಿಭಟನೆ ಕೈಗೊಂಡಿದ್ದು, ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

English summary
Mangaluru police commissioner Sandeep Patil warned illegal cattle transporters and also conducted a parade of illegal cattle transporters in indoor stadium at the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X