ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು : ಟಿಂಟೆಡ್ ಗ್ಲಾಸ್ ಇದ್ದರೆ ದಂಡ ಕಟ್ಟಬೇಕು

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಆಗಸ್ಟ್ 01 : ಮಂಗಳೂರು ಸಂಚಾರಿ ಪೊಲೀಸರು ಟಿಂಟ್ ಮತ್ತು ಕೂಲಿಂಗ್ ಪೇಪರ್ ತೆರವಿಗೆ ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ. ಒಂದು ವಾರಗಳ ಕಾಲ ಈ ವಿಶೇಷ ಕಾರ್ಯಾಚರಣೆ ನಡೆಯಲಿದೆ.

ಸುಪ್ರೀಂಕೋರ್ಟ್ ಆದೇಶದಂತೆ ವಾಹನಗಳಿಗೆ ಅಳವಡಿಸಿರುವ ಟಿಂಟ್, ಕೂಲಿಂಗ್ ಪೇಪರ್ ತೆರವುಗೊಳಿಸಲು ಮಂಗಳೂರು ನಗರದ ವ್ಯಾಪ್ತಿಯಲ್ಲಿ ಈ ವಿಶೇಷ ಅಭಿಯಾನ ಆರಂಭಿಸಲಾಗಿದೆ. ಅಪರಾಧ ಕೃತ್ಯಗಳಲ್ಲಿ ಭಾಗವಹಿಸುವವರು ಪೊಲೀಸರಿಂದ ತಪ್ಪಿಸಿಕೊಳ್ಳಲು ವಾಹನಗಳ ಗಾಜುಗಳಿಗೆ ಹೆಚ್ಚಿನ ಪ್ರಮಾಣದ ಟಿಂಟ್, ಕೂಲಿಂಗ್ ಪೇಪರ್ ಅಳವಡಿಸುತ್ತಿದ್ದಾರೆ.[ವಾಹನಗಳಲ್ಲಿ ಟಿಂಟೆಡ್ ಗ್ಲಾಸ್ ಇದ್ದರೆ ದಂಡ]

Mangaluru Police launch drive against tinted glasses in vehicles

ವಿಶೇಷ ಅಭಿಯಾನದ ಬಗ್ಗೆ ಮಾಹಿತಿ ನೀಡಿರುವ ನಗರ ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್ ಅವರು, 'ಮೋಟಾರು ವಾಹನಗಳ ನಿಯಮ 1989ರ ಪ್ರಕಾರ ವಾಹನದ ಹಿಂದೆ ಮತ್ತು ಮುಂದಿನ ಗಾಜುಗಳು, ಕಿಟಕಿಗಳ ಗಾಜುಗಳು ಶೇ. 70ರಷ್ಟು ಪಾರದರ್ಶಕವಾಗಿರಬೇಕು. ಯಾವುದೇ ವಾಹನಕ್ಕೆ ಇದರಿಂದ ವಿನಾಯಿತಿ ನೀಡುವುದಿಲ್ಲ' ಎಂದರು.[ಬಣ್ಣದ ಪೇಪರ್ರೂ ಕೀಳ್ತಾರೆ, ದುಡ್ಡೂ ಕೀಳ್ತಾರೆ]

ಸರ್ಕಾರಿ ಅಥವಾ ಖಾಸಗಿ ವಾಹನಗಳಿರಲಿ ನಿಯಮಗಳಿಗೆ ವಿರುದ್ಧವಾಗಿ ಟಿಂಟ್, ಕೂಲಿಂಗ್ ಪೇಪರ್ ಅಳವಡಿಸಿಕೊಂಡು ಸಂಚರಿಸುತ್ತಿದ್ದರೆ ದಂಡ ಹಾಕಲಾಗುತ್ತದೆ. ಸಂಚಾರಿ ಪೊಲೀಸರೇ ಕೂಲಿಂಗ್ ಪೇಪರ್ ತೆಗೆಯಲಿದ್ದಾರೆ.[ನಟ ದುನಿಯಾ ವಿಜಿಗೆ 100 ರೂ. ದಂಡ!]

ನಗರಗಳಲ್ಲಿ ಇತ್ತೀಚಿನ ದಿನಗಳಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತಿದ್ದು ಅಪರಾಧ ತಡೆಗಾಗಿ ನಗರದ ಆಯ್ದ ಸ್ಥಳಗಳಲ್ಲಿ ಈಗಾಗಲೇ ಸಿಸಿಟಿವಿ ಆಳವಡಿಕೆ ಮಾಡಲಾಗಿದೆ. ಈಗ ವಾಹನಗಳ ಟಿಂಟ್, ಕೂಲಿಂಗ್ ಪೇಪರ್ ಅಳವಡಿಕೆಯನ್ನು ತಗೆಯಲಾಗುತ್ತಿದೆ.

English summary
The Mangaluru city police launched an special drive on Monday to enforce removal of tint films on vehicles as per the directions of Supreme Court of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X