ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶ್ವಕಪ್ ಕ್ರಿಕೆಟ್: ಮಂಗಳೂರಿನಲ್ಲಿ ಬೆಟ್ಟಿಂಗ್ ಗೆ ಪೊಲೀಸರ ಖಡಕ್ ಎಚ್ಚರಿಕೆ

|
Google Oneindia Kannada News

ಮಂಗಳೂರು, ಮೇ 31: ವಿಶ್ವಕಪ್ ಕ್ರಿಕೆಟ್ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ದೊಡ್ಡ ಮಟ್ಟದಲ್ಲಿ ಬೆಟ್ಟಿಂಗ್ ದಂಧೆಯ ಚಟುವಟಿಕೆಗಳೂ ಆರಂಭಗೊಳ್ಳುತ್ತವೆ. ಆದ್ದರಿಂದ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗಳು ಶುರುವಾಗುತ್ತಿದ್ದಂತೆ ಬೆಟ್ಟಿಂಗ್ ವಿರುದ್ಧ ಮಂಗಳೂರು ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಫಲಿತಾಂಶಕ್ಕೆ ಕ್ಷಣಗಣನೆ; ಕರಾವಳಿಯಲ್ಲಿ ಗರಿಗೆದರಿದ ಎಲೆಕ್ಷನ್ ಬೆಟ್ಟಿಂಗ್ಫಲಿತಾಂಶಕ್ಕೆ ಕ್ಷಣಗಣನೆ; ಕರಾವಳಿಯಲ್ಲಿ ಗರಿಗೆದರಿದ ಎಲೆಕ್ಷನ್ ಬೆಟ್ಟಿಂಗ್

ಈ ಹಿಂದೆ ಐಪಿಎಲ್ ಪಂದ್ಯಾವಳಿಗಳು ಆರಂಭವಾಗುವ ಮೊದಲೇ ಸಂದೀಪ್ ಪಾಟೀಲ್ ಬೆಟ್ಟಿಂಗ್ ದಂಧೆ ವಿರುದ್ಧ ಟ್ವೀಟ್ ‌ಮೂಲಕ ಎಚ್ಚರಿಸಿದ್ದರು. ಆ ಬಳಿಕ ಪೊಲೀಸ್ ತಂಡಗಳನ್ನು ಕಾರ್ಯಾಚರಣೆಗಿಳಿಸಿ 18 ಪ್ರಕರಣಗಳನ್ನು ಪತ್ತೆ ಹಚ್ಚಿ ಬೆಟ್ಟಿಂಗ್ ದಂಧೆಕೋರರಿಗೆ ಭಯ ಹುಟ್ಟಿಸಿದ್ದರು. ಈಗ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗಳು ಆರಂಭವಾಗಿರುವುದರಿಂದ ಬೆಟ್ಟಿಂಗ್ ಹಾವಳಿ ತಡೆಗೆ ಮಂಗಳೂರು ಪೊಲೀಸರು ಭಾರೀ ಕಟ್ಟೆಚ್ಚರ ವಹಿಸಿದ್ದಾರೆ. ಪೊಲೀಸ್ ಕಮಿಷನರ್ ಮತ್ತೆ ಎಚ್ಚರಿಕೆ ನೀಡಿದ್ದಾರೆ.

 ಕರಾವಳಿಯಲ್ಲಿ ಕಾಣಿಸುತ್ತಿಲ್ಲ ಬೆಟ್ಟಿಂಗ್ ಹವಾ, ಕಾರಣ ಇದೇನಾ? ಕರಾವಳಿಯಲ್ಲಿ ಕಾಣಿಸುತ್ತಿಲ್ಲ ಬೆಟ್ಟಿಂಗ್ ಹವಾ, ಕಾರಣ ಇದೇನಾ?

ಲೋಕಸಭಾ ಚುನಾವಣೆಯ ಮತಗಳ ಎಣಿಕೆ ದಿನ ಸಮೀಪಿಸುತ್ತಿದ್ದಂತೆ ಫಲಿತಾಂಶದ ಬಗ್ಗೆ ಬೆಟ್ಟಿಂಗ್ ನಡೆಯುವ ಸಾಧ್ಯತೆಯನ್ನು ಗಮನಿಸಿ ಈ ಬಗ್ಗೆ ಎಚ್ಚರಿಕೆಯ ಸಂದೇಶವನ್ನು ಪೊಲೀಸ್‌ ಆಯುಕ್ತರು ನೀಡಿದ್ದರು.

Mangaluru police commissioner warns against cricket betting

ಬೆಟ್ಟಿಂಗ್ ದಂಧೆಯಲ್ಲಿ ದೊಡ್ಡ ಮೊತ್ತದ ಹಣದ ವ್ಯವಹಾರ ನಡೆಯುತ್ತದೆ. ಕೆಲವರು ಹಣ ಗಳಿಸುವ, ಕೆಲವರು ಹಣ ಕಳೆದುಕೊಳ್ಳುವ ಈ ವ್ಯವಹಾರ ಸಾಮಾಜಿಕ ಸ್ವಾಸ್ಥ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಹಲವು ಅನಪೇಕ್ಷಿತ ಘಟನೆಗಳಿಗೂ ಇದು ಕಾರಣವಾಗುವ ಸಾಧ್ಯತೆಯಿದೆ. ಆದ್ದರಿಂದ ಬೆಟ್ಟಿಂಗ್ ದಂಧೆಯ ಕುರಿತು ಸಾರ್ವಜನಿಕರಿಗೆ ಮಾಹಿತಿ ಲಭಿಸಿದಲ್ಲಿ ಸಂಬಂಧ ಪಟ್ಟ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿ ಸಹಕರಿಸಬೇಕು ಎಂದು ಆಯಕ್ತ ಸಂದೀಪ್‌ ಪಾಟೀಲ್ ಮನವಿ ಮಾಡಿದ್ದಾರೆ. ಜೊತೆಗೆ ವಿಶ್ವಕಪ್‌ನಲ್ಲಿ ಬೆಟ್ಟಿಂಗ್ ಆಡುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಖಡಕ್ ಎಚ್ಚರಿಕೆಯನ್ನೂ ರವಾನಿಸಿದ್ದಾರೆ.

English summary
World cub cricket begins on May 30. mean while Mangaluru police commissioner Sandeep patil has warned against cricket betting,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X