ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

39 ವರ್ಷದ ಬಳಿಕ ಪೊಲೀಸರ ಬಲೆಗೆ ಬಿದ್ದ 307 ಆರೋಪಿ

|
Google Oneindia Kannada News

ಮಂಗಳೂರು, ಮಾರ್ಚ್ 08: ಅಪರಾಧ ಎಸಗಿದ ಆರೋಪಿ ತಲೆ ಮರೆಸಿಕೊಂಡು ಎಷ್ಟೇ ಓಡಾಡಿದರೂ ಒಂದಲ್ಲಾ ಒಂದು ದಿನ ಕಾನೂನಿನ ಕೈಗೆ ಸಿಕ್ಕಿ ಬೀಳುತ್ತಾನೆ. ಇದಕ್ಕೊಂದು ಸ್ಪಷ್ಟ ಉದಾಹರಣೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. 39 ವರ್ಷಗಳಿಂದ ತಲೆ ಮರೆಸಿಕೊಂಡ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಣೇಶ್ ಶೆಟ್ಟಿ ಎಂಬುವರರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆಗೆ ಪ್ರಯತ್ನಿಸಲಾಗಿತ್ತು. ಆ ಪ್ರಕರಣದ ಆರೋಪಿ ಅವಿಲ್ ಡಿಸೋಜಾ ತಲೆ ಮರೆಸಿ ಕೊಂಡಿದ್ದ .

ಶೋಕಿ ಜೀವನಕ್ಕಾಗಿ ದರೋಡೆ ಕೃತ್ಯಕ್ಕೆ ಇಳಿದಿದ್ದ ಐವರ ಬಂಧನಶೋಕಿ ಜೀವನಕ್ಕಾಗಿ ದರೋಡೆ ಕೃತ್ಯಕ್ಕೆ ಇಳಿದಿದ್ದ ಐವರ ಬಂಧನ

ಈಗ ಸುಮಾರು 39 ವರ್ಷಗಳಿಂದ ನ್ಯಾಯಾಲಯಕ್ಕೂ ಹಾಜರಾಗದೇ ತಲೆ ಮರೆಸಿಕೊಂಡಿದ್ದ ಆರೋಪಿ ಅವಿಲ್ ಡಿಸೋಜ(56) ರನ್ನು ರೌಡಿ ನಿಗ್ರಹ ದಳದ ಸಿಬ್ಬಂದಿ ಬಂಧಿಸಿದ್ದಾರೆ.

Mangaluru police arrested Avil Dsouza after 39 years

ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 1980 ರಲ್ಲಿ ಈತನ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ನಂತರ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ ಸುಮಾರು 39 ವರ್ಷಗಳಿಂದ ತಲೆಮರೆಸಿಕೊಂಡು ವಿದೇಶದಲ್ಲಿದ್ದ. ಆರೋಪಿಯ ಪತ್ತೆಯ ಬಗ್ಗೆ ನ್ಯಾಯಾಲಯವು ವಾರಂಟು ಹೊರಡಿಸಿತ್ತು.

ಇದೀಗ ಆರೋಪಿ ಮಂಗಳೂರಿಗೆ ಬಂದು ಕುಂಪಲದಲ್ಲಿ ಮನೆ ಮಾಡಿದ ಬಗ್ಗೆ ರೌಡಿ ನಿಗ್ರಹ ದಳದ ಸಿಬ್ಬಂದಿ ಮಾಹಿತಿ ಪಡೆದು ಬಂಧಿಸಿದ್ದಾರೆ .ಬಂಧಿತ ಆರೋಪಿಯ ಮುಂದಿನ ಕ್ರಮದ ಬಗ್ಗೆ ನಗರದ ಗ್ರಾಮಾಂತರ ಪೊಲೀಸ್ ಠಾಣೆಗೆ ಹಸ್ತಾಂತರಿಲಾಗಿದೆ.

English summary
Mangaluru police arrested Avil D'souza (56) after 39 years in connection to attempt to murder case. Accused assaulted Ganesh Shetty in 1980.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X