ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ಪೊಲೀಸರ ಭರ್ಜರಿ ಶಿಕಾರಿ; ಭೂಗತ ಪಾತಕಿ ಅಸ್ಗರ್ ಅಲಿ ಬಲೆಗೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜೂನ್ 16: ಮಂಗಳೂರು ನಗರ ಪೊಲೀಸರು ಶನಿವಾರ ಕೇರಳದ ಕಾಸರಗೋಡಿನಲ್ಲಿ ಭರ್ಜರಿ ಶಿಕಾರಿ ಮಾಡಿದ್ದಾರೆ. ಎರಡು ಕೊಲೆ ಸೇರಿದಂತೆ ಒಂಬತ್ತು ಅಪರಾಧ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಹಾಗೂ ದಶಕಕ್ಕೂ ಹೆಚ್ಚು ಕಾಲದಿಂದ ವಿದೇಶದಲ್ಲಿ ಅಡಗಿಕೊಂಡಿದ್ದ ಭೂಗತ ಪಾತಕಿ ಅಸ್ಗರ್ ಅಲಿಯನ್ನು ಬಂಧಿಸಲಾಗಿದೆ.

ಟಾರ್ಗೆಟ್ ಗುಂಪಿನ ಇಲ್ಯಾಸ್ ಯುವ ಕಾಂಗ್ರೆಸ್ ಉಪಾಧ್ಯಕ್ಷ ಆಗಿದ್ದು ಹೇಗೆ?ಟಾರ್ಗೆಟ್ ಗುಂಪಿನ ಇಲ್ಯಾಸ್ ಯುವ ಕಾಂಗ್ರೆಸ್ ಉಪಾಧ್ಯಕ್ಷ ಆಗಿದ್ದು ಹೇಗೆ?

ಕಾಸರಗೋಡಿನ ಉಪ್ಪಳದಲ್ಲಿ ಆತ ಸಿಕ್ಕಿಬಿದ್ದಿದ್ದಾನೆ. ಜತೆಗೆ ಅಸ್ಗರ್ ಅಲಿ ವಿದೇಶಕ್ಕೆ ಎಸ್ಕೇಪ್ ಆಗಲು ನಕಲಿ ಪಾಸ್ ಪೋರ್ಟ್ ಮಾಡಿಕೊಟ್ಟಿದ್ದ ನವಾಜ್, ರಶೀದ್ ಎಂಬಿಬ್ಬರನ್ನು ಸಹ ಪೊಲೀಸರು ಬಂಧಿಸಿದ್ದಾರೆ. ಹನ್ನೆರಡು ವರ್ಷದ ಹಿಂದೆ ನಕಲಿ ಪಾಸ್ ಪೋರ್ಟ್ ಮೂಲಕವೇ ಆತ ದುಬೈಗೆ ಓಡಿ ಹೋಗಿದ್ದ.

Arrest

ಪೊಳಲಿ ಅನಂತು ಮರ್ಡರ್ ಕೇಸಿನಲ್ಲಿ ಅಸ್ಗರ್ ಅಲಿ ಮುಖ್ಯ ಆರೋಪಿ. ಇನ್ನು ಹೋದ ವರ್ಷ ಟಾರ್ಗೆಟ್ ಗುಂಪಿನ ಇಲ್ಯಾಸ್ ಕೊಲೆಗೆ ಈತನದೇ ಸ್ಕೆಚ್ ಇತ್ತು ಎನ್ನಲಾಗಿದೆ. ರಶೀದ್ ಮಲಬಾರಿ ಜತೆಗೂ ಅಸ್ಗರ್ ಹೆಸರು ಕೆಲವು ಪ್ರಕರಣಗಳಲ್ಲಿ ಕೇಳಿಬಂದಿದೆ. ಜತೆಗೆ ಹಫ್ತಾ ವಸೂಲಿ ಬಗ್ಗೆ ದೂರು ದಾಖಲಾಗಿದೆ. ಬೆಂಗಳೂರಿನಲ್ಲಿ ನಡೆದ ಶೂಟೌಟ್ ನಲ್ಲಿ ಸಹ ಅಸ್ಗರ್ ಪಾತ್ರವಿತ್ತು.

English summary
Mangaluru police arrest underworld don Asghar Ali in Kerala state, Kasargod district, Uppala on Saturday night. Here is the further details about the operation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X