ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದರೋಡೆಗೆ ಸಂಚು ರೂಪಿಸಿದ್ದ ಕುಖ್ಯಾತ ಕ್ರಿಮಿನಲ್ ಗಳನ್ನು ಬಂಧಿಸಿದ ಮಂಗಳೂರು ಪೊಲೀಸರು

|
Google Oneindia Kannada News

ಮಂಗಳೂರು, ನವೆಂಬರ್. 14:ಮಂಗಳೂರಿನ ಆಭರಣ ಮಳಿಗೆಯೊಂದರ ಮಾಲೀಕರನ್ನು ಅಪಹರಣ ಮಾಡಲು ಸಂಚು ರೂಪಿಸಿದ್ದ ದರೋಡೆಕೋರರ ತಂಡವನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

18 ವರ್ಷಗಳ ಹಿಂದಿನ ಪ್ರಕರಣ ಭೇದಿಸಿದ ಪುತ್ತೂರು ಪೊಲೀಸರು18 ವರ್ಷಗಳ ಹಿಂದಿನ ಪ್ರಕರಣ ಭೇದಿಸಿದ ಪುತ್ತೂರು ಪೊಲೀಸರು

ಪಚ್ಚನಾಡಿಯ ಮಂಗಳೂರು ಹಿಲ್ಸ್ ರಸ್ತೆಯಲ್ಲಿ ಕೆಲ ಯುವಕರ ತಂಡ ಅಪಹರಣಕ್ಕೆ ಸಂಚು ರೂಪಿಸಿರುವ ಬಗ್ಗೆ ಮಂಗಳೂರು ರೌಡಿ ನಿಗ್ರಹ ದಳದ ಪೊಲೀಸರಿಗೆ ಮಾಹಿತಿ ದೊರೆತಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಪೊಲೀಸರು 11 ಮಂದಿ ಕುಖ್ಯಾತ ಅಂತರ ರಾಜ್ಯ ದರೋಡೆಕೋರರನ್ನು ಬಂಧಿಸಿದ್ದಾರೆ.

 ಹನೂರಲ್ಲಿ ಅರಿಶಿನದ ನಡುವೆ ಗಾಂಜಾ ಬೆಳೆದ ಆರೋಪಿಗಳ ಬಂಧನ ಹನೂರಲ್ಲಿ ಅರಿಶಿನದ ನಡುವೆ ಗಾಂಜಾ ಬೆಳೆದ ಆರೋಪಿಗಳ ಬಂಧನ

ಬಂಧಿತರನ್ನು ಶೇಖ್ ಮಹಮ್ಮದ್ ಅನ್ಸಾರ್(34), ರಮೀಝ್ ಕೆ.ಸಿ.ರೋಡ್(21), ಮಹಮ್ಮದ್ ತೌಸೀಫ್ ಅಲಿಯಾಸ್ ತಚ್ಚು(24), ತೌಸೀಫ್ (25), ಉಬೇದುಲ್ಲಾ(25), ಮಹಮ್ಮದ್ ಅಲಿ(25), ಅಹಮ್ಮದ್ ಕಬೀರ್(30), ಅಸ್ಗರ್ ಅಲಿ ಅಲಿಯಾಸ್ ಅಚ್ಚು (27), ಸಾಬೀತ್(19), ಮಹಮ್ಮದ್ ಸಬಾದ್ ಅಲಿಯಾಸ್ ಸವಾದ್(22), ಅಮೀರ್ ಅಲಿ ಅಲಿಯಾಸ್ ಅಮೀರ್ (19) ಎಂದು ಗುರುತಿಸಲಾಗಿದೆ.

Mangaluru police arrest 11 robbers

ಬಂಧಿತ ಆರೋಪಿಗಳಿಂದ 2 ಕಾರು, 3 ಕಬ್ಬಿಣದ ರಾಡ್, 1 ಚೂರಿ, 3 ಮರದ ದೊಣ್ಣೆ, 4 ನಕಲಿ‌ ನಂಬರ್ ಪ್ಲೇಟ್, 16,050 ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ.

 ಚೈತ್ರಾ ಕುಂದಾಪುರ ಮಾನಭಂಗಕ್ಕೆ ಯತ್ನ ಆರೋಪ: ಗುರುಪ್ರಸಾದ್ ಪೊಲೀಸರ ವಶಕ್ಕೆ ಚೈತ್ರಾ ಕುಂದಾಪುರ ಮಾನಭಂಗಕ್ಕೆ ಯತ್ನ ಆರೋಪ: ಗುರುಪ್ರಸಾದ್ ಪೊಲೀಸರ ವಶಕ್ಕೆ

ಪೊಲೀಸರು ವಶಪಡಿಸಿಕೊಂಡ ಒಟ್ಟು ಸೊತ್ತುಗಳ ಮೌಲ್ಯ 3.66ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಬಂಧಿತ ಆರೋಪಿಗಳ ವಿರುದ್ಧ ಕರ್ನಾಟಕ ಮತ್ತು ಕೇರಳದ ಕಾಸರಗೋಡಿನಲ್ಲಿ ಕೊಲೆ, ಕೊಲೆ ಯತ್ನ, ದರೋಡೆ, ಹಲ್ಲೆ ಪ್ರಕರಣ ಹಾಗೂ ಪೊಕ್ಸೊ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿರುವುದು ತನಿಖೆ ವೇಳೆ ತಿಳಿದುಬಂದಿದೆ.

English summary
Mangaluru police team arrested 11 notorious criminals for conspirising to loot Jewellery shop owner
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X