ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು - ತುಂಬಿದ ತುಂಬೆ, ತುಂಬದ ರೈತರ ತುತ್ತಿನ ಚೀಲ

ಮಂಗಳೂರಿನ ತುಂಬೆ ಅಣೆಕಟ್ಟು ನಿರ್ಮಾಣದಿಂದ ಜಾಗ ಕಳೆದುಕೊಂಡ ರೈತರಿಗೆ ಸರಕಾರ ಇಲ್ಲೀವರೆಗೆ ಬಿಡಿಗಾಸು ಪರಿಹಾರ ನೀಡಿಲ್ಲ. ಡ್ಯಾಂ ನಿರ್ಮಾಣವಾಗಿ ನೀರು ತುಂಬಿದರೂ ರೈತರ ಕಿಸೆಗೆ ಮಾತ್ರ ಪೈಸೆ ಹಣವೂ ಬಂದು ಸೇರಿಲ್ಲ.

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಫೆಬ್ರವರಿ 22: ಮಂಗಳೂರಿನ ತುಂಬೆ ಅಣೆಕಟ್ಟು ನಿರ್ಮಾಣದಿಂದ ಜಾಗ ಕಳೆದುಕೊಂಡ ರೈತರಿಗೆ ಸರಕಾರ ಇಲ್ಲೀವರೆಗೆ ಬಿಡಿಗಾಸು ಪರಿಹಾರ ನೀಡಿಲ್ಲ. ಡ್ಯಾಂ ನಿರ್ಮಾಣವಾಗಿ ನೀರು ತುಂಬಿದರೂ ರೈತರ ಕಿಸೆಗೆ ಮಾತ್ರ ಪೈಸೆ ಹಣವೂ ಸೇರಿಲ್ಲ.

ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿ ನೇತ್ರಾವತಿಗೆ ತುಂಬೆಯಲ್ಲಿ ವರ್ಷಗಳ ಹಿಂದೆ 11 ಮೀ. ಎತ್ತರದ ನೂತನ ಡ್ಯಾಂ ನಿರ್ಮಿಸಲಾಗಿತ್ತು. ಮಂಗಳೂರು ನಗರಕ್ಕೆ ನೀರು ಪೂರೈಸಲು ಈ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಇದೀಗ ಡ್ಯಾಂ ನಿರ್ಮಾಣ ಪೂರ್ಣಗೊಂಡು, ಅಣೆಕಟ್ಟು ತುಂಬಾ ನೀರು ನಿಂತಿದೆ. ಆದರೆ ಮುಳುಗಡೆಯಾದ ಪ್ರದೇಶದ ರೈತರಿಗೆ ಭೂ ಪರಿಹಾರ ಮಾತ್ರ ಮರೀಚಿಕೆಯಾಗಿದೆ.[ಪಿಣರಾಯಿ ಆಗಮನದಂದೇ ದಕ್ಷಿಣ ಕನ್ನಡ ಜಿಲ್ಲಾ ಬಂದ್ - ಸಂಘ ಪರಿವಾರ]

Mangaluru: No Compensation for Thumbe Dam victim farmers

ಆರಂಭದಲ್ಲಿ ಸರ್ಕಾರವೇನೋ ಕೋಟಿ ಕೋಟಿ ರೂಪಾಯಿಗಳ ಪರಿಹಾರ ನೀಡುತ್ತೇವೆ ಎಂದು ಹೇಳಿದರೂ ಈವರೆಗೆ ಇಲ್ಲಿನ ರೈತರ ಕೈಗೆ ಪರಿಹಾರ ಸಿಕ್ಕಿಲ್ಲ. ಮುಳುಗಡೆಯಾದ ಭೂಮಿಗೆ ಸೂಕ್ತ ಪರಿಹಾರ ನೀಡುವಂತೆ ಇಲ್ಲಿನ ಜನಪ್ರತಿನಿಧಿಗಳು ಒತ್ತಾಯನೂ ಮಾಡುತ್ತಿಲ್ಲ. ಈ ಕುರಿತು ಮುತುವರ್ಜಿ ವಹಿಸಲು ಅಧಿಕಾರಿಗಳಿಗೂ ಮನಸ್ಸಿಲ್ಲ.

ಈ ಹಿಂದೆ ತುಂಬೆ ಡ್ಯಾಂ ಸಂತ್ರಸ್ತರ ಹೋರಾಟ ಸಮಿತಿ, ರೈತ ಸಂಘ ಜಂಟಿಯಾಗಿ ಪರಿಹಾರಕ್ಕೆ ಮನವಿ ಸಲ್ಲಿಸಿ ಕರ್ನಾಟಕ ಹೈಕೋರ್ಟ್‌ ಮೊರೆ ಹೋಗಿತ್ತು. ಆಗ ಕೋರ್ಟ್ ಮ್ಯಾಂಡಮಸ್ ಆಕ್ಟ್ ಮೂಲಕ ಬೆಳೆ ಪರಿಹಾರ ಸಹಿತ ಭೂಸ್ವಾಧೀನ ಮಾಡಿ ಒಂದು ತಿಂಗಳೊಳಗೆ ವರದಿ ನೀಡುವಂತೆ ಜಿಲ್ಲಾಡಳಿತ ಮತ್ತು ನಗರ ಪಾಲಿಕೆಗೆ ಸೂಚನೆ ನೀಡಿತ್ತು. ಆದರೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಇನ್ನು ಕಾರ್ಯಪ್ರವೃತ್ತವಾಗಿಲ್ಲ. ಹೀಗಾಗಿ ಹೋರಾಟಗಾರರು ನ್ಯಾಯಾಂಗ ನಿಂದನೆ ಹೆಸರಿನಲ್ಲಿ ಜಿಲ್ಲಾಡಳಿತದ ವಿರುದ್ಧ ಹೈಕೋರ್ಟ್‌ನಲ್ಲಿ ದಾವೆ ಹೂಡಲು ಮುಂದಾಗಿದ್ದಾರೆ.[ಮಂಗಳೂರು: ಅತ್ಯಾಚಾರ ಮಾಡಲು ಮೇಲೆರಗಿದ ಕಾಮುಕನಿಗೆ ಮಹಿಳೆ ಮಾಡಿದ್ದೇನು?]

ಈ ಹಿಂದೆ ಎಂಆರ್‌ಪಿಎಲ್, ಎಎಂಆರ್ ಸರಪಾಡಿ ಅಣೆಕಟ್ಟು, ನಂದಿಕೂರು ಭೂಸ್ವಾಧೀನ ಮಾಡಿದ ವೇಳೆ

ಭೂಮಿ ಕಳೆದುಕೊಂಡ ಭೂ ಮಾಲೀಕರಿಗೆ ಏಕ ತಿಯ ಪರಿಹಾರ ನೀಡಲಾಗಿತ್ತು. ಆದರೆ ತುಂಬೆ ಡ್ಯಾಂ ಪ್ರಕರಣದಲ್ಲಿ ತಾರತಮ್ಯದ ನೆಲ ಬಾಡಿಗೆ ರೀತಿಯ ಪರಿಹಾರ ಹಣವನ್ನು ನಿಗದಿಪಡಿಸಲಾಗಿದೆ. ಇದು ಕೂಡಾ ಇನ್ನೂ ರೈತರ ಕೈ ಸೇರಿಲ್ಲ.

ಇದರಿಂದ ಬಂಟ್ವಾಳ ತಾಲೂಕಿನ ಸಜೀಪ ಮುನ್ನೂರು, ಪಾಣೆ ಮಂಗಳೂರು, ನರಿಕೊಂಬು, ಬಿ.ಮೂಡ, ಕಳ್ಳಿಗೆ ಗ್ರಾಮದಲ್ಲಿ ನೇತ್ರಾವತಿ ನದಿ ಇಕ್ಕೆಲದ ಬರುವ ಜಮೀನುಗಳು ಮುಳುಗಡೆಯಾಗಿದ್ದೆ. ಹೀಗಾಗಿ ಕೃಷಿಯನ್ನೇ ನಂಬಿ ಬದುಕುವ ರೈತರು ಒಂದೇ ಯೋಜನೆಗೆ ಭೂಮಿ ಕಳೆದುಕೊಂಡು ಕಣ್ಣೀರಿಡುವಂತಾಗಿದೆ.

English summary
Even after the long battle with Karnataka High Court and district administration, farmers of Mangaluru Thumbe Dam victims still not get their compensation money.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X