ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಳಿನ್‌ಕುಮಾರ್ ಹುಟ್ಟೂರಿನ ಸರ್ಕಾರಿ ಶಾಲೆಯಲ್ಲೇ ನಮಾಜ್; ಇತ್ಯರ್ಥ ಮಾಡಿದ ಅಧಿಕಾರಿಗಳು

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಫೆಬ್ರವರಿ 12: ರಾಜ್ಯದಲ್ಲಿ ವಿವಾದದ ಕೇಂದ್ರ ಬಿಂದುವಾಗಿರುವ ಹಿಜಾಬ್- ಕೇಸರಿ ಶಾಲು ಗೊಂದಲ ಜೀವಂತವಾಗಿರುವಾಗಲೇ ಇನ್ನೊಂದು ಇದೇ ರೀತಿಯ ಪ್ರಕರಣ ಸಮಾಜದಲ್ಲಿ ಮತ್ತೆ ಅಶಾಂತಿ ಮೂಡಿಸಲು ಕಾರಣವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಅಂಕತ್ತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಶುಕ್ರವಾರದ ನಮಾಜ್ ಮಾಡಿರುವ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನಲೆಯಲ್ಲಿ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪ್ರಕರಣಕದ ಸುಖಾಂತ್ಯಕ್ಕೆ ಪ್ರಯತ್ನಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಹುಟ್ಟೂರಿನ ಶಾಲೆ ಇದಾಗಿದೆ.

ವಿಡಿಯೋ; ಹಿಜಾಬ್ ವಿವಾದಕ್ಕೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆವಿಡಿಯೋ; ಹಿಜಾಬ್ ವಿವಾದಕ್ಕೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ

ಕಳೆದ ಮೂರು ವಾರಗಳಿಂದ ಪ್ರತೀ ಶುಕ್ರವಾರ ಈ ಶಾಲೆಯ 6 ಮತ್ತು 7 ತರಗತಿಯಲ್ಲಿ ಕಲಿಯುತ್ತಿರುವ ಮೂವರು ವಿದ್ಯಾರ್ಥಿಗಳು ಶಾಲಾ ಕೊಠಡಿಯಲ್ಲೇ ನಮಾಜ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ, ಜಿಲ್ಲೆಯಲ್ಲಿ ಈ ಕುರಿತ ಚರ್ಚೆ ವ್ಯಾಪಕವಾಗಿ ನಡೆದಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಹಿಂದೂಪರ ಸಂಘಟನೆಗಳು ಎಚ್ಚೆತ್ತುಕೊಂಡು ಘಟನೆಯನ್ನು ತೀವ್ರವಾಗಿ ವಿರೋಧಿಸಿದೆ.

Mangaluru: Namaz Inside a Govt School Classroom At Kadaba; BEO Says He Resolved The Matter

ವಿದ್ಯಾರ್ಥಿಗಳು ಶಾಲಾ ಕೊಠಡಿಯಲ್ಲಿ ನಮಾಜ್ ಮಾಡುತ್ತಿರುವ ವಿಚಾರ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರ ಗಮನಕ್ಕೆ ಮೊದಲು ಬಂದಿದ್ದು, ಅಧ್ಯಕ್ಷರು ಈ ವಿಚಾರವನ್ನು ಶಾಲೆಯ ಮುಖ್ಯ‌ ಶಿಕ್ಷಕಿಯ ಗಮನಕ್ಕೆ ತಂದಿದ್ದರೆನ್ನಲಾಗಿದೆ. ಆದರೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸದ ಮುಖ್ಯ ಶಿಕ್ಷಕಿ ಮತ್ತೆ ಈ ವಿದ್ಯಾರ್ಥಿಗಳಿಗೆ ಅವಕಾಶ ನೀಡಿದ ಹಿನ್ನಲೆಯಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸ್ವತಃ ಶಾಲೆಗೆ ತೆರಳಿ ಮಕ್ಕಳು ನಮಾಜ್ ಮಾಡುತ್ತಿರುವ ದೃಶ್ಯಗಳನ್ನು ತಮ್ಮ ಮೊಬೈಲ್‌ನಲ್ಲಿ‌ ಸೆರೆ ಹಿಡಿದಿದ್ದಾರೆ.

ಹಿಜಾಬ್ ವಿವಾದ; ನವೆಂಬರ್‌ನಲ್ಲೇ ತಯಾರಿ ಆರಂಭ?ಹಿಜಾಬ್ ವಿವಾದ; ನವೆಂಬರ್‌ನಲ್ಲೇ ತಯಾರಿ ಆರಂಭ?

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ತಕ್ಷಣ ಎಚ್ಚೆತ್ತುಕೊಂಡ ಶಿಕ್ಷಣ ಇಲಾಖೆ ಘಟನೆಯ ಬಗ್ಗೆ ಶಾಲೆಯಿಂದ ಮಾಹಿತಿ ಪಡೆದುಕೊಂಡಿದೆ. ಫೆ.11ರಂದು ಈ ಸಂಬಂಧ ಶಾಲಾಭಿವೃದ್ಧಿ ಸಮಿತಿ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳ ತುರ್ತು ಸಭೆಯನ್ನು ನಡೆಸಿ ಘಟನೆಯ‌ ಕುರಿತು ಗಂಭೀರ ಚರ್ಚೆಯನ್ನು ನಡೆಸಿದೆ. ಘಟನೆಯು ತಿಳುವಳಿಕೆಯ ಕೊರತೆಯಿಂದ ನಡೆದಿರುವ ಕಾರಣ ಆ ವಿಚಾರವನ್ನು ದೊಡ್ಡದು ಮಾಡದೆ ಮುಗಿಸಲು ಸಭೆ ತೀರ್ಮಾನಿಸಿದೆ.

Mangaluru: Namaz Inside a Govt School Classroom At Kadaba; BEO Says He Resolved The Matter

ಸಭೆಯಲ್ಲಿ ಭಾಗವಹಿಸಿದ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಸಿ. ಲೋಕೇಶ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಘಟನೆಯ ಬಗ್ಗೆ ಶಾಲಾಭಿವೃದ್ಧಿ ಸಮಿತಿ ಸದಸ್ಯರು ವಿಷಾದ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಇಂಥ ಘಟನೆ ಮರು ಕಳಿಸದಂತೆ ಎಚ್ಚರ‌ ವಹಿಸಲಾಗುವುದು. ಶಾಲೆಯಲ್ಲಿ ಶೈಕ್ಷಣಿಕ ವಿಚಾರ ಹೊರತುಪಡಿಸಿ, ಬೇರೆ ಯಾವುದೇ ಧಾರ್ಮಿಕ ವಿಚಾರಗಳನ್ನು ತರದಂತೆ ನಿರ್ಣಯವನ್ನೂ ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದಿದ್ದಾರೆ.

ಮಸೀದಿಗಾಗಿ ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಹೋಗುವುದನ್ನೂ ನಿಲ್ಲಿಸಲು ತೀರ್ಮಾನಿಸಲಾಗಿದ್ದು, ಶಾಲೆಯಲ್ಲಿ ಪಠ್ಯದ ವಿನಃ ಇತರ ವಿಷಯಗಳನ್ನು ತರುವುದಿಲ್ಲ ಎಂದು ಸಮಿತಿ ನಿರ್ಧರಿಸಿದೆ ಎಂದು ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸಬಿನಾ ಮಾಹಿತಿ ನೀಡಿದ್ದಾರೆ‌. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಅಂಕತ್ತಡ್ಕ ಸರಕಾರಿ ಶಾಲೆ ಇದೀಗ ಈ ವಿವಾದವನ್ನು ಸೌಹಾರ್ದಯುತವಾಗಿ ಮುಗಿಸಿದ್ದಾರೆ.

Mangaluru: Namaz Inside a Govt School Classroom At Kadaba; BEO Says He Resolved The Matter

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಹುಟ್ಟೂರಿನ ಶಾಲೆ ಇದಾಗಿದ್ದು, ಈ ಶಾಲೆಯಲ್ಲಿ ಕಲಿರುವ ಅರ್ಧದಷ್ಟು ಮಂದಿ ಮುಸ್ಲಿಮರೇ ಆಗಿದ್ದಾರೆ. ಈ ಹಿಂದೆ ಶುಕ್ರವಾರದ ವೇಳೆ ಮುಸ್ಲಿಂ ಮಕ್ಕಳನ್ನು ನಮಾಜ್‌ಗೆ ಮಸೀದಿಗಳಿಗೆ ತೆರಳುವುದಕ್ಕೆ ಅವಕಾಶ ಮಾಡಿಕೊಡಬೇಕೆಂದು ಪ್ರಸ್ತಾಪ‌ ಬಂದ ಸಂದರ್ಭದಲ್ಲಿ, ಶಾಲಾಭಿವೃದ್ಧಿ ಮಂಡಳಿ ಮಕ್ಕಳನ್ನು ಅವರಿಷ್ಟಕ್ಕೆ ಬಿಡಲು ಸಾಧ್ಯವಿಲ್ಲ. ಮಕ್ಕಳು ಶಾಲೆಯಿಂದ ನಡುವಿನಲ್ಲಿ ಹೋಗಬೇಕಾದರೆ ಪೋಷಕರೇ ಶಾಲೆಗೆ ಬಂದು ಪತ್ರಕ್ಕೆ ಸಹಿ ಹಾಕಿ ಹೋಗಬೇಕು ಅಂತಾ ತೀರ್ಮಾನ ಮಾಡಲಾಗಿತ್ತು. ಸದ್ಯ ಈ ಪ್ರಕ್ರಿಯೆಗೂ ಕೊಕ್ ನೀಡಲಾಗಿದೆ.

English summary
Students Namaz inside a govt school classroom at Ankattadka village of Kadaba taluk; BEO says he resolved the matter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X