ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕ್ಯಾನ್ಸರ್ ರೋಗಿಗಳಿಗಾಗಿ ಕೂದಲನ್ನೇ ದಾನ ಮಾಡಿದ ಮಂಗಳೂರಿನ ಮಾಡೆಲ್

|
Google Oneindia Kannada News

Recommended Video

ಮಂಗಳೂರು ಮೂಲದ ಮಾಡೆಲ್ ಕ್ಯಾನ್ಸರ್ ರೋಗಿಗಳಿಗಾಗಿ ಮಾಡಿದ ತ್ಯಾಗ ಸಾಮಾನ್ಯದ್ದಲ್ಲ | Oneindia Kannada

ಮಂಗಳೂರು, ಅಕ್ಟೋಬರ್ 22: ರಂಗುರಂಗಿನ ಸ್ಪಾಟ್ ಲೈಟ್ ನಡಿ ಸಾವಿರಾರು ಜನರ ಎದುರು ಆಕರ್ಷಕ ರಾಂಪ್ ಮೇಲೆ ನಡೆದು ಮಿಂಚಬೇಕೆಂಬುದು ಹೆಚ್ಚಿನ ಯುವ ಮನಸ್ಸುಗಳ ಮಿಡಿತ.

ಅಷ್ಟೇ ಏಕೆ, ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚಿ ಹೆಸರು ಗಳಿಸಬೇಕೆಂದು ಅದೆಷ್ಟೋ ಯುವಕ-ಯುವತಿಯರು ಕನಸು ಸಹ ಕಂಡಿರುತ್ತಾರೆ. ಹಾಗೆಯೇ ಅದೆಷ್ಟೋ ಚೆಲುವೆಯರು ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚಿ ನೇರ ಸಿನಿ ಲೋಕವನ್ನು ಪ್ರವೇಶಿಸಿದ್ದಾರೆ.

ಆದರೆ ಇಲ್ಲಿ ನಾವು ಹೇಳಲು ಹೊರಟಿರುವ ಮಾಡೆಲ್ ಇವರೆಲ್ಲರಿಗಿಂತ ಸ್ವಲ್ಪ ಭಿನ್ನವಾಗಿದ್ದಾರೆ. ಹೌದು, ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ಮಂಗಳೂರಿನ ಚೆಲುವೆಯೊಬ್ಬರು ಕ್ಯಾನ್ಸರ್ ರೋಗಿಗಳಿಗಾಗಿ ತಮ್ಮ ಕೂದಲನ್ನೇ ದಾನ ಮಾಡಿದ್ದಾರೆ.

ಮಿಸ್ಟರ್ ಇಂಡಿಯಾ 2018: ಬೆಂಗಳೂರಲ್ಲೇ ನಡೆಯಿತು ಆಡಿಷನ್ಮಿಸ್ಟರ್ ಇಂಡಿಯಾ 2018: ಬೆಂಗಳೂರಲ್ಲೇ ನಡೆಯಿತು ಆಡಿಷನ್

ಆ ಚೆಲುವೆಯ ಹೆಸರು ವಸುದಾ ರಾವ್. ಮುರುಡೇಶ್ವರದ ತಿಲಕ್ ರಾವ್ ಮತ್ತು ನಮ್ರತಾ ರಾವ್ ದಂಪತಿಗಳ ಮಗಳು. ಹುಟ್ಟಿ ಬೆಳೆದಿದ್ದು ಮಂಗಳೂರಿನಲ್ಲಿ. ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿದ್ದ ಈ ಸುಂದರಿ ಈಗ ಕ್ಯಾನ್ಸರ್ ರೋಗಿಗಳಿಗೆ ತಮ್ಮ ಕೂದಲನ್ನು ದಾನ ಮಾಡುವ ಮೂಲಕ ಎಲ್ಲರಿಗಿಂತ ತಾನು ಭಿನ್ನ ಎಂದು ಸಾಬೀತುಪಡಿಸಿದ್ದಾರೆ. ಮುಂದೆ ಓದಿ..

 15 ಇಂಚಿನ ಕೂದಲು

15 ಇಂಚಿನ ಕೂದಲು

ತಮ್ಮ15 ಇಂಚಿನ ಕೂದಲನ್ನು ಬ್ಲಿಸ್ ಹೇರ್ ಸೆಲೂನ್ ಗೆ ದಾನ ಮಾಡುವ ಮೂಲಕ ಕೇಶ ಮುಂಡನ ಮಾಡಿಸಿಕೊಂಡು ಇತರ ಚೆಲುವೆಯರಿಗೆ ಮಾದರಿಯಾಗಿ ಬೆಳೆದು ನಿಂತಿದ್ದಾರೆ.

 ಮ್ಯಾನ್ ಹಂಟ್ ಇಂಟರ್ ನ್ಯಾಷನಲ್‌ನಲ್ಲಿ ಕುಡ್ಲದ ಯುವಕ ರನ್ನರ್ ಅಪ್ ಮ್ಯಾನ್ ಹಂಟ್ ಇಂಟರ್ ನ್ಯಾಷನಲ್‌ನಲ್ಲಿ ಕುಡ್ಲದ ಯುವಕ ರನ್ನರ್ ಅಪ್

 ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ

ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ

ಮಾಡೆಲಿಂಗ್ ನಲ್ಲಿ ಮಿಂಚುತ್ತಿದ್ದ ಈ ಯುವತಿ ಈ ರೀತಿಯ ನಿರ್ಧಾರ ಕೈಗೊಂಡ ಬಗ್ಗೆ ನಂಬಲು ತುಸು ಕಷ್ಟವೆನಿಸಿದರೂ ನಂಬಲೇಬೇಕು. ಯಾಕೆಂದರೆ ಇತ್ತೀಚೆಗೆ ಬ್ಲಿಸ್ ಹೇರ್ ಸೆಲೂನ್ ಆಯೋಜಿಸಿದ ಲ್ಯಾಕ್ಸ್ ಆಫ್ ಲವ್ ಅಭಿಯಾನದಡಿ ಕ್ಯಾನ್ಸರ್ ರೋಗಿಗಳಿಗೆ ಹೆಚ್ಚಿನ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ಕೇಶ ಮುಂಡನ ಮಾಡಿಸಿಕೊಂಡಿದ್ದಾರೆ.

 ಕ್ಯಾಟ್‌ವಾಕ್ ಮಾಡುತ್ತಲೇ ಸ್ತನ್ಯಪಾನ: ಚರ್ಚೆಗೆ ಗ್ರಾಸವಾದ ರೂಪದರ್ಶಿ ಕ್ಯಾಟ್‌ವಾಕ್ ಮಾಡುತ್ತಲೇ ಸ್ತನ್ಯಪಾನ: ಚರ್ಚೆಗೆ ಗ್ರಾಸವಾದ ರೂಪದರ್ಶಿ

 ಸ್ವಯಂ ಪ್ರೇರಿತರಾಗಿಯೇ ದಾನ

ಸ್ವಯಂ ಪ್ರೇರಿತರಾಗಿಯೇ ದಾನ

ಇಲ್ಲಿ ಹೇಳಲೇಬೇಕಾದ ಇನ್ನೊಂದು ಸಂಗತಿ ಇದೆ. ಅದೇನೆಂದರೆ ಯಾರ ಮಾತನ್ನು ಕೇಳದೆ, ಮುಲಾಜಿಗೆ ಒಳಗಾಗದೆ ಸ್ವಯಂ ಪ್ರೇರಿತರಾಗಿಯೇ ವಸುದಾ ತಮ್ಮ ಕೂದಲನ್ನು ದಾನ ಮಾಡಿದ್ದಾರೆ. ಅವರ ಈ ನಡೆ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

 ಮಿಸ್ ಫೋಟೊ ಜೆನಿಕ್

ಮಿಸ್ ಫೋಟೊ ಜೆನಿಕ್

ವಸುದಾ ರಾವ್ ಅವರಿಗೆ ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚಬೇಕೆಂದು ಬಾಲ್ಯದಲ್ಲಿಯೇ ಕನಸು ಕಂಡಿದ್ದರು. ಈ ಹಿನ್ನೆಲೆಯಲ್ಲಿ ಬಾಲ್ಯದ ಕನಸಿನಂತೆ ಅವರು ಗ್ಲಾಮರ್ ಲೋಕಕ್ಕೆ ಕಾಲಿಟ್ಟರು . 2018ರ ಮಿಸ್ ಮಂಗಳೂರು ಸ್ಪರ್ಧೆಯಲ್ಲಿ ವಸುದಾ ರಾವ್ ಮಿಸ್ ಫೋಟೊ ಜೆನಿಕ್ ಮತ್ತು ಫಸ್ಟ್ ರನ್ನರ್ ಆಪ್ ಆಗಿ ಹೊರಹೊಮ್ಮಿದ್ದಾರೆ.

English summary
Mangaluru based Model Vasudha Rao bring hope to cancer patients by donating her hair
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X