ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಚಿನ್ನ'ಕ್ಕೆ ಕರಾಟೆ ಪಂಚ್ ನೀಡಿದ ಮಂಗಳೂರು ಮೇಯರ್ ಕವಿತಾ ಸನಿಲ್

|
Google Oneindia Kannada News

ಮಂಗಳೂರು, ನವೆಂಬರ್ 6: ಕರಾಟೆ ಫೈಟ್ ರಿಂಗ್ ನಲ್ಲಿ ಮಂಗಳೂರು ಮೇಯರ್... ಕವಿತಾ ಸನಿಲ್ ಪಂಚ್ ಗೆ ಎದುರಾಳಿ ಚಿತ್... ಅಂಮತಿಮವಾಗಿ ಚಿನ್ನ ಗೆದ್ದು ನಗೆ ಬೀರಿದ ಮೇಯರ್ ಕವಿತಾ ಸನಿಲ್...

ಮುಖ್ಯಮಂತ್ರಿಗಳ ಜತೆ ಕರಾಟೆ ಆಟವಾಡಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ ಮಂಗಳೂರು ಮೇಯರ್ ಕವಿತಾ ಸನಿಲ್ ಭಾನುವಾರ ಸ್ವತಃ ಕರಾಟೆ ರಿಂಗ್ ಗೆ ಇಳಿದಿದ್ದರು. ಹಲವು ವರ್ಷಗಳ ಬಳಿಕ ಮತ್ತೆ ಕರಾಟೆ ಫೈಟ್ ಗೆ ಇಳಿದ ಕವಿತಾ ಸನಿಲ್ ಎದುರಾಳಿ ಸ್ಪರ್ಧಿಯನ್ನು ಮಣಿಸಿ ಪಾರಮ್ಯ ಮೆರೆದಿದ್ದಾರೆ.

ಮಂಗಳೂರಿನಲ್ಲಿ ಆಯೋಜಿಸಲಾಗಿದ್ದ ಇಂಡಿಯನ್ ಕರಾಟೆ ಚಾಂಪಿಯನ್‍ಶಿಪ್‍ 2017 ನಲ್ಲಿ ಮಂಗಳೂರು ಮೇಯರ್ ಕವಿತಾ ಸನಿಲ್ ಚಿನ್ನದ ಪದಕ ಗೆದ್ದು ಗೆಲುವಿನ ನಗೆ ಬೀರಿದ್ದಾರೆ.

ಫೈನಲ್ ಫೈಟ್ ನಲ್ಲಿ ಗೆಲುವು

ಫೈನಲ್ ಫೈಟ್ ನಲ್ಲಿ ಗೆಲುವು

ಫೈನಲ್‍ನಲ್ಲಿ ಕರಾಟೆ ಪಟು ನಿಶಾ ನಾಯಕ್ ವಿರುದ್ಧ ಸೆಣೆಸಿದ ಕವಿತಾ ಸನಿಲ್ 7-3 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿದರು.

ತೀವ್ರ ಪೈಪೋಟಿಯ ಪಂದ್ಯ

ತೀವ್ರ ಪೈಪೋಟಿಯ ಪಂದ್ಯ

ಆರಂಭದಲ್ಲಿ ನಿಶಾ ನಾಯಕ್ ತೀವ್ರ ಪೈಪೋಟಿ ಒಡ್ಡಿ ಮೊದಲ ರೌಂಡ್ ನಲ್ಲಿ 3-3 ಅಂಕಗಳಿಂದ ಸಮಬಲ ಸಾಧಿಸಿದರು. ಅಂತಿಮ ರೌಂಡ್ ನಲ್ಲಿ ತನ್ನ ಅನುಭವದ ಚಾಕಚಕ್ಯತೆ ಪ್ರದರ್ಶಿಸಿದ ಕವಿತಾ ಸನಿಲ್ ಜಯಗಳಿಸಿದರು.

ಚಿನ್ನಗೆದ್ದ ಮೇಯರ್

ಚಿನ್ನಗೆದ್ದ ಮೇಯರ್

ಈ ಸ್ಪರ್ಧೆಯಲ್ಲಿ ಕವಿತಾ ಸನಿಲ್ ಚಿನ್ನ ಗೆದ್ದರೆ ನಿಶಾ ನಾಯಕ್ ಬೆಳ್ಳಿಗೆ ತೃಪ್ತಿಪಡಬೇಕಾಯಿತು. ಪೃಥ್ವಿ ಹಾಗು ಕಾವ್ಯ ಕಂಚಿನ ಪದಕ ಗೆದ್ದರು.

ಏಕಪಕ್ಷೀಯ ಸೆಮಿ ಫೈನಲ್

ಏಕಪಕ್ಷೀಯ ಸೆಮಿ ಫೈನಲ್

ಫೈನಲ್ ಗೂ ಮೊದಲು ನಡೆದ ಸೆಮಿಫೈನಲ್‍ನಲ್ಲಿ ಕವಿತಾ ಸನಿಲ್ ಎದುರಾಳಿ ಕಾವ್ಯ ಅವರನ್ನು ಎದುರಿಸಿ 8-0 ಅಂಕಗಳಿಂದ ಜಯಗಳಿಸಿದರು. ಶಕ್ತಿಶಾಲಿ ಪಂಚ್ ಮೂಲಕ ಎದುರಾಳಿ ವಿರುದ್ಧ ಆರಂಭದಿಂದಲೇ ಪ್ರಹಾರ ನಡೆಸಿದ ಸನಿಲ್ ಎದುರಾಳಿಗೆ ಒಂದೇ ಒಂದು ಅಂಕವನ್ನೂ ಬಿಟ್ಟುಕೊಡಲಿಲ್ಲ.

ಸತತ 8 ವರ್ಷದ ರಾಷ್ಟ್ರೀಯ ಚಾಂಪಿಯನ್

ಸತತ 8 ವರ್ಷದ ರಾಷ್ಟ್ರೀಯ ಚಾಂಪಿಯನ್

65 ಕೆ.ಜಿ.ಗಿಂತ ಮೇಲ್ಪಟ್ಟ ತೂಕದ ಬ್ಲ್ಯಾಕ್‍ಬೆಲ್ಟ್ ವಿಭಾಗದಲ್ಲಿ ಸ್ಪರ್ಧಿಸಿದ ಕವಿತಾ ಸನಿಲ್ ಮೂರು ಬಾರಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕ ಪಡೆದವರು. 1996ರಿಂದ 2008ರವರೆಗೆ ಸತತ ರಾಷ್ಟ್ರೀಯ ಚಾಂಪಿಯನ್ ಆಗಿದ್ದ ಅವರು 9 ವರ್ಷದ ಬಳಿಕ ಫೈಟ್ ರಿಂಗ್ ಗೆ ಇಳಿದಿದ್ದರು.

ಎರಡು ತಿಂಗಳ ಅಭ್ಯಾಸ

ಎರಡು ತಿಂಗಳ ಅಭ್ಯಾಸ

ಹುಟ್ಟೂರಿನಲ್ಲಿ ರಾಷ್ಟ್ರೀಯ ಕರಾಟೆ ಚಾಂಪಿಯನ್‍ಶಿಪ್‍ ನಡೆದಿದ್ದ ಹಿನ್ನೆಲೆಯಲ್ಲಿ ನಗರದ ಮೇಯರ್ ಆಗಿ ಕಾರ್ಯಭಾರಗಳ ಒತ್ತಡದ ನಡುವೆಯೂ ಸತತ ಎರಡು ತಿಂಗಳಿಂದ ಅಭ್ಯಾಸ ನಡೆಸಿದ್ದರು.

English summary
Mangaluru Mayor Kavitha Sanil won the gold medal in the Indian Karate Championship-2017 at Mangalore on November 5th. In the finals Kavita Sanil fought against emerging karate star Nisha Nayak won by 7-3 lead.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X