ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗ್ಳೂರಿನ ಫಲ್ಗುಣಿ ನದಿ ಬಳಿ ತಲೆಯೆತ್ತಲಿದೆ ಸಾಹಸ ಕ್ರೀಡೆಗಳ ತಾಣ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಮೇ 26 : ಬೀಚ್ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿರುವ ಮಂಗಳೂರು ಜಿಲ್ಲೆ ಸಾಹಸ ಕ್ರೀಡೆಗಳ ತಾಣವಾಗುವತ್ತ ಹೆಜ್ಜೆ ಇಟ್ಟಿದೆ.

ಈ ಬಗ್ಗೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಈಗಾಗಲೇ ರೂಪುರೇಷೆ ಸಿದ್ಧಪಡಿಸುತ್ತಿದೆಯಲ್ಲದೆ ಪಿಲಿಕುಳ ಸಮೀಪದ ಫಲ್ಗುಣಿ ನದಿಯ ಲಾಡ್ಜಿನಲ್ಲಿ ಬಂಗೀ ಜಂಪಿಂಗ್ ಸ್ಟೇಶನ್ ವೊಂದನ್ನುದನ್ನು ನಿರ್ಮಿಸಿ ಅಲ್ಲಿ ವಿವಿಧ ಸಾಹಸ ಕ್ರೀಡೆಗಳಿಗೆ ಸವಲತ್ತುಗಳನ್ನು ಒದಗಿಸುಲು ಯೋಚಿಸುತ್ತಿದೆ.[ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಸರ್ಫಿಂಗ್ ಕ್ರೀಡೆಗೆ ಚಾಲನೆ]

4.45 ಕೋಟಿ ರು. ಮೊತ್ತದ ಪ್ರಸ್ತಾವಿತ ಯೋಜನೆ ವಾಂಡರ್ ಲಸ್ಟ್ ಅಡ್ವೆಂಚರ್ ಸ್ಪೋಟ್ರ್ಸ್ ಎಂಬ ಸಂಸ್ಥೆಯ ಸಹಭಾಗಿತ್ವದಲ್ಲಿ ಜಾರಿಯಾಗಲಿದೆಯಲ್ಲದೆ ಪ್ರವಾಸೋದ್ಯಮ ಇಲಾಖೆ ಮತ್ತು ವಾಂಡರ್ ಲಸ್ಟ್ 70:30 ಅನುಪಾತದಲ್ಲಿ ಹೂಡಿಕೆ ಮಾಡಲಿವೆ ಎಂದು ತಿಳಿದು ಬಂದಿದೆ.

ಮಂಗಳೂರು ಸೇರಿದಂತೆ ರಾಜ್ಯದ ಇತರ ಎಂಟು ಕಡೆಗಳಲ್ಲಿ ಇಂತಹ ಯೋಜನೆ ಕೈಗೊಳ್ಳುವ ಸಲುವಾಗಿ ವಾಂಡರ್ ಲಸ್ಟ್ ಸಂಸ್ಥೆ ಅಧ್ಯಯನ ನಡೆಸಿದೆ. ಬುಂಗೀ ಸ್ಟೇಶನ್ ನಲ್ಲಿ ಯಾವು-ಯಾವ ಕ್ರೀಡೆಗಳು ಇರಲಿವೆ ಎನ್ನುವುದನ್ನು ಮುಂದೆ ಓದೆ.[ದೇಶದ ಅತಿ ದೊಡ್ಡ ಸರ್ಫಿಂಗ್ ಸಾಹಸಕ್ಕೆ ಸಜ್ಜಾದ ಸಸ್ಲಿಹಿತ್ಲು]

ಬಂಗೀ ಸ್ಟೇಶನ್ ನಲ್ಲಿ ಯಾವ-ಯಾವ ಕ್ರೀಡೆಗಳು

ಬಂಗೀ ಸ್ಟೇಶನ್ ನಲ್ಲಿ ಯಾವ-ಯಾವ ಕ್ರೀಡೆಗಳು

ಈ ಬಂಗೀ ಸ್ಟೇಶನ್ ನಲ್ಲಿ ಬುಂಗೀ ಜಂಪಿಂಗ್, ಕಮಾಂಡೋ ಸ್ಲಿದರಿಂಗ್, ಕೇಜ್ ರೈಡ್ಸ್, ಡ್ರಿಂಕ್ಸ್ ಇನ್ ದಿ ಸ್ಕೈ, ಜಂಪ್ ವಿಡಿಯೋ, ಜಂಪ್ ಫೋಟೋಗ್ರಾಫ್, ಮೊಟಾರ್ ಸೈಕಲ್ ಡರ್ಟ್ ಟ್ರ್ಯಾಕ್, ವುಡನ್ ರಾಕ್ ಕ್ಲೈಂಬಿಂಗ್ ಹೀಗೆ ಮುಂತಾದ ಸಾಹಸಿಕ ಚಟುವಟಿಕೆಗಳಿಗೆ ಅವಕಾಶ ನೀಡಲು ಉದ್ದೇಶಿಸಲಾಗಿದೆ.

ಹತ್ತರಿಂದ 60 ವರ್ಷ ವಯೋಮಿತಿಯವರಿಗೆ

ಹತ್ತರಿಂದ 60 ವರ್ಷ ವಯೋಮಿತಿಯವರಿಗೆ

ಹತ್ತರಿಂದ 60 ವರ್ಷ ವಯೋಮಿತಿಯವರಿಗಾಗಿ ಮನರಂಜನಾ ಕ್ರೀಡೆಗಳಿಗೂ ಬಂಗೀ ಸ್ಟೇಶನ್ ನಲ್ಲಿ ಅವಕಾಶವಿರಲಿದೆ.

ನಾಲ್ಕರಿಂದ 12 ವರ್ಷದ ಮಕ್ಕಳಿಗೆ

ನಾಲ್ಕರಿಂದ 12 ವರ್ಷದ ಮಕ್ಕಳಿಗೆ

ನಾಲ್ಕರಿಂದ 12 ವರ್ಷದ ಮಕ್ಕಳಿಗೆ ರಾಕೆಟ್ ಝೂಮ್, ಬಾಕ್ಸ್ ಸ್ಪೈಡರ್ ವೆಬ್, ರೋಪ್ ಬ್ರಿಡ್ಜ್, ರಬ್ಬರ್ ಸ್ವಿಮ್ಮಿಂಗ್ ಪೂಲಿನಲ್ಲಿ ಬೋಟಿಂಗ್ ಟ್ರ್ಯಾಂಪೋಲಿನ್ ಜಂಪಿಂಗ್ ಜ್ಯಾಕ್ ಮುಂತಾದವುಗಳಿರುತ್ತವೆ.

ಪಿಲಿಕುಳ ಸಮೀಪ 6.5 ಎಕರೆ ಜಾಗ

ಪಿಲಿಕುಳ ಸಮೀಪ 6.5 ಎಕರೆ ಜಾಗ

ಪಿಲಿಕುಳ ಸಮೀಪ ಈ ಉದ್ದೇಶಕ್ಕಾಗಿ 6.5 ಎಕರೆ ಜಾಗವನ್ನು ಸರಕಾರದ ನಿರ್ದೇಶನದನ್ವಯ ಗುರುತಿಸಲಾಗಿದೆ ಎಂದು ಜಿಲ್ಲಾ ಪ್ರವಾಸೋದ್ಯಮ ಅಧಿಕಾರಿ ಸುಧೀರ್ ಟಿ ಗೌಡ ಹೇಳಿದ್ದಾರೆ.

English summary
Mangaluru is getting ready for 'Bungee Jumping' play in phalguni river Mangaluru, to attract more touristers.6.5 acres to been alloted for this purpose.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X