ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಾವ ಸೀಸನ್ ನಲ್ಲೂ ಮಂಗಳೂರಿನ ಐಡಿಯಲ್ ಐಸ್ ಕ್ರೀಂ ಅಂದರೆ... ಆಹಾ!

By ಮಂಗಳೂರು ಪ್ರತಿನಿಧಿ
|
Google Oneindia Kannada News

ಕಡಲ ತಡಿಯ ನಗರ ಮಂಗಳೂರು ಎಂದೊಡನೆ ನೆನಪಾಗುವುದು ತುಳುನಾಡಿನ ವಿಶಿಷ್ಟ ಸಂಸ್ಕೃತಿ, ಪರಂಪರೆ, ಭೂತಾರಾಧನೆ, ಕರಾವಳಿಯ ಖಾದ್ಯಗಳು , ರುಚಿಕರ ಮೀನಿನ ಖಾದ್ಯಗಳು...

ಆದರೆ, ಮಂಗಳೂರು ನಗರವು ಐಸ್ ಕ್ರೀಮ್ ಗೂ ಭಾರೀ ಫೇಮಸ್. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಮಂಗಳೂರಿನ ಐಡಿಯಲ್ ಐಸ್ ಕ್ರೀಮ್ ಪಾರ್ಲರ್, ಪಬ್ಬಾಸ್ ಐಸ್ ಕ್ರೀಮ್ ಪಾರ್ಲರ್ ಗೆ ಭೇಟಿ ನೀಡಿ, ಇಲ್ಲಿಯ ವಿವಿಧ ಬಗೆಯ ಐಸ್ ಕ್ರೀಮ್ ಸವಿಯದೆ ತೆರಳುವುದಿಲ್ಲ. 'ಯಮ್ಮಿ' ರುಚಿಯಿಂದಲೇ ಐಡಿಯಲ್ ಐಸ್‍ಕ್ರೀಂ ದೇಶಾದ್ಯಂತ ಹೆಸರು ಮಾಡಿದೆ.

ಮಂಗಳೂರಿನ ಐಡಿಯಲ್ ಐಸ್‍ಕ್ರೀಂಗೆ 'ಬೆಸ್ಟ್ ಇನ್ ಇಂಡಿಯಾ' ಪ್ರಶಸ್ತಿಮಂಗಳೂರಿನ ಐಡಿಯಲ್ ಐಸ್‍ಕ್ರೀಂಗೆ 'ಬೆಸ್ಟ್ ಇನ್ ಇಂಡಿಯಾ' ಪ್ರಶಸ್ತಿ

ಮಂಗಳೂರು ಐಸ್ ಕ್ರೀಮ್ ರಾಜಧಾನಿಯಾಗಿ ಬೆಳೆಯುತ್ತಿದೆ. ತನ್ನ ವಿಶಿಷ್ಟ ಸ್ವಾದದಿಂದ ಐಸ್ ಕ್ರೀಮ್ ಪ್ರಿಯರನ್ನು ಕೈಬೀಸಿ ಕರೆಯುತ್ತಿದೆ. ಮಂಗಳೂರಿನಲ್ಲಿ ಈಗಾಗಲೇ 20ಕ್ಕೂ ಹೆಚ್ಚು ಐಸ್‌ ಕ್ರೀಮ್‌ ಪಾರ್ಲರ್ ಗಳು ಕಾರ್ಯ ನಿರ್ವಹಿಸುತ್ತಿವೆ. ಒಂದು ಮಾಹಿತಿ ಪ್ರಕಾರ ಮಂಗಳೂರಿನಲ್ಲಿ ಮೊದಲ ಐಸ್ ಕ್ರೀಮ್ ಪಾರ್ಲರ್ 1960ರಲ್ಲಿ ಆರಂಭವಾಯಿತು. ನಗರದ ಬಾವುಟಗುಡ್ಡೆಯಲ್ಲಿ ರೆಯಾನ್ಸ್ ಐಸ್‌ ಕ್ರೀಮ್‌ ಅಂಗಡಿ 1960ರಲ್ಲಿ ಆರಂಭವಾಗಿತ್ತು.

1974ರಲ್ಲಿ ಐಸ್‌ ಕ್ರೀಮ್‌ ಪಾರ್ಲರ್ ಆರಂಭ

1974ರಲ್ಲಿ ಐಸ್‌ ಕ್ರೀಮ್‌ ಪಾರ್ಲರ್ ಆರಂಭ

ಆ ನಂತರ ನಗರದ ಹಂಪನಕಟ್ಟೆ, ರಥಬೀದಿ ಮುಂತಾದೆಡೆ 1970ರ ವೇಳೆಗೆ ಸಣ್ಣ ಸಣ್ಣ ಐಸ್‌ ಕ್ರೀಮ್‌ ಅಂಗಡಿಗಳು ಕಾರ್ಯಾಚರಿಸಲು ಆರಂಭಿಸಿದವು. 1974ರಲ್ಲಿ ಅತ್ಯಂತ ಜನಪ್ರಿಯ ಐಡಿಯಲ್ ಐಸ್‌ ಕ್ರೀಮ್‌ ಪಾರ್ಲರ್ ಆರಂಭವಾಯಿತು. ಮಂಗಳೂರಿನಲ್ಲಿ ಆರಂಭವಾದ ಮೊದಲ ಪಾರ್ಲರ್ ಎಂಬ ಹೆಗ್ಗಳಿಕೆ ಐಡಿಯಲ್ ಐಸ್ ಕ್ರೀಮ್ ಪಾರ್ಲರ್ ಗಿದೆ. ಐಡಿಯಲ್ ಅರಂಭದ ದಿನಗಳಿಂದಲೇ ಜನರಿಗೆ ವಿವಿಧ ಬಗೆಯ- ರುಚಿಕರ ಐಸ್‌ ಕ್ರೀಮ್‌ ಪರಿಚಯಿಸಿ, ತನ್ನತ್ತ ಸೆಳೆಯ ತೊಡಗಿದೆ. ಆರಂಭಿಕ ಹಂತದಲ್ಲಿ ಬೌಲ್‌, ಕೋನ್, ಕಪ್‌ ಐಸ್‌ ಕ್ರೀಮ್‌ ಮಾತ್ರ ಪ್ರಚಲಿತದಲ್ಲಿತ್ತು. ಬರುಬರುತ್ತಾ ಐಸ್‌ ಕ್ರೀಮ್‌ನಲ್ಲಿಯೇ ಹೊಸ ರುಚಿಗಳ ಅನ್ವೇಷಣೆ ಆರಂಭವಾಗಿ, ನೂತನ ಫ್ಲೇವರ್, ಗಡ್ ಬಡ್ ಮುಂತಾದವುಗಳನ್ನು ಸವಿಯುವ ಅವಕಾಶ ಐಸ್‌ ಕ್ರೀಮ್‌ ಪ್ರಿಯರಿಗೆ ಲಭಿಸಿತು.

ಬಾಳೆಹಣ್ಣು, ಹಲಸಿನ ಹಣ್ಣು ಮುಂತಾದ ಐಸ್‌ ಕ್ರೀಮ್‌

ಬಾಳೆಹಣ್ಣು, ಹಲಸಿನ ಹಣ್ಣು ಮುಂತಾದ ಐಸ್‌ ಕ್ರೀಮ್‌

ಇದರ ಜತೆಗೆ ಈ ಎಲ್ಲ ಪಾರ್ಲರ್ ಗಳೂ ಚಿಕ್ಕು, ಟೆಂಡರ್ ಕೋಕೋನಟ್ , ಬಾಳೆಹಣ್ಣು, ಹಲಸಿನ ಹಣ್ಣು ಮುಂತಾದವುಗಳಲ್ಲೂ ಐಸ್‌ ಕ್ರೀಮ್‌ ತಯಾರಿಸಿ ಯಶಸ್ವಿಯಾದವು. ಈಗ ಹೊಸತಾಗಿ ಪಿಜಾ ಐಸ್‌ ಕ್ರೀಮ್‌, ಪಾನ್ ಐಸ್‌ ಕ್ರೀಮ್‌ ಗಳೂ ಗ್ರಾಹಕರನ್ನು ಆಕರ್ಷಿಸುತ್ತಿವೆ. ಆದರೆ ಇಂದಿಗೂ ಜನರ ಫೇವರೆಟ್ ಗಡ್ ಬಡ್ ಐಸ್ ಕ್ರೀಮ್. ಎಲ್ಲರ ಬಾಯಲ್ಲೂ ನೀರೂರಿಸುವಂತೆ ಮಾಡುವ ಐಸ್‌ಕ್ರೀಮ್‌ನಲ್ಲಿ ಹೆಸರು ಕೇಳಿದರೆ ಮೊದಲು ನೆನಪಿಗೆ ಬರುವುದು ಗಡ್ ಬಡ್. ಈ ಗಡ್ ಬಡ್ ಹೆಸರಿನಷ್ಟೇ ವಿಚಿತ್ರ ಇದರ ಆರಂಭದ ಕಥೆ. ಗಡ್ ಬಡ್ ಐಸ್‌ಕ್ರೀಮ್‌ ಹುಟ್ಟಿದ್ದು ಉಡುಪಿಯ ಡಯಾನ ಸರ್ಕಲ್‌ ಬಳಿ ಇದ್ದ ಡಯಾನ ಹೊಟೇಲ್ ನಲ್ಲಿ ಎಂದು ಹೇಳಲಾಗುತ್ತದೆ.

ಗಡಿಬಿಡಿಯಲ್ಲಿ ಮಾಡಿದ್ದರಿಂದ ಗಡ್ ಬಡ್

ಗಡಿಬಿಡಿಯಲ್ಲಿ ಮಾಡಿದ್ದರಿಂದ ಗಡ್ ಬಡ್

ಹೊಟೇಲ್ ಗೆ ಬಂದಿದ್ದ ಪ್ರವಾಸಿಗರು ಐಸ್‌ಕ್ರೀಮ್‌ ಕೇಳುತ್ತಾರೆ. ಆದರೆ ಇರುವ ಸ್ಟಾಕ್‌ನಲ್ಲಿ ಅಲ್ಲಿದ್ದವರಿಗೆ ಕೊಡುವಷ್ಟು ಐಸ್‌ಕ್ರೀಮ್‌ ಇರುವುದಿಲ್ಲ. ಆಗ ಹೊಟೇಲಿನ ಮಾಲೀಕ ಮೋಹನ್‌ದಾಸ್‌ ಪೈ ಇರುವ ಐಸ್‌ಕ್ರೀಮ್‌ ಫ್ಲೇವರ್ ಗಳನ್ನು ಸೇರಿಸಿ ಒಂದು ಗಾಜಿನ ಲೋಟಕ್ಕೆ ಹಾಕಿ, ಅದಕ್ಕೆ ಕತ್ತರಿಸಿದ ಹಣ್ಣುಗಳು, ಡ್ರೈ ಫ್ರೂಟ್ಸ್, ಜೆಲ್ಲಿ ಮತ್ತು ಸಾಸ್ ಮಿಕ್ಸ್ ಮಾಡಿ ಕೊಟ್ಟರು. ಇದು ಪ್ರವಾಸಿಗರಿಗೆ ಪ್ರಿಯವಾಗುತ್ತದೆ. ಇದರ ಹೆಸರೇನು ಎಂದು ಅವರು ಕೇಳಿದಾಗ ಪೈ ಅವರು, ಗಡಿಬಿಡಿಯಲ್ಲಿ ಮಾಡಿದ್ದರಿಂದ ಅದರ ಹೆಸರು 'ಗಡಿಬಿಡಿ' ಎನ್ನುತ್ತಾರೆ. ಇದು ಮುಂದೆ ಗಡ್ ಬಡ್ ಎಂದು ಖ್ಯಾತಿ ಪಡೆದು, ಹೊಟೇಲ್ ಮೆನುವಿನಲ್ಲೂ ಸೇರಿಕೊಂಡಿತು ಎಂದು ಹೇಳಲಾಗುತ್ತದೆ.

4 ಚಿನ್ನದ ಪದಕ ಹಾಗೂ ಒಂದು ಬೆಳ್ಳಿ ಪದಕ

4 ಚಿನ್ನದ ಪದಕ ಹಾಗೂ ಒಂದು ಬೆಳ್ಳಿ ಪದಕ

ಈ ಗಡ್ ಬಡ್ ಐಸ್ ಕ್ರೀಮ್ ಐಡಿಯಲ್ ಪಾರ್ಲರ್ ಗೆ ಬರುವ ಗ್ರಾಹಕರ ಹಾಟ್ ಫೇವರಿಟ್ ಆಗಿದೆ. ಮಳೆಗಾಲವಿರಲಿ, ಚಳಿಗಾಲವಿರಲಿ, ಬಿರು ಬಿಸಿಲಿನ ಬೇಸಿಗೆಗಾಲ ಇರಲಿ ಗಡ್ ಬಡ್ ಸೇರಿದಂತೆ ಇತರ ಐಸ್ ಕ್ರೀಮ್ ಗೆ ಐಡಿಯಲ್ ಪಾರ್ಲರ್ ನಲ್ಲಿ ಬೇಡಿಕೆ ಕಡಿಮೆ ಆಗುವುದೇ ಇಲ್ಲ. ದಿ ಗ್ರೇಟ್ ಇಂಡಿಯನ್ ಐಸ್‍ ಕ್ರೀಂ ಅಂಡ್ ಫ್ರೋಝನ್ ಡೆಸರ್ಟ್ ಕಾಂಟೆಸ್ಟ್ ನಲ್ಲಿ 'ಬೆಸ್ಟ್ ಇನ್ ಇಂಡಿಯಾ' ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಈ ಸ್ಪರ್ಧೆಯಲ್ಲಿ ಐಡಿಯಲ್ ಐಸ್‍ ಕ್ರೀಂ 4 ಚಿನ್ನದ ಪದಕ ಹಾಗೂ ಒಂದು ಬೆಳ್ಳಿ ಪದಕವನ್ನು ಬಾಚಿಕೊಂಡಿತ್ತು. ಪ್ರಶಸ್ತಿ ಗೆದ್ದ ವಿಶಿಷ್ಟ ಐಸ್ ಕ್ರೀಂ ಗಳು ಐಡಿಯಲ್ ಐಸ್‍ಕ್ರೀಂ ಈ ಸ್ಪರ್ಧೆಗಾಗಿ ಆವಿಷ್ಕರಿಸಿದ ಮ್ಯಾಂಗೊ ಸೊರ್ಬೆಟ್, ಮರ್ಝಿ ಪಾನ್, ವೆನಿಲ್ಲಾ ಫ್ರೋಝನ್ ಡೆಸರ್ಟ್ ಐಸ್‍ಕ್ರೀಂ ಗಳು ಚಿನ್ನದ ಪದಕಗಳೊಂದಿಗೆ 'ಬೆಸ್ಟ್ ಇನ್ ಕ್ಲಾಸ್' ಕೆಟಗರಿಯಲ್ಲಿ ಪ್ರಶಸ್ತಿ ಪಡೆದಿವೆ.

English summary
Ideal Ice Cream Parlor very famous in Mangaluru, Dakshina Kannada district. Here is the interesting facts about ice cream parlor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X