ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾಹಿತ್ಯೋತ್ಸವಕ್ಕೆ ಸಜ್ಜಾದ ಮಂಗಳೂರು: ಡಾ.ಎಸ್‌.ಎಲ್‌.ಭೈರಪ್ಪಗೆ ಜೀವಮಾನ ಸಾಧನೆ ಪ್ರಶಸ್ತಿ

|
Google Oneindia Kannada News

ಮಂಗಳೂರು, ಅಕ್ಟೋಬರ್. 21: ಮಂಗಳೂರು ಸಾಹಿತ್ಯ ಉತ್ಸವಕ್ಕೆ ಸಜ್ಜಾಗುತ್ತಿದೆ. 'ಐಡಿಯಾ ಆಫ್ ಭಾರತ್' ಅಥವಾ 'ಭಾರತದ ಕಲ್ಪನೆ' ಎಂಬ ಪರಿಕಲ್ಪನೆಯಡಿ ಇದೇ ಬರುವ ನವೆಂಬರ್. 3 ಮತ್ತು 4ರಂದು ನಗರದ ಟಿ.ಎಂ.ಎ.ಪೈ ಸಭಾಂಗಣದಲ್ಲಿ ಮಂಗಳೂರು ಸಾಹಿತ್ಯೋತ್ಸವ-2018 ನಡೆಯಲಿದೆ.

ವಸುಧೈವ ಕುಟುಂಬಕಂ ಎಂಬ ತತ್ವದಲ್ಲಿ ಭಾರತ ನಂಬಿಕೆ ಹೊಂದಿದೆ. ಈ ಕುರಿತು ದೇಶದ ಪ್ರಸಿದ್ಧ ಚಿಂತಕರು ಮಂಗಳೂರಿನಲ್ಲಿ ಎರಡು ದಿನಗಳ ಸಾಹಿತ್ಯೋತ್ಸವದಲ್ಲಿ ಚಿಂತನ ಮಂಥನ ನಡೆಸಲಿದ್ದಾರೆ.

ಈ ಬಾರಿಯ ಬೆಂಗಳೂರು ಸಾಹಿತ್ಯ ಉತ್ಸವಕ್ಕೆ ಚೇತನ್ ಭಗತ್‌ ಇಲ್ಲಈ ಬಾರಿಯ ಬೆಂಗಳೂರು ಸಾಹಿತ್ಯ ಉತ್ಸವಕ್ಕೆ ಚೇತನ್ ಭಗತ್‌ ಇಲ್ಲ

ಪ್ರಾಚೀನ ವಿಜ್ಞಾನ, ವೈದ್ಯಕೀಯ, ಬಾಹ್ಯಾಕಾಶ ತಂತ್ರಜ್ಞಾನ, ಯೋಗ ಹೀಗೆ ಭಾರತದ ಹತ್ತು ಹಲವು ಕೊಡುಗೆಗಳ ಮೂಲಕ ಭಾರತವನ್ನು ನೋಡುವ ದೃಷ್ಟಿಕೋನ, ಪ್ರಸ್ತುತ ಎದುರಾಗಿರುವ ಸವಾಲುಗಳಿಗೆ ದೇಶವನ್ನು ಸಜ್ಜುಗೊಳಿಸುವ ಬಗೆಗಿನ ಚರ್ಚೆಗಳು ಇಲ್ಲಿ ನಡೆಯಲಿವೆ.

Mangaluru gears up for first ever Literary festival

ವಿಚಾರ ಮಂಡನೆ, ಚರ್ಚೆ, ಸಂವಾದ, ಪುಸ್ತಕ ವಿಮರ್ಶೆ, ಕಾರ್ಯಾಗಾರ, ಪುಸ್ತಕ ಮತ್ತು ಚಿತ್ರಕಲಾ ಪ್ರದರ್ಶನಗಳು ಈ ಉತ್ಸವದ ಭಾಗವಾಗಿ ಇರಲಿದೆ.

ಸೆ. 30ಕ್ಕೆ 'ಜಯನಗರದ ಹುಡುಗಿ' ಪುಸ್ತಕ ಬಿಡುಗಡೆ; ಮೇಘನಾ ಮನದ ಮಾತುಸೆ. 30ಕ್ಕೆ 'ಜಯನಗರದ ಹುಡುಗಿ' ಪುಸ್ತಕ ಬಿಡುಗಡೆ; ಮೇಘನಾ ಮನದ ಮಾತು

ಹಿರಿಯ ಸಾಹಿತಿ ರಾಜೀವ್‌ ಮಲ್ಹೋತ್ರಾ, ಡಾ.ಡೇವಿಡ್ ಫ್ರಾಲೆ, ಮೇಜರ್ ಗೌರವ್ ಆರ್ಯ, ಆರ್‌.ಜಗನ್ನಾಥನ್, ಮಧುಕಿಶ್ವರ್, ಸಹನಾ ವಿಜಯಕುಮಾರ್, ಶೆಫಾಲಿ ವೈದ್ಯ, ಪ್ರಕಾಶ್ ಬೆಳವಾಡಿ, ವಿವೇಕ್ ಅಗ್ನಿಹೋತ್ರಿ, ಸಂದೀಪ್‌ ಬಾಲಕೃಷ್ಣ, ಆನಂದ್ ರಂಗನಾಥನ್, ಚಕ್ರವರ್ತಿ ಸೂಲಿಬೆಲೆ, ರೋಹಿತ್ ಚಕ್ರತೀರ್ಥ, ಶಡ್ಡಾಲು ರಾನಡೆ, ಮಕರಂದ್ ಪರಾಂಜಪೆ ಮತ್ತು ಅನಿರ್ಬನ್ ಗಂಗೂಲಿ ಮುಂತಾದ ಪ್ರಖ್ಯಾ ಸಾಹಿತಿಗಳು ಭಾಗವಹಿಸಲಿದ್ದಾರೆ .

Mangaluru gears up for first ever Literary festival

ಪೂರ್ಣಚಂದ್ರ ತೇಜಸ್ವಿ ಅವರ ನಾನು ಮೆಚ್ಚಿದ ಕೃತಿಗಳುಪೂರ್ಣಚಂದ್ರ ತೇಜಸ್ವಿ ಅವರ ನಾನು ಮೆಚ್ಚಿದ ಕೃತಿಗಳು

ಈ ಸಾಹಿತ್ಯ ಉತ್ಸದ ಅಂಗವಾಗಿ ಹಿರಿಯ ಸಾಹಿತಿ ಡಾ.ಎಸ್‌.ಎಲ್‌.ಭೈರಪ್ಪ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲು ನಿರ್ಧರಿಸಲಾಗಿದೆ.

English summary
Mangaluru gears up for first ever Literary festival which is scheduled to take place on November 03 and 04.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X