ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರಾವಳಿಯ ಪ್ರಬಲ ಜಾತಿಗಳ ನಡುವೆ ಕಿಚ್ಚು ಹಚ್ಚಿದ ಮಹಿಳಾ ಅಧಿಕಾರಿ ವರ್ಗಾವಣೆ!

By ಮಂಗಳೂರು, ಪ್ರತಿನಿಧಿ
|
Google Oneindia Kannada News

ಮಂಗಳೂರು, ಜನವರಿ 29: ಮರಗಳ್ಳರ ವಿರುದ್ಧ ಕ್ರಮ ಕೈಗೊಂಡ ಅರಣ್ಯ ಸಂಚಾರಿ ದಳದ ಮಹಿಳಾ ಅಧಿಕಾರಿ ಸಂಧ್ಯಾ ಸಚಿನ್ ಅವರಿಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವರ್ಗಾವಣೆ ಶಿಕ್ಷೆ ಕೊಡಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಉಡುಪಿಯಲ್ಲಿ ಅರಣ್ಯ ಸಂಚಾರಿ ದಳ ವಲಯ ಅರಣ್ಯಾಧಿಕಾರಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಅರಣ್ಯ ಸಂಚಾರಿ ದಳದ ಪ್ರಭಾರ ಅಧಿಕಾರಿ ಆಗಿರುವ ಸಂಧ್ಯಾ ಸಚಿನ್, ಇತ್ತಿಚೇಗೆ ಬೆಳ್ತಂಗಡಿ ತಾಲೂಕಿನಲ್ಲಿ ಅಕ್ರಮ ಮರ ಸಾಗಾಟಗಾರರ ಮರ ಮತ್ತು ವಾಹನ ವಶಪಡಿಸಿಕೊಂಡಿದ್ದರು. ಅದೇ ಈಗ ಅಧಿಕಾರಿಗೆ ಮುಳುವಾಗಿದೆ.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮನವಿಯಂತೆ ಜನವರಿ 26ರಂದು ದೂರದ ಬೀದರ್‌ಗೆ ವರ್ಗಾವಣೆ ಮಾಡಲಾಗಿದೆ. ವರ್ಗಾವಣೆ ಮಾಡುವಂತೆ ಶಾಸಕ ಹರೀಶ್ ಪೂಂಜಾ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಬರೆದಿರುವ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಶಾಸಕರ ನಡೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಸಮುದ್ರಕ್ಕೆ ಹಾರಿದ ಪ್ರೇಯಸಿಯ ರಕ್ಷಣೆಗಾಗಿ ಜಿಗಿದ ಪ್ರೇಮಿ-ಪ್ರೇಯಸಿ ಬಚಾವ್, ಪ್ರೇಮಿ ಸಾವುಸಮುದ್ರಕ್ಕೆ ಹಾರಿದ ಪ್ರೇಯಸಿಯ ರಕ್ಷಣೆಗಾಗಿ ಜಿಗಿದ ಪ್ರೇಮಿ-ಪ್ರೇಯಸಿ ಬಚಾವ್, ಪ್ರೇಮಿ ಸಾವು

ಜಾತಿ ಸಂಘಟನೆ ಮೊರೆ ಹೋಗಿರುವ ಸಂಧ್ಯಾ ಸಚಿನ್:
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ನಡೆಯ ಬಗ್ಗೆ ನ್ಯಾಯ ಒದಗಿಸಿಕೊಡುವಂತೆ ಮಹಿಳಾ ಅಧಿಕಾರಿ ಸಂಧ್ಯಾ ಸಚಿನ್ ಜಾತಿ ಸಂಘಟನೆಯ ಮೊರೆ ಹೋಗಿದ್ದಾರೆ. ಬೆಳ್ತಂಗಡಿ ನಾರಾಯಣ ಗುರುಸ್ವಾಮಿ ಸೇವಾ ಸಂಘಕ್ಕೆ ಪತ್ರ ಬರೆದಿದ್ದು, ಶಾಸಕರು ವೈಯಕ್ತಿಕ ದ್ವೇಷದಿಂದ ಈ ವರ್ಗಾವಣೆ ಮಾಡಿಸಿದ್ದಾರೆ. ಇದೊಂದು ಏಕಪಕ್ಷೀಯ ಆದೇಶ ಎಂದು ಆರೋಪಿಸಿದ್ದಾರೆ. ಮರಗಳ್ಳರಿಗೆ ಅನುಕೂಲ ಮಾಡಿಕೊಡಲು ಶಾಸಕರು ಕೋಪಗೊಂಡು ನನ್ನಲ್ಲಿ ವೈಯಕ್ತಿಕ ದ್ವೇಷ ಹಗೆತನ‌ ಸಾಧಿಸಿ ಬೀದರ್‌ಗೆ ವರ್ಗಾವಣೆ ಮಾಡಿರುವುದಾಗಿ ಆರೋಪಿಸಿದ್ದಾರೆ. ಅಧಿಕಾರಿ ಸಂಧ್ಯಾ ಸಚಿನ್ ಬರೆದಿರುವ ಈ ಪತ್ರ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಪರ-ವಿರೋಧದ ಚರ್ಚೆಗೆ ಕಾರಣವಾಗಿದೆ.

Mangaluru: Female officer Sandhya Sachin Transfer caughts fire among dominant castes

ಸಂಧ್ಯಾ ಸಚಿನ್ ವಿರುಧ್ ತೀವ್ರತರ ಆರೋಪ:
ಅರಣ್ಯ ಅಧಿಕಾರಿ ಸಂಧ್ಯಾ ಸಚಿನ್ ಬಗ್ಗೆಯೂ ತೀವ್ರತರದ ಆರೋಪ ಕೇಳಿ ಬಂದಿದೆ. ತನ್ನ ವರ್ಗಾವಣೆ ಪ್ರಶ್ನಿಸಿ ಸರಕಾರಿ ಅಧಿಕಾರಿಯೊಬ್ಬರು ತನ್ನ ಜಾತಿ ಕಾರ್ಡ್‌ ಬಳಸಲು ಯತ್ನಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ದ ಈ ವರ್ಗಾವಣೆ ಮಾಡಿರುವ ಆರೋಪ ಕೇಳಿ ಬಂದಿದ್ದು, ನ್ಯಾಯ ಒದಗಿಸಿಕೊಡುವಂತೆ ಬಿಲ್ಲವ ಸಂಘಟನೆ ಮೊರೆ ಹೋಗಿದ್ದಾರೆ.
ಮೇಲ್ನೋಟಕ್ಕೆ ಶಾಸಕ ಹರೀಶ್ ಪೂಂಜಾ ಮನವಿಯಂತೆ ಸಂಧ್ಯಾರನ್ನು ವರ್ಗಾವಣೆ ಮಾಡಿರುವುದಾಗಿ ಕಂಡು ಬಂದಿದೆ. ಈ ನಡುವೆ ಅರಣ್ಯ ಅಧಿಕಾರಿ ಸಂಧ್ಯಾ ಸಚಿನ್ ವರ್ಷದ ಹಿಂದೆ ಕಡಬದ ಐತೂರು ಅರಣ್ಯ ವಲಯದಲ್ಲಿ ಅಕ್ರಮವಾಗಿ ಮರಕಳ್ಳತನ ಆಗುತ್ತಿರುವ ಬಗ್ಗೆ ಸ್ಥಳೀಯ ನಿವಾಸಿಯೊಬ್ಬರು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿ ಹಾಗೂ ಸಚಿವರ ಗಮನಕ್ಕೆ ತಂದಿದ್ದರು. ಇದನ್ನು ಗುರಿಯಾಗಿಸಿ ಸಂಧ್ಯಾ ತನ್ನ ಸಿಬ್ಬಂದಿ ಜೊತೆ ಸೇರಿ ಮಧ್ಯರಾತ್ರಿ ದೂರುದಾರ ಪ್ರಸಾದ್ ಮನೆಗೆ ನುಗ್ಗಿ ದಾಂಧಲೆ ಮಾಡಿದ್ದರು. ಅಲ್ಲದೆ ಪ್ರಸಾದ್ ಮನೆಯ ಛಾವಣಿ ಮೇಲೆ ಹಾಕಿದ್ದ ಹತ್ತಾರು ವರ್ಷ ಹಳೆ ಮರದ ಹಲಗೆಗಳನ್ನು ವಶಪಡಿಸಿ ಪ್ರಸಾದ್ ಅವರನ್ನೇ ಆರೋಪಿಯನ್ನಾಗಿ ಮಾಡಲಾಗಿತ್ತು. ಈ ಘಟನೆ ವಿರೋಧಿಸಿ ಹಲವು ಸಂಘಟನೆಗಳು ಕಡಬ ತಹಶೀಲ್ದಾರ್ ಕಛೇರಿ ಮುಂದೆ ವಾರಗಳ ಕಾಲ ಉಪವಾಸ‌ ಸತ್ಯಾಗ್ರಹವನ್ನೂ ಮಾಡಿದ್ದರು.

ಸಂಧ್ಯಾ ಸಚಿನ್ ವರ್ಗಾವಣೆಗೆ ಕಡಬದ ನೀತಿ ಸಂಘಟನೆ ಹರ್ಷ:
ಮಹಿಳಾ ಅಧಿಕಾರಿ ಸಂಧ್ಯಾ ಸಚಿನ್ ವರ್ಗಾವಣೆ ಕುರಿತು ಕಡಬ ನೀತಿ ಸಂಘಟನೆ ಹರ್ಷ ವ್ಯಕ್ತಪಡಿಸಿದೆ. .ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನೀತಿ ಸಂಘಟನೆಯ ರಾಜ್ಯಾಧ್ಯಕ್ಷ ಜಯನ್, ಸಂಧ್ಯಾ ಸಚಿನ್ ವರ್ಗಾವಣೆ ಶಿಕ್ಷೆಯನ್ನು ದೇವರೇ ನೀಡಿದ್ದಾನೆ ಅಂತಾ ಭಾವಿಸುತ್ತೇವೆ. ಈ ಅಧಿಕಾರಿ ಕಡಬದ ಬಡ ಕುಟುಂಬಕ್ಕೆ ಮಧ್ಯರಾತ್ರಿ ಹೋಗಿ ಚಿತ್ರಹಿಂಸೆ ನೀಡಿದ್ದರು. ಕುಟುಂಬದ ಮೇಲೆ ಮರಕದ್ದ ಸುಳ್ಳು ಆರೋಪ ಮಾಡಿ, ಮನೆಯ ಮಹಿಳೆಯರ ಮೇಲೂ ದೌರ್ಜನ್ಯ ಎಸಗಿದ್ದರು. ಆ ಬಳಿಕ ಹಲವು ಪ್ರತಿಭಟನೆಗಳು ಅಧಿಕಾರಿಯ ವಿರುದ್ಧ ಮಾಡಿದ್ದೇವೆ. ನಮ್ಮ ಪ್ರಯತ್ನಕ್ಕೆ ಈಗ ಫಲ ಸಿಕ್ಕಿದೆ. ದೇವರು ನಮ್ಮ ಪರವಾಗಿದ್ದಾನೆ ಎನ್ನುವ ನಂಬಿಕೆಯಿದೆ ಎಂದು ಜಯನ್ ಸಂತಸ ವ್ಯಕ್ತಪಡಿಸಿದ್ದರು.

English summary
Mangaluru: Female officer Sandhya Sachin Transfer caughts fire among dominant castes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X