ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟಿಪ್ಪು ಗಲಭೆಗೆ ವಾಟ್ಸಪ್, ಫೇಸ್ ಬುಕ್ ಗಳೇ ಕಾರಣ: ಗುಪ್ತಚರ ಇಲಾಖೆ

By ಐಸಾಕ್ ರಿಚರ್ಡ್
|
Google Oneindia Kannada News

ಮಂಗಳೂರು, ನವೆಂಬರ್, 19 : ಜಿಲ್ಲೆಯಾದ್ಯಂತ ಇತ್ತೀಚಿಗೆ ನಡೆದ ಗುಂಪು ಘರ್ಷಣೆಗಳು, ಇನ್ನಿತರ ಅಹಿತಕರ ಘಟನೆಗಳಿಗೆ ಸಾಮಾಜಿಕ ಜಾಲತಾಣಗಳಾದ ವಾಟ್ಸಪ್, ಫೇಸ್ ಬುಕ್ ಗಳಲ್ಲಿ ಹರಿದಾಡಿದ ಪ್ರಚೋದಕಕಾರಿ ವದಂತಿಗಳೇ ಕಾರಣ ಎಂದು ಗುಪ್ತಚರ ಇಲಾಖೆ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿದೆ.

ಸಾಮಾಜಿಕ ಜಾಲತಾಣಗಳು ಸಮಾಜಕ್ಕೆ ಮಾರಕವಾಗಿ ಕಾಡತೊಡಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಗುಪ್ತಚರ ಇಲಾಖೆ ಸಾಮಾಜಿಕ ಜಾಲತಾಣಗಳ ಮೇಲೆ ತೀವ್ರ ನಿಗಾ ಇರಿಸಿದ್ದು ಈಗಾಗಲೇ ಸೈಬರ್ ಕ್ರೈ೦ ಸೆಕ್ಷನ್ ಗಳ ಅಡಿಯಲ್ಲಿ ಕೆಲವು ಪ್ರಕರಣಗಳನ್ನು ದಾಖಲಿಸಿಕೊಂಡಿದೆ.[ಗೂಢಲಿಪಿ ಕಾಯ್ದೆಯಿಂದ ವಾಟ್ಸಪ್, ಟ್ವಿಟರ್ ಗೆ ರಿಯಾಯಿತಿ]

Mangaluru DC angree on Social media like Whats app, facebook

ಟಿವಿ, ಪತ್ರಿಕೆ ಮಾಧ್ಯಮಗಳ ವಿರುದ್ದ ಅಸಮಾಧಾನಗೊಂಡ ಜಿಲ್ಲಾಧಿಕಾರಿ ಎ. ಬಿ ಇಬ್ರಾಹಿಂ, 'ಜಿಲ್ಲೆಯಲ್ಲಿ ಟಿಪ್ಪು ಸುಲ್ತಾನ ವಿವಾದದಂತಹ ಅಹಿತಕರ ಘಟನೆ ಹೆಚ್ಚಾಗಲು ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳೇ ಕಾರಣ ಎಂದು ಅವುಗಳ ವಿರುದ್ಧ ಹರಿಹಾಯ್ದರು. ಜಿಲ್ಲಾಧಿಕಾರಿ ಆದೇಶದ ಹೊರತು ಜಿಲ್ಲೆಯಲ್ಲಿ ವ್ಯಾಪಕವಾಗಿ ವಾಟ್ಸಪ್ ಸಂದೇಶಗಳು, ಇಮೇಲ್, ಟ್ವಿಟರ್ ಮೂಲಕ ಕ್ಷಣ ಮಾತ್ರದಲ್ಲಿ ಕೋಮು ಪ್ರಚೋದನಾ ವಿಚಾರಗಳು ಸಾರ್ವಜನಿಕರ ಮನಸ್ಸನ್ನು ಘಾಸಿ ಮಾಡುತ್ತಿರುವುದರಿಂದ ಘರ್ಷಣೆ ಹೆಚ್ಚಾಗುವಂತೆ ಮಾಡಿದೆ' ಎಂದರು.

ಇದೇ ವೇಳೆ ಮಾತನಾಡಿದ ಮಂಗಳೂರು ಪೊಲೀಸ್ ಆಯುಕ್ತ ಮುರುಗನ್, ' ಈ ನಡುವೆ ಅಂತರ್ಜಾಲ ಮಾಧ್ಯಮಗಳ ಮೇಲೆ ಕಣ್ಣಿಟ್ಟಿರುವ ಪೊಲೀಸರು ಅಹಿತಕರ ಸಂದೇಶಗಳನ್ನು ಪ್ರಚೋದಿಸುವ ಎಸ್ ಎಂಎಸ್ ಕಂಡು ಬಂದರೆ ಕೂಡಲೇ ಅವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ. ಈ ನಡುವೆ ವಾಟ್ಸಪ್ ಸಂದೇಶಗಳನ್ನು ಹರಡಿಸುವವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

English summary
Mangaluru DC A.B Ibrahim angree on Social media like Whats app, face book. He told that Tipu issues only increase through the face book and what's app,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X