ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ದಸರಾ; 300ರೂಪಾಯಿನಲ್ಲಿ ಮಂಗಳೂರಿನ ಒಂಭತ್ತು ದೇವಸ್ಥಾನಗಳ ದರ್ಶನ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಸೆಪ್ಟೆಂಬರ್‌, 21: ಮೈಸೂರು ದಸರಾ ಬಳಿಕ ರಾಜ್ಯದ ಗಮನಸೆಳೆಯುವ ಮಂಗಳೂರು ದಸರಾಗೆ ಪ್ರವಾಸಿಗರನ್ನು ಆಕರ್ಷಿಸಲು ಕೆಎಸ್ಆರ್‌ಟಿಸಿ ನೂತನ ಪ್ರಯೋಗ ಮಾಡಿದೆ. ಮಂಗಳೂರು ದಸರಾ ದರ್ಶನ ಎಂಬ ಪರಿಕಲ್ಪನೆಯಡಿ ಒಂದು ಇಡೀ ದಿನ ಮಂಗಳೂರಿನ ಒಂಭತ್ತು ದೇವಸ್ಥಾನಗಳನ್ನು ಸಂದರ್ಶಿಸುವ ಪ್ಯಾಕೇಜ್ ಟೂರ್ ಅನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಾಡಿದೆ.

'ಮಂಗಳೂರು ದಸರಾ ದರ್ಶನ' ಪ್ರವಾಸ ಪ್ಯಾಕೇಜ್

ಕೆಎಸ್‌ಆರ್‌ಟಿಸಿ ವತಿಯಿಂದ 'ಮಂಗಳೂರು ದಸರಾ ದರ್ಶನ' ಪ್ರವಾಸ ಪ್ಯಾಕೇಜ್ ಸೆಪ್ಟೆಂಬರ್‌ 26 ರಿಂದ ಅಕ್ಟೋಬರ್‌ 5ರ ವರೆಗೆ ನಡೆಯಲಿದೆ. ದಸರಾ ವೇಳೆ ಮಂಗಳೂರಿನ ಸುತ್ತ ಮುತ್ತಲಿನ ದೇವಸ್ಥಾನಗಳಿಗೆ ಧಾರ್ಮಿಕ ಪ್ರವಾಸ ಈ ಟೂರ್‌ ಪ್ಯಾಕೇಜ್‌ನ ಉದ್ದೇಶವಾಗಿದೆ‌‌. ಮಂಗಳೂರಿನ ಪ್ರಸಿದ್ಧ 10 ವಿವಿಧ ದೇವಸ್ಥಾನಗಳಿಗೆ ಈ ಪ್ರವಾಸ ಪ್ಯಾಕೇಜ್ ಇರಲಿದ್ದು, ಊಟ, ಉಪಹಾರ ಹೊರತು ಪಡಿಸಿ, ಪ್ರತಿ ಪ್ರಯಾಣಿಕರಿಗೆ ಕನಿಷ್ಠ ದರ ನಿಗದಿಪಡಿಸಲಾಗಿದೆ. ಒಂದು ದಿನದ ಪ್ರವಾಸ ಇದಾಗಿದ್ದು, ಬೆಳಗ್ಗೆ ಹೊರಟರೆ, ದೇವಸ್ಥಾನಗಳ ದರ್ಶನ ಮುಗಿಸಿ ಸಂಜೆ ವೇಳೆಗೆ ವಾಪಸ್ ಆಗಬಹುದು. ಹಸಿರು ಬಣ್ಣದ ನರ್ಮ್ ಬಸ್‌ ಅನ್ನು ಇದಕ್ಕೆ ಪ್ರಾಯೋಗಿಕವಾಗಿ ಬಳಸಲಾಗುತ್ತಿದೆ. ಒಂದು ಬಸ್‌ನಲ್ಲಿ 40 ಜನರಿಗೆ ಮಾತ್ರ ಅವಕಾಶ ಇರುತ್ತದೆ.

ಮಂಗಳೂರು: ಮಕ್ಕಳ ಕೈ ಹಿಡಿದ ಅಡಿಕೆ ಬೆಳೆ; ಸರಕಾರಿ ಶಾಲೆಗೆ ಬಂತು ಸ್ವಂತ ಬಸ್ಮಂಗಳೂರು: ಮಕ್ಕಳ ಕೈ ಹಿಡಿದ ಅಡಿಕೆ ಬೆಳೆ; ಸರಕಾರಿ ಶಾಲೆಗೆ ಬಂತು ಸ್ವಂತ ಬಸ್

Mangaluru Dasara; Visit Nine temples with Rs 300

ದಸರಾ ಪ್ರವಾಸದ ಸಮಯ

ಬೆಳಗ್ಗೆ 8 ಗಂಟೆಗೆ ಬಿಜೈ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಿಂದ ಹೊರಟರೆ, ರಾತ್ರಿ 8:30ಕ್ಕೆ ಬಸ್ ನಿಲ್ದಾಣಕ್ಕೆ ಮರಳಲಿದೆ. ಚಾಲಕನಲ್ಲದೆ, ಓರ್ವ ಸಹಾಯಕನೂ ಇರಲಿದ್ದಾರೆ. ಈಗಾಗಲೇ ಆನ್‌ಲೈನ್‌ ಮೂಲಕ ಟಿಕೆಟ್ ಬುಕ್ಕಿಂಗ್ ಆರಂಭಿಸಲಾಗಿದೆ. ಅಲ್ಲದೆ ಬಸ್ ಹೊರಡುವ ಮುನ್ನ ಸ್ಥಳದಲ್ಲೇ ಟಿಕೆಟ್ ಕೂಡ ನೀಡಲಾಗುತ್ತದೆ. ವಯಸ್ಕರಿಗೆ 300 ರೂಪಾಯಿ ಹಾಗೂ 6 ವರ್ಷ ಮೇಲ್ಪಟ್ಟ ಮಕ್ಕಳಿಗೆ 250 ರೂಪಾಯಿ ನಿಗದಿಪಡಿಸಲಾಗಿದೆ.

Mangaluru Dasara; Visit Nine temples with Rs 300

ಮಂಗಳೂರಿನ ಶ್ರೀ ಮಂಗಳಾದೇವಿ, ಪೊಳಲಿ ಶ್ರೀ ರಾಜರಾಜೇಶ್ವರಿ, ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ, ಕಟೀಲು ದುರ್ಗಾಪರಮೇಶ್ವರಿ, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ, ಸಸಿಹಿತ್ಲು ಶ್ರೀ ಭಗವತಿ, ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ, ಉರ್ವಾ ಶ್ರೀ ಮಾರಿಯಮ್ಮ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ದರ್ಶನ ಮಾಡಬಹುದಾಗಿದೆ. ಇದರ ನಡುವೆ ಬೀಚ್‌ಗೂ ಪ್ರವಾಸಿಗರನ್ನು ಕರೆದುಕೊಂಡು ಹೋಗಲಾಗುತ್ತದೆ.

English summary
KSRTC new experiment to attract tourists in Mangaluru Dasara, Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X