ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋ: ಮಂಗಳೂರು ಎಎಸ್ಐ ಸೂಪರ್ ಚೇಸಿಂಗ್; ಬಹುಮಾನ ಘೋಷಣೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜನವರಿ 13: ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ಕಳ್ಳರನ್ನು ಚೇಸ್ ಮಾಡಿ ಪೊಲೀಸ್ ಅಧಿಕಾರಿ ಹಿಡಿಯುವ ಸೀನ್ ತುಂಬಾ ಥ್ರಿಲ್ ಕೊಡುತ್ತದೆ. ಇಂತಹುದೇ ಒಂದು ಥ್ರಿಲ್ಲಿಂಗ್ ಪ್ರಸಂಗ ಮಂಗಳೂರಿನಲ್ಲಿ ನಡೆದಿದೆ. ಸಿನಿಮೀಯ ಶೈಲಿಯಲ್ಲಿ ಚೇಸ್ ಮಾಡಿ ಕಳ್ಳರನ್ನು ಮಂಗಳೂರಿನ ಪೊಲೀಸ್ ಅಧಿಕಾರಿಯೊಬ್ಬರು ಹಿಡಿದ ಘಟನೆ ಬೆಳಕಿಗೆ ಬಂದಿದೆ.

ಈ ಘಟನೆ ನಡೆದಿದ್ದು ಮಂಗಳೂರು ನಗರದ ಹೃದಯಭಾಗದ ಸ್ಟೇಟ್‌ ಬ್ಯಾಂಕ್‌ ಬಳಿ ನಡೆದಿದೆ. ಬುಧವಾರ ಮಧ್ಯಾಹ್ನ ಮಂಗಳೂರು ನಗರ ಪೊಲೀಸ್‌ ಕಮಿಷನರ್ ಕಚೇರಿಯ ಮುಂಭಾಗದಲ್ಲಿರುವ ಕೇಂದ್ರ ಮೈದಾನದಲ್ಲಿ ರಾಜಸ್ಥಾನದ ಡೋಲಾಪುರ ನಿವಾಸಿ ಗ್ರಾನೈಟ್‌ ಕೆಲಸ ಮಾಡಿಕೊಂಡಿದ್ದ. ಪ್ರೇಮ್ ನಾರಾಯಣ ತ್ಯಾಗಿ ಎಂಬಾತನ ಮೊಬೈಲ್ ಕಳವು ಮಾಡಿ ಪರಾರಿಯಾಗುತ್ತಿರುವುದು ಕಂಡುಬಂದಿದೆ.

ತಕ್ಷಣವೇ ಪ್ರೇಮ್ ನಾರಾಯಣ ಹಾಗೂ ಸ್ಥಳೀಯರು ಎಚ್ಚೆತ್ತು ಬೊಬ್ಬೆ ಹಾಕಿ ಕಳ್ಳನನ್ನು ಓಡಿಸಿಕೊಂಡು ಹೋಗಿದ್ದಾರೆ. ಈ ಸಂದರ್ಭ ಕಮೀಷನರೇಟ್ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಎಎಸ್‌ಐ ವರುಣ್‌ ಅವರು ಗಮನಿಸಿ ಸಿನಿಮೀಯ ರೀತಿಯಲ್ಲಿ ಆತನ ಬೆನ್ನಟ್ಟಿ ಹಿಡಿದಿದ್ದಾರೆ. ಆದರೆ ಆ ಸಂದರ್ಭದಲ್ಲಿ ಆರೋಪಿಯಿಂದ ಮೊಬೈಲ್ ದೊರೆತಿರಲಿಲ್ಲ. ತಕ್ಷಣ ಆತನನ್ನು ತೀವ್ರ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಮತ್ತಿಬ್ಬರು ಈ ಕೃತ್ಯದಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ.

Mangaluru City Police Varun Caught Robbery Offender Within 10 Mins of Offence by Chasing

ಕದ್ದ ಮೊಬೈಲ್ ಕೂಡ ಅವರೊಂದಿಗೆ ಇರುವುದರ ಬಗ್ಗೆ ಆರೋಪಿ ಬಾಯ್ಬಿಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ ವಶದಲ್ಲಿರುವ ಆರೋಪಿಯನ್ನು ಬಳಸಿ ಪರಾರಿಯಾಗಿರುವ ಮತ್ತಿಬ್ಬರನ್ನು ಬಂಧಿಸಲು ಪೊಲೀಸರು ತಂತ್ರ ರೂಪಿಸಿ ವಶದಲ್ಲಿರುವ ಆರೋಪಿಯಿಂದಲೇ ಆತನ ಸಹಚರರಿಗೆ ಫೋನ್ ಮಾಡಿಸಿ ರೈಲ್ವೆ ಸ್ಟೇಷನ್ ಬಳಿ ಬರುವಂತೆ ಹೇಳಿಸಿದ್ದಾರೆ.

ಪ್ಲಾನ್‌ನಂತೆ ವಶದಲ್ಲಿರುವ ಆರೋಪಿಯನ್ನು ಮತ್ತೊಂದು ವಾಹನದಲ್ಲಿ ಪೊಲೀಸರು ರೈಲ್ವೆ ಸ್ಟೇಷನ್ ಬಳಿ ಕರೆದುಕೊಂಡು ಹೋಗಿದ್ದಾರೆ. ಆತ ನನ್ನು ಮುಂದೆ ಹೋಗಲು ಬಿಟ್ಟು, ಹಿಂದಿನಿಂದ ಪೊಲೀಸರು ಆತನನ್ನು ಹಿಂಬಾಲಿಸಿದ್ದಾರೆ. ಈ ಸಂದರ್ಭದಲ್ಲಿ ಆತ ಕೂಡ ತನ್ನ ಸಹಚರರೊಂದಿಗೆ ರಿಕ್ಷಾ ಏರಿ ಪರಾರಿಯಾಗಲು ಯತ್ನಿಸಿದ್ದಾನೆ. ಪರಿಸ್ಥಿತಿಗನುಗುಣವಾಗಿ ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರು, ಬೆನ್ನಟ್ಟಿ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರನ್ನು ಮಂಗಳೂರು ಹೊರವಲಯದ ನಿರ್ಮಾರ್ಗ ನಿವಾಸಿ ಶಮಂತ್ ಹಾಗೂ ನಗರದ ಅತ್ತಾವರ ನಿವಾಸಿ ಹರೀಶ್ ಪೂಜಾರಿ ಎಂದು ಗುರುತಿಸಲಾಗಿದೆ.

ಕಳ್ಳತನದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಆರೋಪಿ ರಾಜೇಶ್ ಎಂಬಾತ ಪರಾರಿಯಾಗಿದ್ದಾನೆ. ಪರಾರಿಯಾಗಿರುವ ರಾಜೇಶ್ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದಾರೆ. ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Mangaluru City Police Varun Caught Robbery Offender Within 10 Mins of Offence by Chasing

ನಗದು ಬಹುಮಾನ ಘೋಷಣೆ
ಸದ್ಯ ಪೊಲೀಸರ ಚೇಸಿಂಗ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್, ಎಎಸ್ಐ ವರುಣ್ ತಂಡಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೊಬೈಲ್ ಕಳ್ಳರನ್ನು ಹಿಡಿಯುವಲ್ಲಿ ಸಮಯ ಪ್ರಜ್ಞೆ ಮೆರೆದ ಎಎಸ್ಐ ವರುಣ್ ತಂಡಕ್ಕೆ ಹತ್ತು ಸಾವಿರ ರೂಪಾಯಿ ನಗದು ಬಹುಮಾನ ಘೋಷಣೆ ಮಾಡಿದ್ದಾರೆ.

Mangaluru City Police Varun Caught Robbery Offender Within 10 Mins of Offence by Chasing

ಇನ್ನು ಈ ಕಾರ್ಯಾಚರಣೆ ಬಗ್ಗೆ ಪ್ರತಿಕ್ರಿಯೆ ನೀಡಿದ ವರುಣ್ ಆಳ್ವಾ, "ಇದೊಂದು ಸಣ್ಣ ಕಾರ್ಯಾಚರಣೆಯಾಗಿದೆ. ಭಾರೀ ದೊಡ್ಡ ಮಟ್ಟದಲ್ಲಿ ಜನ ಪ್ರೋತ್ಸಾಹ ನೀಡಿದ್ದಾರೆ. ಈ ಪ್ರೋತ್ಸಾಹ ಮುಂದೆ ದೊಡ್ಡ ಕಾರ್ಯಾಚರಣೆಗೆ ಉತ್ಸಾಹ ನೀಡಲಿದೆ. ಪ್ರತಿ ದಿನ ಎರಡು ಕಿಮೀ ರನ್ನಿಂಗ್ ಮಾಡುತ್ತೇನೆ. ವ್ಯಾಯಾಮ, ಯೋಗದಲ್ಲಿ ತೊಡಗಿಸಿಕೊಂಡಿದ್ದೇನೆ. ಹೀಗಾಗಿ ಚೇಸಿಂಗ್ ಮಾಡುವುದಕ್ಕೆ ಸುಲಭ ಆಯ್ತು," ಎಂದು ಹೇಳಿದ್ದಾರೆ.

English summary
Mangaluru city police Varun caught Robbery offender within 10 mins of offence by chasing. Mangaluru City Police Commissioner N Shashikumar congratulated the ASI Varun team.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X