ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು-ಸುಬ್ರಮಣ್ಯ ರಸ್ತೆ ರೈಲು; ವೇಳಾಪಟ್ಟಿ

|
Google Oneindia Kannada News

ಮಂಗಳೂರು, ಡಿಸೆಂಬರ್ 03; ಮಂಗಳೂರು ಸೆಂಟ್ರಲ್ ಮತ್ತು ಸುಬ್ರಮಣ್ಯ ರಸ್ತೆ ನಡುವೆ ಎಕ್ಸ್‌ಪ್ರೆಸ್ ರೈಲು ಸಂಚಾರ ಡಿಸೆಂಬರ್ 9ರಿಂದ ಆರಂಭವಾಗಲಿದೆ. ರೈಲ್ವೆ ಇಲಾಖೆ ರೈಲುಗಳ ಸಂಚಾರದ ವೇಳಾಪಟ್ಟಿಯನ್ನು ಸಹ ಬಿಡುಗಡೆ ಮಾಡಿದೆ.

ರೈಲ್ವೆ ಇಲಾಖೆ ಮಂಗಳೂರು ಸೆಂಟ್ರಲ್-ಕಬಕ ಮತ್ತು ಸುಬ್ರಮಣ್ಯ ರಸ್ತೆ ನಡುವೆ ರೈಲು ಸಂಚಾರ ಮತ್ತೆ ಆರಂಭಿಸಲು ಒಪ್ಪಿಗೆ ನೀಡಿದೆ. ಪ್ಯಾಸೆಂಜರ್ ಮತ್ತು ಎಕ್ಸ್‌ಪ್ರೆಸ್ ರೈಲುಗಳು ಸಂಚಾರ ನಡೆಸಲಿದ್ದು, ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ.

ಬೆಂಗಳೂರು ಸಬ್‌ಅರ್ಬನ್ ರೈಲು ಯೋಜನೆಗೆ ಮೊದಲ ಟೆಂಡರ್ ಆಹ್ವಾನಬೆಂಗಳೂರು ಸಬ್‌ಅರ್ಬನ್ ರೈಲು ಯೋಜನೆಗೆ ಮೊದಲ ಟೆಂಡರ್ ಆಹ್ವಾನ

ಮಂಗಳೂರು ಸೆಂಟ್ರಲ್-ಸುಬ್ರಮಣ್ಯ ರಸ್ತೆ ನಡುವೆ ಕಾಯ್ದಿರಿಸದ ಎಕ್ಸ್‌ಪ್ರೆಸ್‌ ರೈಲು (06489) ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಡಿಸೆಂಬರ್ 9ರ ಬೆಳಗ್ಗೆ 10 ಗಂಟೆಗೆ ಹೊರಡಲಿದೆ. 12.30ಕ್ಕೆ ಸುಬ್ರಮಣ್ಯ ರಸ್ತೆ ತಲುಪಲಿದೆ. ಮಂಗಳೂರು ಜಂಕ್ಷನ್‌ಲ್ಲಿ 10.14ಕ್ಕೆ ಸಂಚಾರ ನಡೆಸುತ್ತದೆ.

ವಿಜಯಪುರ-ಮಂಗಳೂರು ರೈಲು; ವೇಳಾಪಟ್ಟಿ ವಿಜಯಪುರ-ಮಂಗಳೂರು ರೈಲು; ವೇಳಾಪಟ್ಟಿ

Mangaluru Central Subramanya Road Rail From December 9

ಸುಬ್ರಮಣ್ಯ ರಸ್ತೆ-ಮಂಗಳೂರು ಸೆಂಟ್ರಲ್ ಕಾಯ್ದಿರಿಸಿದ ಎಕ್ಸ್‌ಪ್ರೆಸ್‌ ರೈಲು (06488) ಮಧ್ಯಾಹ್ನ 1.30ಕ್ಕೆ ಸುಬ್ರಮಣ್ಯ ರಸ್ತೆಯಿಂದ ಮಧ್ಯಾಹ್ನ 1.30ಕ್ಕೆ ಹೊರಡಲಿದೆ. 3.29ಕ್ಕೆ ಮಂಗಳೂರು ಜಂಕ್ಷನ್, 4.10ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ.

2022ರ ಆರಂಭದಲ್ಲೇ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ2022ರ ಆರಂಭದಲ್ಲೇ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ

ನಿಲ್ದಾಣಗಳು; ಮಂಗಳೂರು ಜಂಕ್ಷನ್, ಬಂಟ್ವಾಳ, ನೇರಳಕಟ್ಟೆ, ಕಬಕ ಪುತ್ತೂರು, ನರಿಮೊಗರು, ಕಾಣಿಯೂರು, ಎಡಮಂಗಲ, ಕೋಡಿಂಬಾಳ, ಬಜಕೆರೆ ನಿಲ್ದಾಣದಲ್ಲಿ ರೈಲು ನಿಲ್ಲಲಿದೆ.

ಮಂಗಳೂರು ಸೆಂಟ್ರಲ್-ಕಬಕ ಪುತ್ತೂರು ಪ್ಯಾಸೆಂಜರ್; ಡಿಸೆಂಬರ್ 9ರಿಂದ ಮಂಗಳೂರು ಸೆಂಟ್ರಲ್-ಕಬಕ ಪುತ್ತೂರು ಪ್ಯಾಸೆಂಜರ್ ರೈಲು ಸಂಚಾರ ಸಹ ಆರಂಭವಾಗಲಿದೆ. 06487 ಸಂಖ್ಯೆಯ ರೈಲು ಮಂಗಳೂರು ಸೆಂಟ್ರಲ್‌ನಿಂದ ಸಂಜೆ 6ಗಂಟೆಗೆ ಹೊರಟು ರಾತ್ರಿ 7.25ಕ್ಕೆ ಕಬಕ ಪುತ್ತೂರು ತಲುಪಲಿದೆ.

ರೈಲು ಸಂಖ್ಯೆ 06486 ಕಬಕ ಪುತ್ತೂರು-ಮಂಗಳೂರು ಸೆಂಟ್ರಲ್ ರೈಲು ಕಬಕ ಪುತ್ತೂರು ರೈಲು ನಿಲ್ದಾಣದಿಂದ ರಾತ್ರಿ 8.25ಕ್ಕೆ ಹೊರಟು ರಾತ್ರಿ 10.05ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ. ಈ ರೈಲು ಮಂಗಳೂರು ಜಂಕ್ಷನ್, ಬಂಟ್ವಾಳ, ಕಬಕ ಪುತ್ತೂರು ನಿಲ್ದಾಣದಲ್ಲಿ ನಿಲುಗಡೆಗೊಳ್ಳಲಿದೆ.

ರೈಲು ಸಂಖ್ಯೆ 06485 ಮಂಗಳೂರು ಸೆಂಟ್ರಲ್-ಕಬಕ ಪುತ್ತೂರು ಪ್ಯಾಸೆಂಜರ್ ರೈಲು ಮಂಗಳೂರು ಸೆಂಟ್ರಲ್‌ನಿಂದ ಬೆಳಗ್ಗೆ 5.45ಕ್ಕೆ ಹೊರಡಲಿದೆ. 7.15ಕ್ಕೆ ಕಬಕ ಪುತ್ತೂರು ತಲುಪಲಿದೆ ಎಂದು ಪ್ರಕಟಣೆ ತಿಳಿಸಿದೆ.

ರೈಲು ಸಂಖ್ಯೆ 06484 ಕಬಕ ಪುತ್ತೂರು- ಮಂಗಳೂರು ಸೆಂಟ್ರಲ್ ರೈಲು ಕಬಕ ಪುತ್ತೂರಿನಿಂದ ಬೆಳಗ್ಗೆ 7.55ಕ್ಕೆ ಹೊರಟು 9.25ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ಮಂಗಳೂರು ಜಂಕ್ಷನ್, ಬಂಟ್ವಾಳ, ನೇರಳಕಟ್ಟೆ ನಿಲ್ದಾಣಗಳಾಗಿವೆ.

ತುಮಕೂರು-ಶಿವಮೊಗ್ಗ ಪ್ಯಾಸೆಂಜರ್ ರೈಲು; ಕೋವಿಡ್ ಪರಿಸ್ಥಿತಿ ಬಳಿಕ ಶಿವಮೊಗ್ಗ-ತುಮಕೂರು ನಡುವೆ ಪ್ಯಾಸೆಂಜರ್ ರೈಲು ಡಿಸೆಂಬರ್ 13ರಿಂದ ಸಂಚಾರ ನಡೆಸಲಿದೆ. 06591 ಮತ್ತು 06592 ರೈಲುಗಳು 5 ಗಂಟೆ 20 ನಿಮಿಷದಲ್ಲಿ ಸಂಚಾರ ನಡೆಸಲಿವೆ ಎಂದು ಪ್ರಕಟಣೆ ತಿಳಿಸಿದೆ.

06591 ರೈಲು ತುಮಕೂರಿನಿಂದ 6.40ಕ್ಕೆ ಹೊರಡಲಿದೆ. ರಾತ್ರಿ 11.50ಕ್ಕೆ ಶಿವಮೊಗ್ಗಕ್ಕೆ ತಲುಪಲಿದೆ. ರೈಲು ತುಮಕೂರು, ಹೆಗ್ಗರೆ ಹಾಲ್ಟ್, ಮಲ್ಲಸಂದ್ರ, ಗುಬ್ಬಿ, ನಿಟ್ಟೂರು, ಸಂಪಿಗೆ ರಸ್ತೆ, ಅಮ್ಮಸಂದ್ರ, ಬಾಣಸಂದ್ರ, ಅರಳಗುಪ್ಪೆ ಹಾಲ್ಟ್, ಬನಶಂಕರಿ ಹಾಲ್ಟ್, ತಿಪಟೂರು, ಶ್ರೀಶಾರದಾ ನಗರ, ಹೊನ್ನವಳ್ಳಿ ರೋಡ್, ಆದಿಹಳ್ಳಿ, ಅರಸೀಕೆರೆ, ಬಾಣಾವರ, ದೇವನೂರು, ಬೆಳ್ಳೇಕೆರೆ ಹಾಲ್ಟ್, ಕಡೂರು, ಬೀರೂರು, ಶಿವಪುರ, ಕಾರಣಹಳ್ಳಿ, ತರೀಕೆರೆ, ಮಸರಹಳ್ಳಿ, ಭದ್ರಾವತಿ, ಶಿವಮೊಗ್ಗ ಹಾಲ್ಟ್ ಮೂಲಕ ಶಿವಮೊಗ್ಗ ಟೌನ್ ತಲುಪಲಿದೆ.

ಶಿವಮೊಗ್ಗದಿಂದ ರೈಲು ಸಂಖ್ಯೆ 06592 ಮುಂಜಾನೆ 4 ಗಂಟೆಗೆ ಹೊರಡಲಿದೆ. ಬೆಳಗ್ಗೆ 9.25ಕ್ಕೆ ತುಮಕೂರು ತಲುಪಲಿದೆ.

Recommended Video

ಓಮಿಕ್ರಾನ್ ರೂಪಾಂತರ, ರಾಜ್ಯ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. | Oneindia Kannada | Oneindia Kannada

ಕೋವಿಡ್ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ್ ಅನೇಕ ರೈಲುಗಳ ಸಂಚಾರವನ್ನು ಡಿಸೆಂಬರ್‌ನಲ್ಲಿ ರೈಲ್ವೆ ಇಲಾಖೆ ಪುನಃ ಆರಂಭಿಸುತ್ತಿದೆ. ಎಕ್ಸ್‌ಪ್ರೆಸ್, ಪ್ಯಾಸೆಂಜರ್ ರೈಲುಗಳ ಸಂಚಾರ ಮತ್ತೆ ಆರಂಭವಾಗುತ್ತಿದ್ದು, ಕೋವಿಡ್ ಪರಿಸ್ಥಿತಿಗಿಂತ ಮೊದಲಿನ ಸಾಮಾನ್ಯ ದರಗಳೇ ಇದರಲ್ಲಿ ಇರಲಿವೆ.

English summary
Railways will run train between Mangaluru Central station and Subramanya Road from December 9, 2021. Here are the schedule.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X