ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿರಿವಾಗಿಲು ಬಳಿ ಭೂಕುಸಿತ; 2 ದಿನ ಮಂಗಳೂರು–ಬೆಂಗಳೂರು ರೈಲು ಸಂಚಾರ ಸ್ಥಗಿತ

|
Google Oneindia Kannada News

ಮಂಗಳೂರು, ಜುಲೈ 20: ಭಾರೀ ಮಳೆಯಿಂದಾಗಿ ಸಿರಿವಾಗಿಲು ಎಂಬಲ್ಲಿ ಗುಡ್ಡ ಕುಸಿದು ಹಳಿ ಮೇಲೆ ಬಿದ್ದಿರುವ ಪರಿಣಾಮ ಇಂದು ಮತ್ತು ನಾಳೆ ಮಂಗಳೂರು - ಬೆಂಗಳೂರು ನಡುವಿನ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

 ಮುಂದಿನ ಮೂರು ದಿನವೂ ಭಾರಿ ಮಳೆ: ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ನಾಳೆ ರಜೆ ಮುಂದಿನ ಮೂರು ದಿನವೂ ಭಾರಿ ಮಳೆ: ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ನಾಳೆ ರಜೆ

ಕಳೆದ ಎರಡು ದಿನಗಳಿಂದ ಕರಾವಳಿ ಹಾಗೂ ಪಶ್ಚಿಮ ಘಟ್ಟದಲ್ಲಿ ಭಾರೀ ಮಳೆಯಾಗುತ್ತಿದೆ. ಹೀಗಾಗಿ ಶಿರಾಡಿ ಘಾಟ್ ರೈಲು ಮಾರ್ಗದ ಸಿರಿವಾಗಿಲು ಸಮೀಪದ ಮಣಿಭಂಡ ಎಂಬಲ್ಲಿ ಗುಡ್ಡ ಕುಸಿದು ರೈಲು ಹಳಿ ಮೇಲೆ ಮಣ್ಣು ತುಂಬಿಕೊಂಡಿದೆ. ಅದನ್ನು ತೆರವುಗೊಳಿಸುವ ಕಾಮಗಾರಿ ಆರಂಭವಾಗಿದ್ದು, ಈ ಭಾಗದಲ್ಲಿರುವ ಕೆಲವು ಅಪಾಯಕಾರಿ ಬಂಡೆಯನ್ನು ತೆರವುಗೊಳಿಸುವ ಸಲುವಾಗಿ ಎರಡು ದಿನ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ.

Mangaluru Bengaluru train service stopped for two days

ಘಾಟಿ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ಸಿರಿವಾಗಿಲು ರೈಲ್ವೆ ಹಳಿಗೆ ಬೆಟ್ಟದಿಂದ ಕಲ್ಲುಗಳು ಬಂದು ಬೀಳುತ್ತಿವೆ. ಮಳೆ ನೀರಿನೊಂದಿಗೆ ಬೆಟ್ಟದಿಂದ ಭಾರೀ ಗಾತ್ರದ ಕಲ್ಲುಗಳು ಹರಿದು‌ ಬರುತ್ತಿರುವುದು ಅಪಾಯಕ್ಕೆ ಕಾರಣವಾಗಿದೆ. ಆದ್ದರಿಂದ ಹಳಿಯಿಂದ ಕಲ್ಲುಗಳನ್ನು ತೆರವುಗೊಳಿಸುತ್ತಿರುವ ಕಾರ್ಯವನ್ನು ರೈಲ್ವೆ ಇಲಾಖೆ ಆರಂಭಿಸಿದೆ.

Mangaluru Bengaluru train service stopped for two days

ಫೆ.21ರಿಂದ ಮಂಗಳೂರು-ಬೆಂಗಳೂರು ನಡುವೆ ಹೊಸ ರೈಲುಫೆ.21ರಿಂದ ಮಂಗಳೂರು-ಬೆಂಗಳೂರು ನಡುವೆ ಹೊಸ ರೈಲು

ಕಳೆದ ವರ್ಷ, ಭಾರಿ ಮಳೆಗೆ ಸುಬ್ರಹ್ಮಣ್ಯ- ಸಿರಿವಾಗಿಲು ನಡುವೆ ಹಳಿಯ ಮೇಲೆ ಭೂ ಕುಸಿತ ಸಂಭವಿಸಿತ್ತು. 110 ಮೀಟರ್ ದೂರ, 25 ಮೀಟರ್ ಎತ್ತರಕ್ಕೆ ಮಣ್ಣು ಬಿದ್ದು, ಸುರಂಗದ ಪ್ರವೇಶ ದ್ವಾರಕ್ಕೂ ಮಣ್ಣು ಮುಚ್ಚಿತ್ತು.

English summary
Landslide happened near railway track of siribagilu because of heavy rain. Due to this Mangaluru– Bengaluru train service has stopped for two days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X