ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐರ್ಲೆಂಡ್ ನಲ್ಲಿ ಮಂಗಳೂರು ಮೂಲದ ದಂಪತಿ ಸಾವು

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಏಪ್ರಿಲ್ 17: ಐರ್ಲೆಂಡ್ ನಲ್ಲಿ ನಡೆದ ಅಪಘಾತದಲ್ಲಿ ಮಂಗಳೂರು ಮೂಲದ 34 ವರ್ಷದ ಲಾಯಲ್ ಸಿಕ್ವೇರಾ ಎಂಬುವರು ಸಾವನ್ನಪ್ಪಿದ್ದು, ಪತಿ ಸಾವಿನ ಸುದ್ದಿ ತಿಳಿದು ಆಘಾತದಿಂದ ಪತ್ನಿಯೂ ಮೃತಪಟ್ಟಿರುವ ಘಟನೆ ನಡೆದಿದೆ.

ಏಪ್ರಿಲ್ 15ರಂದು ಡಬ್ಲಿನ್‌ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಲಾಯಲ್ ಸಾವನ್ನಪ್ಪಿದ್ದರು. ಪತಿಯ ಸಾವಿನ ಸುದ್ದಿ ಕೇಳಿ ಆಘಾತಕ್ಕೊಳಗಾದ ಪತ್ನಿ ಶರೋನ್ ಸಿಕ್ವೇರಾ (36) ಅವರು ಏ.16 ರಂದು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.

ಆಟೋ ಸೀಜ್ ಮಾಡಿ ಕೊಂಡೊಯ್ಯುವಾಗ ಅಪಘಾತ: ಚಿಕಿತ್ಸೆ ಫಲಿಸದೆ ಪೇದೆ ಸಾವುಆಟೋ ಸೀಜ್ ಮಾಡಿ ಕೊಂಡೊಯ್ಯುವಾಗ ಅಪಘಾತ: ಚಿಕಿತ್ಸೆ ಫಲಿಸದೆ ಪೇದೆ ಸಾವು

2016ರಲ್ಲಿ ಮದುವೆಯಾಗಿ ಐರ್ಲೆಂಡ್ ನಲ್ಲಿ ನೆಲೆಸಿದ್ದ ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಲಾಯಲ್ ಅವರ ತಂದೆ ಲಿಗೊರಿ ಮತ್ತು ಲಿಲ್ಲಿ ಸಿಕ್ವೇರಾ ಅವರು ಸದ್ಯ ಡಬ್ಲಿನ್ ನಲ್ಲೇ ನೆಲೆಸಿದ್ದಾರೆ. ಅವರ ಪತ್ನಿ ಶರೋನ್ ಚಲನಚಿತ್ರ ನಿರ್ಮಾಪಕ ಮತ್ತು ಮೊಸಾಕೊ ಶಿಪ್ಪಿಂಗ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಫ್ರಾಂಕ್ ಫೆರ್ನಾಂಡಿಸ್ ಮತ್ತು ಉಡುಪಿಯ ತೊಟ್ಟಂ ಮೂಲದ ಆಲಿಸ್ ಫರ್ನಾಂಡಿಸ್ ಅವರ ಮಗಳಾಗಿದ್ದಾರೆ.

Mangaluru Based Couple Died In Accident In Ireland

ಏಪ್ರಿಲ್ 15ರ ಮುಂಜಾನೆ ಲಾಯಲ್, ಅಲ್ಲಿನ ಕೋ ಮೀತ್ ರಸ್ತೆಯ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಕಾರು ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ. ಕಾರು ಚಾಲಕ ಪರಾರಿಯಾಗಿರುವುದಾಗಿ ಐರ್ಲೆಂಡ್‌ನ ಸ್ಥಳೀಯ ಆನ್‌ಲೈನ್ ಸುದ್ದಿ ಮಾಧ್ಯಮ ವರದಿ ಮಾಡಿದೆ.

English summary
Mangaluru based couple died in ireland on april 15. Husband layal died in an accident. Hearing his death news, wife sharon also died by shock
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X