ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿರು ಬೇಸಿಗೆಯಲ್ಲೂ ಪಿಲಿಕುಳದಲ್ಲಿ ಪ್ರಾಣಿಗಳು ಕೂಲ್.. ಕೂಲ್..!

ಪಿಲಿಕುಳ ಜೈವಿಕ ಉದ್ಯಾನದಲ್ಲಿ ಪ್ರಾಣಿ-ಪಕ್ಷಿಗಳು ಬಿಸಿಲ ಧಗೆಗೆ ಬಳಲಿ ಬೆಂಡಾಗದಂತೆ ಆಡಳಿತ ಮಂಡಳಿ ವ್ಯವಸ್ಥೆ ಮಾಡಿದೆ. ಪಾರ್ಕ್ ನ ಒಳಗಡೆ ಸ್ಪಿಂಕ್ಲರ್, ಫ್ಯಾನ್ ಗಳನ್ನ ಪ್ರಾಣಿಗಳಿಗಾಗಿ ಅಳವಡಿಸಲಾಗಿದೆ.

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಎಪ್ರಿಲ್ 5: ಮಂಗಳೂರಲ್ಲಿ ಬಿಸಿಲ ಧಗೆ ಹೆಚ್ಚಾಗುತ್ತಿದೆ. ಮನುಷ್ಯರೇ ಬಿಸಿಲ ಬೇಗೆಗೆ ತತ್ತರಿಸಿ ಹೋಗಿದ್ದಾರೆ. ಈ ಸಂದರ್ಭದಲ್ಲಿ ಮಂಗಳೂರಿನ ಮೂಡುಶೆಡ್ಡೆಯಲ್ಲಿರುವ ಪಿಲಿಕುಳ ಜೈವಿಕ ಉದ್ಯಾನದಲ್ಲಿ ಪ್ರಾಣಿ ಪಕ್ಷಿಗಳು ಮಾತ್ರ ಕೂಲ್ ಕೂಲ್ ಆಗಿವೆ.

ಇಲ್ಲಿರುವ ಪ್ರಾಣಿ - ಪಕ್ಷಿಗಳು ಬಿಸಿಲ ಧಗೆಗೆ ಬಳಲಿ ಬೆಂಡಾಗದಂತೆ ಆಡಳಿತ ಮಂಡಳಿ ವ್ಯವಸ್ಥೆ ಮಾಡಿದೆ. ಪಾರ್ಕ್ ನ ಒಳಗಡೆ ಸ್ಪಿಂಕ್ಲರ್, ಫ್ಯಾನ್ ಗಳನ್ನ ಅಳವಡಿಸಲಾಗಿದೆ. ಜೊತೆಗೆ ಕರ್ಬುಜಾ ಹಣ್ಣುಗಳನ್ನ ಇಡಲಾಗಿದೆ. ಬಿಸಿಲಿನ ಶಾಖದಿಂದ ತಪ್ಪಿಸಿಕೊಳ್ಳಲಿ ಛಾವಣಿಗಳನ್ನು, ಲೈಮ್ ಕೋಟ್ ಗಳನ್ನು ಸಹ ಅಳವಡಿಸಲಾಗಿದೆ. ಇದು ಇಲ್ಲಿರುವ ಪ್ರಾಣಿ - ಪಕ್ಷಿಗಳಿಗೆ ಮತ್ತಷ್ಟು ಆರಾಮ ನೀಡಿದೆ.[ಮರಳು ದಂಧೆ, ದ. ಕ. ಜಿಲ್ಲಾಧಿಕಾರಿ ಜಗದೀಶ್ ವಿರುದ್ಧ ಲೋಕಾಯುಕ್ತಕ್ಕೆ ದೂರು]

Mangaluru: Authorities installed sprinklers for animals in Pilikula Zoo

ಪಿಲಿಕುಳದಲ್ಲಿ 120 ಪ್ರಭೇದದ ಪಕ್ಷಿಗಳಿವೆ. 1070 ಪ್ರಾಣಿಗಳಿವೆ. ಪಕ್ಷಿಗಳ ಜೊತೆಗೆ ಸಸ್ತನಿಗಳು, ಸರೀಸೃಪಗಳು ಇವೆ. ಇನ್ನು ಅಳಿವಿನಂಚಿನಲ್ಲಿರುವ 38 ಜಾತಿಗಳ ಪ್ರಾಣಿಗಳು ಇಲ್ಲಿವೆ. ಈ ಎಲ್ಲಾ ಪ್ರಾಣಿ - ಪಕ್ಷಿಗಳನ್ನ ಆರೈಕೆ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ.

Mangaluru: Authorities installed sprinklers for animals in Pilikula Zoo

"ಮಂಗಳೂರಿನಲ್ಲಿ ಇತ್ತೀಚಿಗೆ ಬಿಸಿಲ ತಾಪಮಾನ ಹೆಚ್ಚಾಗುತ್ತಿದೆ. ಹೀಗಾಗಿ ಝೂನಲ್ಲಿ ಪ್ರಾಣಿಗಳನ್ನು ಕೂಲ್ ಕೂಲ್ ಆಗಿಡುವ ವ್ಯವಸ್ಥೆ ಮಾಡಲಾಗಿದೆ. ಹುಲಿ, ಸಿಂಹ ಇಂತಹ ಪ್ರಾಣಿಗಳ ದೇಹವನ್ನ ತಂಪಾಗಿರಿಸಲು ಸ್ಪಿಂಕ್ಲರ್ ಮೂಲಕ ದಿನಕ್ಕೆ ನಾಲ್ಕೈದು ಬಾರಿ ನೀರು ಬಿಡಲಾಗುತ್ತದೆ. ಜೊತೆಗೆ ವಿಟಮಿನ್ ಯುಕ್ತ ಆಹಾರಗಳನ್ನ ಸಹ ನೀಡಲಾಗುತ್ತದೆ. ಇನ್ನು ಕೋತಿ, ಕರಡಿಗಳಂತಹ ಪ್ರಾಣಿಗಳಿಗೆ ಕರ್ಬೂಜ ಹಣ್ಣನ್ನ ನೀಡಲಾಗುತ್ತಿದೆ," ಎನ್ನುತ್ತಾರೆ ಪಾರ್ಕ್ ನ ನಿರ್ದೇಶಕ ಹೆಚ್. ಜಯಪ್ರಕಾಶ್ ಭಂಡಾರಿ.[ಮಂಗಳೂರು: ಮೇಯರ್ ಮೇಡಂ, ಜಾಹೀರಾತು ಫಲಕ ತೆರವುಗೊಳಿಸುವುದು ಯಾವಾಗ?]

Mangaluru: Authorities installed sprinklers for animals in Pilikula Zoo

ಈ ಮೊದಲು ಗುರುಪುರ ನದಿಯಿಂದ ನೀರನ್ನ ಪಿಲಿಕುಳಕ್ಕೆ ಬಿಡಲಾಗುತ್ತಿತ್ತು. ಆದರೆ ಈಗ ಝೂ ನಲ್ಲಿ ಎರಡು ಬೋರ್ ವೆಲ್ ಗಳನ್ನ ಕೊರೆಯಲಾಗಿದೆ. ಹೀಗಾಗಿ ಇಲ್ಲೀಗ ನೀರಿನ ಕೊರತೆ ಇಲ್ಲ.

English summary
Mangaluru’s Pilikula Biological Park management have installed sprinklers and fans for animals to face hot summer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X