ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ಮಹಿಳೆಯ ಪ್ರಯೋಗ; ಟೆರಸ್‌ನಲ್ಲೇ ತಾವರೆ ತೋಟ!

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಅಕ್ಟೋಬರ್ 14: ಕೆಸರಿನಲ್ಲಿ ಅರಳಿದ ಕಮಲ ನೋಡೋಕೆ ಅಂದ. ಆದರೆ ತಾವರೆ ಬೇಕಾದ ಹಾಗೆ ಕಾಣಲು ಸಿಗೋದಿಲ್ಲ. ಆದರೆ ಮಂಗಳೂರಿನ ಗೃಹಿಣಿಯೊಬ್ಬರು ತಮ್ಮ ಮನೆಯ ಟಾರೆಸ್ ಅನ್ನೇ ತಾವರೆಯ ತೋಟವನ್ನಾಗಿ ಮಾಡಿದ್ದಾರೆ.

ಮಂಗಳೂರು ಹೊರವಲಯದ ಉಳ್ಳಾಲ ನಿವಾಸಿ, ಮಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಸಹಾಯಕ ಪ್ರೊಫೆಸರ್ ಆಗಿರುವ ಸ್ನೇಹಾ ಭಟ್ ತಾವರೆ ತೋಟದ ನಿರ್ಮಾತೃ. ತಾವರೆಗಳನ್ನು ಬೃಹದಾದ ಕೆರೆಗಳಲ್ಲಿ ಮಾತ್ರ ಬೆಳೆಸಬಹುದು ಎಂದು ಎಲ್ಲರಂತೆ ಇವರು ಸಹ ಅಂದುಕೊಂಡಿದ್ದರು.

 ಪ್ರಾಣಿ- ಪಕ್ಷಿಗಳಿಂದ ಬೆಳೆ ರಕ್ಷಿಸಿಕೊಳ್ಳಲು ಸಂಡೂರು ರೈತನ ವಿನೂತನ ವಿಧಾನ ಪ್ರಾಣಿ- ಪಕ್ಷಿಗಳಿಂದ ಬೆಳೆ ರಕ್ಷಿಸಿಕೊಳ್ಳಲು ಸಂಡೂರು ರೈತನ ವಿನೂತನ ವಿಧಾನ

ಆದರೆ ಹೊಸ ಪ್ರಯೋಗ ಮಾಡಿ ಪ್ಲಾಸ್ಟಿಕ್ ಟಬ್‌ಗಳಲ್ಲಿ ಯಾಕೆ ಬೆಳೆಸಬಾರದು? ಅಂತಾ ಆ ಪ್ರಯೋಗಕ್ಕೆ ಮುಂದಾಗಿದ್ದಾರೆ. ಈ ಪ್ರಯೋಗವೇ ಇವತ್ತು 85ಕ್ಕೂ ಹೆಚ್ಚು ಬಗೆಯ ತಾವರೇ ಗಾರ್ಡನ್ ನಿರ್ಮಾಣಕ್ಕೆ ಕಾರಣವಾಗಿದೆ. ಸುಮಾರು 150ಕ್ಕೂ ಹೆಚ್ಚು ಪಾಟ್‌ಗಳಲ್ಲಿ 85ಕ್ಕೂ ಹೆಚ್ಚು ವಿವಿಧ ಬಗೆಯ ತಾವರೇ ಗಿಡಗಳನ್ನು ಬೆಳೆಸಿದ್ದಾರೆ.

ಕಾಡುಪ್ರಾಣಿ ಕಾಟ ತಪ್ಪಿಸಲು ಮೇಷ್ಟ್ರು ಮಾಡಿದ ಸೂಪರ್ ಐಡಿಯಾ ಕಾಡುಪ್ರಾಣಿ ಕಾಟ ತಪ್ಪಿಸಲು ಮೇಷ್ಟ್ರು ಮಾಡಿದ ಸೂಪರ್ ಐಡಿಯಾ

"ಕೋವಿಡ್ ಬಳಿಕ ಕೆಲಸ ಕಳೆದುಕೊಂಡವರು, ಗೃಹಿಣಿಯರು ಇದನ್ನು ಸ್ವ ಉದ್ಯೋಗವನ್ನಾಗಿ ಮಾಡುವ ಅವಕಾಶವು ಇದೆ. ಗಿಡವನ್ನು ಬೆಳೆಸಿ ಗಿಡ, ಅಥವಾ ಹೂವನ್ನು ಮಾರಾಟ ಮಾಡಿದರೆ ಉತ್ತಮ ಆದಾಯವನ್ನು ಗಳಿಸಬಹುದು" ಎನ್ನುತ್ತಾರೆ ಸ್ನೇಹಾ ಭಟ್.

ಮಂಡ್ಯ; ಮನೆ ತಾರಸಿಯಲ್ಲಿ ಸೃಷ್ಟಿಯಾದ ಪುಷ್ಪಲೋಕ!ಮಂಡ್ಯ; ಮನೆ ತಾರಸಿಯಲ್ಲಿ ಸೃಷ್ಟಿಯಾದ ಪುಷ್ಪಲೋಕ!

85 ವಿವಿಧ ಬಗೆಯ ಗಿಡಗಳು ಇವೆ

85 ವಿವಿಧ ಬಗೆಯ ಗಿಡಗಳು ಇವೆ

ತಾವರೆ ಜೊತೆಗೆ ನೈದಿಲೆ, ಜಲಸಸ್ಯ, ಕೋಮಲೆ, ಬೌಲ್ ಲೋಟಸ್ ಸೇರಿದಂತೆ ಹಲವು ವಿಧದ ಗಿಡಗಳು ಟಾರಸಿ ತೋಟದಲ್ಲಿವೆ. ಪ್ರತಿಯೊಂದು ಹೂವಿನ ಆಕಾರ, ಸೌಂದರ್ಯ ಎಲ್ಲವೂ ಬೇರೆ ಬೇರೆಯಾಗಿರುತ್ತದೆ. ನೈದಿಲೆಯಲ್ಲಿ ರಾತ್ರಿ ಅರಳುವ ನೈಟ್ ಬ್ಲೂಮರ್ ಸಹ ಇದೆ. ಇದು ರಾತ್ರಿ ಅರಳಿ ಬೆಳಗ್ಗೆ ಮೊಗ್ಗಾಗಿರುತ್ತದೆ. ಇನ್ನು ದಿನ ಬಿಟ್ಟು ಅಥವಾ ನಿತ್ಯ ಅರಳುವ ಟ್ರಾಫಿಕಲ್ ಗಿಡ ಹಾಗೇ ಅಪರೂಪಕ್ಕೆ ಹೂವು ಬಿಡುವ ಹಾರ್ಡಿ ಜಾತಿಯ ಗಿಡಗಳು ಸಹ ಇದೆ. ಅಲ್ಬರ್ಟ್ ಗ್ರೀನ್ ಬರ್ಗ್, ಬ್ಲು ಸ್ಪೈಡರ್, ಬುಲ್ಸ್ ಐ, ಡ್ರಾಪ್ ಬ್ಲಡ್ ಲೋಟಸ್, ಲಿಜರ್ಡ್ ಟೈಲ್, ನ್ಯೂ ಸ್ಟಾರ್, ಪಿಂಕ್ ನೈಟ್ ಬ್ಲೂಮರ್, ಪರ್ಪಲ್ ಜಾಯ್, ಟ್ರಾಪಿಕಲ್ ಸನ್‌ಲೈಟ್, ಕ್ವೀನ್ ಆಫ್ ಹಾರ್ಟ್ಸ್ ಸೇರಿದಂತೆ ಸುಮಾರು 85 ವಿಧದ ಗಿಡಗಳಿವೆ.

ಗಿಡಗಳನ್ನು ಸಂಗ್ರಹ ಮಾಡುತ್ತಿದ್ದರು

ಗಿಡಗಳನ್ನು ಸಂಗ್ರಹ ಮಾಡುತ್ತಿದ್ದರು

ಸ್ನೇಹಾ ಭಟ್ ತಮ್ಮ ಕುಟುಂಬದ ಜೊತೆ ಹೊರಗಡೆ ಹೋದಾಗ ಕೆರೆ, ಗದ್ದೆಗಳಲ್ಲಿ ಈ ರೀತಿಯ ಗಿಡ ಕಂಡು ಬಂದರೆ ಸಂಗ್ರಹ ಮಾಡುತ್ತಿದ್ದರು. ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿರುವ ಗ್ರೂಪ್‌ಗಳಲ್ಲಿಯೂ ಸಂಪರ್ಕ ಮಾಡಿ ಈ ತಾವರೆ ಗಿಡಗಳನ್ನು ತರಿಸಿಕೊಂಡಿದ್ದಾರೆ. ಮಾರುಕಟ್ಟೆಯಲ್ಲಿ 50 ರೂಪಾಯಿಯಿಂದ ಹಿಡಿದು 50 ಸಾವಿರ ಬೆಲೆ ಬಾಳುವ ಗಿಡಗಳು ಸಹ ಇದೆ. ಇವರ ಸಂಗ್ರಹದಲ್ಲಿ 50 ರೂಪಾಯಿಯಿಂದ 1500 ರೂವರೆಗಿನ ಗಿಡಗಳಿವೆ. ಒಡಿಶಾ, ಗುಜರಾತ್, ತಮಿಳುನಾಡು, ಕೇರಳದಿಂದಲೂ ಗಿಡಗಳನ್ನು ಖರೀದಿ ಮಾಡಿದ್ದಾರೆ.

ಗಿಡ ಬೆಳೆಸಲು ಟಬ್‌ಗಳ ಬಳಕೆ

ಗಿಡ ಬೆಳೆಸಲು ಟಬ್‌ಗಳ ಬಳಕೆ

ಗಿಡ ಬೆಳೆಸುವುದಕ್ಕೆ ಪ್ಲಾಸ್ಟಿಕ್ ಟಬ್‌ಗಳನ್ನು ಸ್ನೇಹಾ ಭಟ್ ಬಳಕೆ ಮಾಡಿದ್ದಾರೆ. ಕೆಲವು ಟಬ್‌ಗಳ ಒಳಗೆ ಸಣ್ಣ ಪಾಟ್‌ಗಳನ್ನು ಇಟ್ಟು ಅದರಲ್ಲಿ ಈ ತಾವರೇ ಗಿಡಗಳನ್ನು ನೆಟ್ಟಿದ್ದಾರೆ. ನೆಡುವ ಸಂದರ್ಭದಲ್ಲಿ ಮಣ್ಣು, ಕೆಸರು ಮಣ್ಣು, ಸೆಗಣಿ ಮಿಕ್ಸ್ ಮಾಡಿ ಗಿಡಗಳನ್ನು ನೆಟ್ಟಿದ್ದಾರೆ. ಸಾವಯವ ಪದ್ದತಿಯಲ್ಲೇ ಆರೈಕೆಯನ್ನು ಮಾಡಿದ್ದಾರೆ. ಇನ್ನು ಟಬ್‌ಗಳಲ್ಲಿ ನಿಲ್ಲುವ ನೀರಿನಿಂದ ಸೊಳ್ಳೆ ಉತ್ಪತ್ತಿಯಾಗುವ ಸಾಧ್ಯತೆ ಇರುವುದರಿಂದ ಪ್ರತಿಯೊಂದು ಟಬ್‌ಗಳಲ್ಲಿಯು ಗಪ್ಪೆ ಫಿಶ್‌ಗಳನ್ನು ಹಾಕಲಾಗಿದೆ. ಇದರಿಂದ ನೀರು ಸ್ವಚ್ಚವಾಗಿರುತ್ತದೆ.

"ಈ ತಾವರೇ ಗಿಡಗಳಿಗೆ ಹೆಚ್ಚಿನ ಆರೈಕೆ ಮಾಡಬೇಕಿಲ್ಲ. ಯಾಕೆಂದರೆ ಇದಕ್ಕೆ ರೋಗ ಬರುವುದು ಕಡಿಮೆ. ಆದರೆ ಜಾಸ್ತಿ ಮಳೆಯಾದ ಸಂದರ್ಭದಲ್ಲಿ ಗಿಡ ಕೊಳೆತು ಹೋಗುವ ಸಾಧ್ಯತೆ ಇರುತ್ತದೆ. ಇನ್ನು ಮಳೆ ನಿಂತ ಬಳಿಕ ಕಂಬಳಿ ಹುಳದ ಭಾದೆ ಬರುವ ಸಾಧ್ಯತೆ ಇದೆ. ನೀರು ಆಗಾಗ ಚೇಂಜ್ ಮಾಡುವ ಅವಶ್ಯಕತೆಯು ಇರುವುದಿಲ್ಲ. ಆದರೆ ಪಾಚಿ ಕಟ್ಟಿದರೆ ಮಾತ್ರ ನೀರು ಬದಲಾವಣೆ ಮಾಡಿದರೆ ಉತ್ತಮ" ಎನ್ನುತ್ತಾರೆ ಸ್ನೇಹಾ ಭಟ್.

ವಾಣಿಜ್ಯ ವ್ಯವಹಾರಗಳನ್ನು ಮಾಡುತ್ತಿಲ್ಲ

ವಾಣಿಜ್ಯ ವ್ಯವಹಾರಗಳನ್ನು ಮಾಡುತ್ತಿಲ್ಲ

ಈ ತಾವರೇ ಗಿಡಗಳ ಪ್ರತಿಯೊಂದು ಭಾಗಕ್ಕೂ ತುಂಬಾ ಬೆಲೆ ಇದೆ. ಆದರೆ ಸ್ನೇಹಾ ಭಟ್ ಇವುಗಳ ವಾಣಿಜ್ಯ ವ್ಯವಹಾರ ಮಾಡುತ್ತಿಲ್ಲ. ಇದರ ಹೊರತಾಗಿ ಇದರ ಗೆಡ್ಡೆ, ಬೇರು, ಕಾಂಡ, ಎಲೆ ಪ್ರತಿಯೊಂದಕ್ಕೂ ಬೆಲೆ ಇದೆ.

"ತಾವರೇ ದಳಗಳನ್ನು ಹೇರ್ ಕಂಡೀಶನರ್‌ ತಯಾರಿಗೆ, ವಿವಿಧ ಕಾಸ್ಮೆಟಿಕ್‌ಗಳ ತಯಾರಿಕೆಗೆ ಬಳಕೆ ಮಾಡಲಾಗುತ್ತದೆ. ಇದರಲ್ಲಿ ಗೆಡ್ಡೆಯಲ್ಲಿ ಚಿಗುರು ಬಂದು ಗಿಡ ಆಗುವ ಜಾತಿ, ಎಲೆಗಳಲ್ಲಿಯೇ ಮತ್ತೊಂದು ಗಿಡ ಬರುವ ಜಾತಿ, ಇನ್ನು ಬೇರುಗಳಿಂದ ಗಿಡ ಬೆಳೆಯುವ ಜಾತಿಯು ಇದೆ. ಇನ್ನು ಮದರ್ ಪ್ಲ್ಯಾಂಟ್ ಕೊಳೆತು ಹೋದರೆ ಅಷ್ಟರಲ್ಲಾಗಲೇ ಇನ್ನೊಂದು ಗಿಡ ಬಂದಿರುವುದರಿಂದ ಗಿಡದ ಸಂತತಿ ನಶಿಸಿ ಹೋಗುತ್ತದೆ ಎಂಬ ಭಯ ಇರುವುದಿಲ್ಲ" ಎನ್ನುತ್ತಾರೆ ಸ್ನೇಹಾ ಭಟ್.

English summary
Mangaluru assistant professor Shenha Bhat busy in lotus cultivation at tares garden. More than 80 variety lotus in the garden.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X