ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಳ್ವಾಸ್ ನಲ್ಲಿ ಬಸ್ ಗಳ ಮೇಲಿಂದ ಹಾರಿದ ಬೈಕ್ ಸಾಹಸ ರೋಮಾಂಚನ!

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಾಲ್ಕನೇ ವರ್ಷದ ಆಳ್ವಾಸ್ ಮೋಟೋರಿಗ್-2017 ಆಟೋ ಎಕ್ಸ್ ಪೋ, ಸಾಹಸ ಪ್ರದರ್ಶನ ಮಿಜಾರಿನ ಶೋಭಾವನದಲ್ಲಿ ಭಾನುವಾರ ನಡೆಯಿತು.

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮೂಡುಬಿದಿರೆ, ಮೇ 22: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಾಲ್ಕನೇ ವರ್ಷದ ಆಳ್ವಾಸ್ ಮೋಟೋರಿಗ್-2017 ಆಟೋ ಎಕ್ಸ್ ಪೋ, ಸಾಹಸ ಪ್ರದರ್ಶನ ಮಿಜಾರಿನ ಶೋಭಾವನದಲ್ಲಿ ಭಾನುವಾರ ನಡೆಯಿತು. 200ಕ್ಕೂ ಅಧಿಕ ದ್ವಿಚಕ್ರ ವಾಹನ, ಕಾರುಗಳು ಪ್ರದರ್ಶನಗೊಂಡಿತು. ಸೂಪರ್ ಬೈಕ್ಸ್, ಸೂಪರ್ ಕಾರು, ಲಕ್ಸುರಿ ಕಾರು, ವಿಂಟೇಜ್ ಕಾರು ಪ್ರದರ್ಶನವು ಗಮನಸೆಳೆಯಿತು.

ಅಂತಾರಾಷ್ಟ್ರೀಯ ಖ್ಯಾತಿಯ ಗೌರವ್ ಖಾತ್ರಿ ಜೈಪುರ ಅವರಿಂದ ಫ್ರೀ ಸ್ಟೈಲ್ ಜಂಪ್ ಮೋಟೋರಿಗ್ ನ ವಿಶೇಷ ಆಕರ್ಷಣೆಯಾಗಿತ್ತು. ನ್ಯಾಷನಲ್ ಫ್ರೀ ಸ್ಟೈಲ್ ಮೋಟರ್ ಸ್ಫೋರ್ಟ್ಸ್ ರೈಡರ್ ಗೌರವ್ ಖಾತ್ರಿ ಅವರು 75 ಅಡಿ ಉದ್ದಕ್ಕೆ ಐದು ಬಸ್‍ಗಳ ಮೇಲಿನಿಂದ ಜಿಗಿದು ದಾಖಲೆಯ ಪ್ರದರ್ಶನ ನೀಡಿದರು.

ಭಾರತದಲ್ಲಿ ಬಸ್ ಮೇಲಿನಿಂದ ಫ್ರೀ ಸ್ಟೆಲ್ ಜಂಪ್ ಮಾಡಿದ ಅಪರೂಪ ಕ್ಷಣಕ್ಕೆ ಶೋಭಾವನ ಸಾಕ್ಷಿಯಾಯಿತು. ಗೌರವ್ ಕಾರುಗಳ ಮೇಲೆಯೂ ಜಿಗಿದು ಸಾಹಸವನ್ನು ಪ್ರದರ್ಶಿಸಿದರು. ಇನ್ನಷ್ಟು ಚಿತ್ರಗಳನ್ನು ಮುಂದೆ ನೋಡಿ...

ಪ್ರೀಮಿಯಮ್ ಕಾರುಗಳ ramp ಶೋ

ಪ್ರೀಮಿಯಮ್ ಕಾರುಗಳ ramp ಶೋ

ಇಂಡಿಯನ್ ಮೋಟಾರ್ rally ಸೂಪರ್ ಕ್ರಾಸ್ ಚಾಂಪಿಯನ್ ಅದ್ನಾನ್ ಹಾಗೂ ಸುದೀಪ್ ಕೊಠಾರಿಯವರಿಂದ ಸೂಪರ್ ಕ್ರಾಸ್ ಸಿಕ್ವೇನ್ಸ್ ಸ್ಟಂಟ್‍ಗಳು ನಡೆಯಿತು. . ಎಕ್ಸೋಟಿಕ್ ಹಾಗೂ ಪ್ರೀಮಿಯಮ್ ಕಾರುಗಳ ramp ಶೋ

ಫ್ರೀ ಸ್ಟೈಲ್ ಸ್ಟಂಟ್‍ಗಳು

ಫ್ರೀ ಸ್ಟೈಲ್ ಸ್ಟಂಟ್‍ಗಳು

ಮಂಗಳೂರಿನ ಇಂಡಿಯನ್ Rally ಚಾಂಪಿಯನ್ ಅರ್ಜುನ್ ರಾವ್ ಹಾಗೂ ಇಂಡಿಯನ್ Rally ಚಾಂಪಿಯನ್ ರಾಹುಲ್ ಕಾಂತರಾಜ್‍ರಿಂದ rally ಸಿಕ್ವೇನ್ಸ್ ಸ್ಟಂಟ್, ಉಡುಪಿಯ ಹಾಟ್ ಪಿಸ್ಟನ್ಸ್ ಗ್ರೂಪಿನಿಂದ ದ್ವಿಚಕ್ರವಾಹನಗಳಿಂದ ಫ್ರೀ ಸ್ಟೈಲ್ ಸ್ಟಂಟ್‍ಗಳು ನಡೆಯಿತು.

ಟೀಮ್ ಬೆದ್ರ

ಟೀಮ್ ಬೆದ್ರ

ಟಿಎಎಸ್ಸಿ, ಐಎಂಎಸ್ಸಿ, ಬೆದ ಅಡ್ವೆಂಚರ್ಸ್ ಕ್ಲಬ್, ಕೋಸ್ಟಲ್ ರೈಡರ್ಸ್, ಕೆಎಲ್14 ಹಾಗೂ ಟೀಮ್ ಬೆದ್ರ ಯುನೈಟೆಡ್ ಇವರುಗಳ ಸಹಕಾರದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಅದಾನಿ ಯುಪಿಸಿಎಲ್ ಸಮೂಹ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಎಂ ಕಿಶೋರ್ ಆಳ್ವ ಉದ್ಘಾಟಿಸಿದರು.

ಇಂಡಿಯನ್ rally ಚಾಂಪಿಯನ್

ಇಂಡಿಯನ್ rally ಚಾಂಪಿಯನ್

ಕೆಎಲ್14 ನೇತೃತ್ವ ವಹಿಸಿದ್ದ ಮೂಸ ಶರೀಫ್, ಇಂಡಿಯನ್ rally ಚಾಂಪಿಯನ್ ಅಶ್ವಿನ್ ನಾಯ್ಕ, ಮೂಡಬಿದಿರೆ ಚೌಟರ ಅರಮನೆಯ ಕುಲದೀಪ್ ಎಂ, ಮೂಡುಬಿದಿರೆಯ ಉದ್ಯಮಿ. ಅಬುಲ್ ಆಲಾ ಪುತ್ತಿಗೆ, ಮಂಗಳೂರಿನ ಮಾಂಡವಿ ಪ್ರೈವೇಟ್ ಲಿಮಿಟೆಡ್‍ನ ನಿರ್ದೇಶಕ ಸಂಜಯ್ ರಾವ್, ವಿಜ್ಞಾನಿ ಡಾ.ಹರೀಶ್ ಭಟ್, ನಿಶ್ಮಿತಾ ಗ್ರೂಪ್ಸ್ ನ ಮಾಲೀಕ ನಾರಾಯಣ ಪಿ.ಎಂ, ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡಿಸ್, ಮೋಟೊರಿಗ್ ಸಂಯೋಜಕ ಮುದ್ದುಕೃಷ್ಣ, ಅಕ್ಷಯ್ ಜೈನ್ ಉಪಸ್ಥಿತರಿದ್ದರು.

ಫ್ರೀ ಸ್ಟೈಲ್ ಜಂಪ್ ಮೋಟರಿಂಗ್

ಫ್ರೀ ಸ್ಟೈಲ್ ಜಂಪ್ ಮೋಟರಿಂಗ್

ಸುಮಾರು 15 ಅಡಿ ಎತ್ತರದ ಗುಡ್ಡದ ಪಕ್ಕದಲ್ಲಿ ಸಾಲಾಗಿ ನಿಲ್ಲಿಸಿದ ಇದು ಬಸ್ಸುಗಳ ಮೇಲಿನಿಂದ ಸುಮಾರು 75 ಅಡಿ ದೂರಕ್ಕೆ ಜಂಪ್ ಸಹಿತ ಹಲವು ಬಗೆಯ ಸಾಹಸ ದೂರಕ್ಕೆ ಬೈಕಿನ ಜಂಪ್ ನೂರಾರು ಮಂದಿಯಲ್ಲಿ ರೋಮಾಂಚಕ ಅನುಭವ ನೀಡಿತು. ಭಾರತದಲ್ಲಿ ಬಸ್ ಮೇಲಿನಿಂದ ಸ್ಟೈಲ್ ಜಂಪ್ ಮಡಿದ ಅಪರೂಪ ಕ್ಷಣಕ್ಕೆ ಶೋಭಾವನ ಸಾಕ್ಷಿಯಾಯಿತು.

ನಾಲಕ್ಕನೆ ವರ್ಷದ ಆಳ್ವಾಸ್ ಮೋಟರಿಂಗ್

ನಾಲಕ್ಕನೆ ವರ್ಷದ ಆಳ್ವಾಸ್ ಮೋಟರಿಂಗ್

ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ವತಿಯಿಂದ ಅಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಭಾನುವಾರ ನಡೆದ ನಾಲಕ್ಕನೆ ವರ್ಷದ ಆಳ್ವಾಸ್ ಮೋಟರಿಂಗ್ - 2017ರಲ್ಲಿ ಜೈಪುರದ ನ್ಯಾಷನಲ್ ಮೋಟಾರ್ ರೈಡರ್ ಗೌರವ ಖಾತ್ರಿ ನಡೆಸಿದ ಫ್ರೀ ಸ್ಟೈಲ್ ಜಂಪ್ ಮೋಟರಿಂಗ್ ಪ್ರಧಾನ ಆಕರ್ಷಣೆಯಾಗಿತ್ತು. ಗೌರವ್ ಕರುಗಳ ಮೇಲೆಯೂ ಜಿಗಿದು ಸಾಹಸವನ್ನು ಪ್ರದರ್ಶಿಸಿದರು.

ಸೂಪರ್ ಬೈಕ್

ಸೂಪರ್ ಬೈಕ್

ಹಲವಾರು ದುಬಾರಿ ಬೈಕ್ ಹಾಗು ಕಾರುಗಳಲ್ಲಿ ರೈಡರ್ಗಳು ಶೋಭಾವನಾದ ಇದು ಹಾದಿಯಲ್ಲಿ ಶೋ ನಡೆಸಿ ಗಮನ ಸೆಳೆದರು. 200 ಕ್ಕೂ ಅಧಿಕ ದ್ವಿಚಕ್ರ ವಾಹನ, ಕಾರುಗಳ ಪ್ರದರ್ಶನಗೊಂಡಿತು . ಸೂಪರ್ ಬೈಕ್, ಸೂಪರ್ ಕಾರು, ಲಕ್ಸುರಿ ಕಾರು, ವಿಂಟೇಜ್ ಕಾರು ಪ್ರದರ್ಶನವು ಗಮನಸೆಳೆಯಿತು.

English summary
The loveliest weather in Mijar, Shobhavana, on Sunday, made much of the racing enthusiasts to witness spectacular bike stunts, flips to leave them in memorization. Alva’s Motorig 2017, shifting expectation, with its fourth edition, hosted by Alva’s Education Foundation
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X