• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಗಳೂರಿನಲ್ಲಿ ಮರ್ಮಾಂಗ ಕತ್ತರಿಸಿ ಬರ್ಬರ ಹತ್ಯೆ

By ಐಸಾಕ್ ರಿಚರ್ಡ್, ಮಂಗಳೂರು
|

ಮಂಗಳೂರು, ಫೆ.8: ನಗರದ ಎ.ಜೆ.ಆಸ್ಪತ್ರೆ ಸಮೀಪದ ಬಾರೆ ಬೈಲ್ ಎಂಬಲ್ಲಿ ಮಧ್ಯವಯಸ್ಕ ವ್ಯಕ್ತಿಯೊಬ್ಬನ ಮರ್ಮಾಂಗ ಕತ್ತರಿಸಿ ಅಮಾನುಷವಾಗಿ ಹತ್ಯೆ ಮಾಡಿರುವ ಘಟನೆ ಶನಿವಾರ ತಡರಾತ್ರಿ ನಡೆದಿದೆ. ಮೃತಪಟ್ಟಿರುವ ವ್ಯಕ್ತಿಯನ್ನು ಆಂಟೋನಿ ಪಿಂಟೋ (49) ಎಂದು ಗುರುತಿಸಲಾಗಿದೆ.

ಕುಂಟಿಕಾನ ಬಾರೆಬೈಲ್ ನಿವಾಸಿಯಾಗಿರುವ ಪಿಂಟೋ ಶನಿವಾರ ರಾತ್ರಿ 8 ಗಂಟೆಯಿಂದ ನಾಪತ್ತೆಯಾಗಿದ್ದು ಮನೆಯವರು ಅವರಿಗಾಗಿ ಹುಡುಕಾಡಿದ್ದರಾದರೂ ಮನೆಗೆ ಮರಳಿರಲಿಲ್ಲ. ಭಾನುವಾರ ಬೆಳಗ್ಗೆ ಮೃತ ದೇಹ ಪತ್ತೆಯಾಗಿದೆ. ಸ್ಥಳೀಯರು ಕದ್ರಿ ಠಾಣೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಪತ್ನಿ ಮತ್ತು ಮಕ್ಕಳೊಂದಿಗೆ ಬಾರೆಬೈಲ್ ನಲ್ಲಿ ವಾಸವಿದ್ದ ಆಂಟನಿ ಪಿಂಟೋ ಅವರನ್ನು ಯಾವ ಕಾರಣಕ್ಕೆ ಹೀಗೆ ಕೊಲೆ ಮಾಡಲಾಗಿದೆ ಎನ್ನುವುದು ತಿಳಿದು ಬಂದಿಲ್ಲ.ಮೇಲ್ನೋಟಕ್ಕೆ ಇದು ದ್ವೇಷದಿಂದ ನಡೆದ ಕೊಲೆ ಎಂದು ತಿಳಿದು ಬಂದಿದೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಕದ್ರಿ ಠಾಣಾಧಿಕಾರಿಗಳು ಹೇಳಿದ್ದಾರೆ.

ಭೀಕರ ದೃಶ್ಯ: ಮೃತ ವ್ಯಕ್ತಿ ಅಂಗಿ ಮತ್ತು ಲುಂಗಿ ಧರಿಸಿದ್ದು, ಒಳ ಉಡುಪನ್ನು ತೆಗೆದು ಮರ್ಮಾಂಗವನ್ನು ತುಂಡರಿಸಲಾಗಿದೆ. ಮೇಲ್ನೋಟಕ್ಕೆ ಇದೊಂದು ಪ್ರತೀಕಾರದ ಹತ್ಯೆ ಎನ್ನುವಂತೆ ಭಾಸವಾಗುತ್ತಿದೆ. ಶನಿವಾರ ರಾತ್ರಿಯೇ ಈ ಕೃತ್ಯ ನಡೆದಿರುವ ಸಾಧ್ಯತೆಯಿದೆ.

ನಂಬಿಗಸ್ಥರೇ ಇವರನ್ನು ಕರೆದುಕೊಂಡು ಹೋಗಿ ಕೊಲೆ ಮಾಡಿ ಮೃತದೇಹವನ್ನು ಬಿಟ್ಟು ಹೋಗಿದ್ದಾರೆ ಎನ್ನುವಂತೆ ಕಾಣುತ್ತಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಯಕ್ಷಗಾನ ಕಲಾವಿದ ಜನಾರ್ದನ ಬಜಲ್ ನಿಧನ

ತೆಂಕತೆಟ್ಟು ಯಕ್ಷಗಾನ ಶೈಲಿಯ ಖ್ಯಾತ ಕಲಾವಿದ ಜನಾರ್ದನ ಬಜಲ್ ಅವರು ಶನಿವಾರ ಕಾಸರಗೋಡಿನ ಮಂಜೇಶ್ವರದಲ್ಲಿನ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಪತ್ನಿ, ಇಬ್ಬರು ಪುತ್ರರು ಹಾಗೂ ನಾಲ್ವರು ಪುತ್ರಿಯರು ಸೇರಿದಂತೆ ಅಪಾರ ಅಭಿಮಾನಿ ವರ್ಗವನ್ನು ಅಗಲಿದ್ದಾರೆ.

ಬೋಲಾರ ನಾರಾಯಣ ಶೆಟ್ಟಿ ಅವರ ಗರಡಿಯಲ್ಲಿ ಬೆಳೆದ ಬಜಲ್ ಅವರು ಸುಮಾರು ನಾಲ್ಕು ದಶಕಗಳ ಕಾಲ ಯಕ್ಷಗಾನದಲ್ಲಿ ವಿವಿಧ ವೇಷಗಳನ್ನು ತೊಟ್ಟು ಪ್ರೇಕ್ಷಕರನ್ನು ರಂಜಿಸಿದ್ದರು. ಜನಾರ್ದನ ಅವರ ನಿಧನಕ್ಕೆ ಉಡುಪಿ ಯಕ್ಷಗಾನ ಕಲಾರಂಗ ಅಧ್ಯಕ್ಷ ಟಿ ಶಿವರಾಮ್ ಶೆಟ್ಟಿ ಮತ್ತಿತ್ತರ ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ.

English summary
A man was found brutally murdered near A.J Hospital near Barebail on here late night on Saturday Deb.7.The deceased has been identified as Anthony Pinto (49), a resident of Kuntikana Barebail. Kadri police have registered the case and are investigating the same.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more