ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಕಿ ಪೊಟ್ಟಣದ ಕಡ್ಡಿ ಎಣಿಸುವಂತೆ ರ‍್ಯಾಗ್ ಮಾಡಿದ ಸೀನಿಯರ್ಸ್ ವಿದ್ಯಾರ್ಥಿಗಳ ಬಂಧನ

|
Google Oneindia Kannada News

ಮಂಗಳೂರು, ಫೆಬ್ರವರಿ 12: ದಕ್ಷಿಣ ಕನ್ನಡ ಜಿಲ್ಲೆಯ ದೇರಳಕಟ್ಟೆಯ ಕಣಚೂರು ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ ಕಾಲೇಜಿನ ಮೊದಲ ವರ್ಷದ ಫಿಸಿಯೋಥೆರಪಿ ವಿದ್ಯಾರ್ಥಿಗಳಿಗೆ ಅದೇ ಕಾಲೇಜಿನ ಸೀನಿಯರ್‌ ವಿದ್ಯಾರ್ಥಿಗಳು ರ‍್ಯಾಗಿಂಗ್‌ ಮಾಡಿದ ಆರೋಪದಲ್ಲಿ 11 ಮಂದಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಕೇರಳ ಕ್ಯಾಲಿಕಟ್ ಪದಿಯಾಕೆರೆ ನಿವಾಸಿ ಮಹಮ್ಮದ್‌ ಶಮೊಸ್(19), ಕೊಟ್ಟಾಯಂ ಕಾನಕರಿ ನಿವಾಸಿ ಅಕ್ಷಯ್(19), ಕೊಟ್ಟಾಯಂ ಪುಣ್ಣತೊರ ಈಸ್ಟ್‌ ನಿವಾಸಿ ರೋಬಿನ್ ಬಿಜು(20), ಕಾಸರಗೋಡು ಆನಂದಾಶ್ರಮ ಅಬ್ದುಲ್‌ ಅನನಾಸ್(21), ಕಾಸರಗೋಡು ಚಿಟ್ಟಾರಿಕಲ್ ನಿವಾಸಿ ಜೇಫಿನ್ ರೋಯಿಚನ್(19), ಕೊಟ್ಟಾಯಂ ಎಡೆಯಾರಿ ಅಲ್ವಿನ್ ಜೋಯ್(19), ಕೊಟ್ಟಾಯಂ ಜೆರೋನ್ ಸಿರಿಲ್(19), ಪತ್ತನಂತಿಟ್ಟ ಮಹಮ್ಮದ್‌ ಸಿರಾಜ್(19), ಕ್ಯಾಲಿಕಟ್ ಆಸಿನ್ ಬಾಬು(19), ಚೋಲೆಕಲ್ ಮಂಜೇರಿ ಜುಬಿನ್ ಮೆಹರೂಫ್(21), ಮಲಪುರ ಅಬ್ದುಲ್‌ ಬಾಸಿತ್(19) ಬಂಧಿತರಾಗಿದ್ದಾರೆ.

ಬಂಧಿತ ಆರೋಪಿಗಳು ಜೂನಿಯರ್‌ ವಿದ್ಯಾರ್ಥಿಗಳನ್ನು ಶೇವಿಂಗ್, ಕಟ್ಟಿಂಗ್ ಮಾಡಿಸಬೇಕು, ಬೆಂಕಿ ಪೊಟ್ಟಣ ಕಡ್ಡಿ ಎಣಿಸಬೇಕು, ಬೆಂಕಿ ಕಡ್ಡಿಯಿಂದ ರೂಮನ್ನು ಅಳೆಯಬೇಕು ಎಂಬಿತ್ಯಾದಿ ಮಾಡಿದ್ದಲ್ಲದೆ, ವಿರೋಧ ಮಾಡಿದ ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸಿದ್ದಾರೆ. ಮಾತ್ರವಲ್ಲದೆ ಈ ವಿಷಯ ಯಾರಿಗಾದರೂ ಹೇಳಿದರೆ ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ.

Mangaluru: 11 Senior Students Arrested For Ragging In Medical Science College

ಇದರಿಂದ ನೊಂದ ಐವರು ವಿದ್ಯಾರ್ಥಿಗಳು ಕಾಲೇಜು ಆಡಳಿತ ಮಂಡಳಿಗೆ ವಿಷಯ ತಿಳಿಸಿದ್ದು, ಅವರ ನಿರ್ದೇಶನ ಮೇರೆಗೆ ಉಳ್ಳಾಲ ಪೊಲೀಸ್‌ ಠಾಣೆಗೆ ದೂರು ನೀಡಲಾಗಿತ್ತು.

ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಎನ್‌. ಶಶಿಕುಮಾರ್‌, ಡಿಸಿಪಿಗಳಾದ ಹರಿರಾಂ ಶಂಕರ್‌, ವಿನಯ್‌ ಗಾಂವ್ಕರ್‌, ಎಸಿಪಿ ರಂಜಿತ್ ನಿರ್ದೇಶನ ಮೇರೆಗೆ ಉಳ್ಳಾಲ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ದೂರು ನೀಡಿ
ಕಾಲೇಜಿನಲ್ಲಿ ರ‍್ಯಾಗಿಂಗ್‌ ನಡೆಯುತ್ತಿದ್ದರೆ ಶಾಲಾ ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳು ಕೂಡಲೇ ಸಂಬಂಧಪಟ್ಟ ಪೊಲೀಸ್‌ ಠಾಣೆಗೆ ದೂರು ನೀಡಿ ಎಂದು ಕಮಿಷನರ್‌ ತಿಳಿಸಿದ್ದಾರೆ.

English summary
The police have arrested 11 persons for allegedly ragging on the first year physiotherapy students of the Kanachur Institute of Medical Science.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X