ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೇಂದ್ರ ಬಜೆಟ್ ಬಗ್ಗೆ ಮಂಗ್ಳೂರಿನ ಜನತೆ ಏನಂದ್ರು?

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು. ಫೆಬ್ರವರಿ. 01 : 2017-18ನೇ ಸಾಲಿನ ಪ್ರಸಕ್ತ ವರ್ಷದ ಕೇಂದ್ರ ಬಜೆಟ್ ನ್ನು ಬುಧವಾರ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡನೆ ಮಾಡಿದರು.

ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ವಚ್ಛ ಭಾರತ್ ಯೋಜನೆಗಳಿಗೆ ಅನುಗುಣವಾಗಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದ್ದಾರೆ. [ಬಜೆಟ್ 2017: ಯಾವ್ದು ಏರಿಕೆ? ಯಾವ್ದು ಇಳಿಕೆ?]

ಇನ್ನು ಈ ಬಜೆಟ್ ಮಂಡನೆಗೆ ಮಂಗಳೂರಲ್ಲೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿವೆ. ಈ ಬಗ್ಗೆ ನಮ್ಮ 'ಒನ್ ಇಂಡಿಯಾ' ಕ್ಕೆ ಕೆಲವರು ತಮ್ಮ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ. ಅವರ ಪ್ರತಿಕ್ರಿಯೆಗಳು ಹೀಗಿವೆ. [ಬಜೆಟ್ 2017: ಹಣಕಾಸು ಸಚಿವ ಅರುಣ್ ಜೇಟ್ಲಿ ಘೋಷಿಸಿದ ಮುಖ್ಯಾಂಶಗಳು]

Mangalorian peoples reactions about central budget of 2017

ಬಂಟ್ವಾಳ ವಿಶ್ವನಾಥ (ಬೀಡಿ ಕಾರ್ಮಿಕ)
ಗೃಹ ಸಾಲದಲ್ಲಿ ಇಳಿಕೆ ಮಾಡಿರುವುದು ಬೇಸರ ತಂದಿದೆ. ಕನಿಷ್ಠ ಪಕ್ಷ ಗೃಹ ಸಾಲ ಮನ್ನಾ ಮಾಡಬೇಕಾಗಿತ್ತು. ಹಾಗೂ ಸಾಲದ ಬಡ್ಡಿ ದರ ಕಡಿಮೆ ಮಾಡಬೇಕಾಗಿತ್ತು.

ಉಪ್ಪಿನಂಗಡಿ ಉಮರ್ (ಕೃಷಿಕ)
ಇಂದಿನ ಬಜೆಟ್ ನಲ್ಲಿ ಕೃಷಿ ಸಾಲ ನೀಡುವ ಪ್ರಮಾಣದಲ್ಲಿ ಹೆಚ್ಚಳ ಮಾಡಿರುವುದು ಖುಷಿ ತಂದಿದೆ. ಆದರೆ, ಸಾಲ ಜಾಸ್ತಿ ಕೊಟ್ಟು ಬಡ್ಡಿದರ ಜಾಸ್ತಿ ಹಾಕದಿದ್ದರೆ ಸಾಕು.

ಮಂಗಳೂರು ಪ್ರವೀಣ್ (ಪೋಸ್ಟ್‌ ಮಾಸ್ಟರ್)
ಅಂಚೆ ಕಚೇರಿಗಳಲ್ಲಿ ಪಾಸ್ ಪೋರ್ಟ್ ನೀಡುವ ವ್ಯವಸ್ಥೆ ಜಾರಿ ಮಾಡುತ್ತಿರುವುದು ಒಳ್ಳೆಯದು. ಈ ಮೂಲಕ ಗ್ರಾಮೀಣ ಜನರಿಗೆ ಸುಲಭವಾಗಿ ಪಾಸ್ ಪೋರ್ಟ್ ಪಡೆಯಲು ಅನುಕೂಲವಾಗಲಿದೆ.

ರಹ್ಮಾನ್, ಮಂಗಳೂರು
ಪದೇ ಪದೇ ಪಾನ್ ಮಸಾಲ, ಸಿಗರೇಟ್ ದರ ಹೆಚ್ಚಳ ಮಾಡುವುದ್ಯಾಕೆ? ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಸುಳ್ಯದ ಅಭಿಜಿತ್ (ವಿದ್ಯಾರ್ಥಿ)
ಹೊಸ ಕಾನೂನುಗಳ ಮೂಲಕ ಅಕ್ರಮ ಆಸ್ತಿ ಜಪ್ತಿ ಮಾಡಬೇಕು. ಸಾಲ ಪಾವತಿಸದೆ ತಪ್ಪಿಸಿಕೊಂಡವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು..

English summary
Here is the Mangalorian peoples reactions about central budget of 2017 by Finance minister Arun Jaitely on February 01.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X