ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತುಳುನಾಡಿನ ಡಿಸೈನ್ ನಲ್ಲಿ ಮೂಡಿ ಬಂದ ಗಾಳಿಪಟ ಉತ್ಸವದ ಕರೆಯೋಲೆ

|
Google Oneindia Kannada News

ಮಂಗಳೂರು, ಜುಲೈ 27: ಫ್ರಾನ್ಸ್ ನಲ್ಲಿ ನಡೆಯಲಿರುವ ವಿಶ್ವದ ಅತೀ ದೊಡ್ಡ ಗಾಳಿಪಟ ಉತ್ಸವದ ಪೋಸ್ಟರ್ ಡಿಸೈನ್ ಮಾಡಿದ್ದು ನಮ್ಮ ಕನ್ನಡಿಗ, ಮಂಗಳೂರಿನ ಖ್ಯಾತ ಕಲಾವಿದ ಹಾಗೂ ಪರಿಸರವಾದಿ ದಿನೇಶ್ ಹೊಳ್ಳ.

ದಿನೇಶ್ ಹೊಳ್ಳ ರಚಿಸಿರುವ ಪೋಸ್ಟರ್ ಫ್ರಾನ್ಸ್ ನಲ್ಲಿ ನಡೆಯುವ ಅಂತರಾಷ್ಟ್ರೀಯ ಗಾಳಿಪಟ ಉತ್ಸವದ ಅಧಿಕೃತ ಪೋಸ್ಟರ್ ಆಗಿ ಆಯ್ಕೆಯಾಗಿದೆ. ಇದೇ ಬರುವ ಸೆಪ್ಟೆಂಬರ್ 8 ರಿಂದ 16 ರವರೆಗೆ ಈ ಫ್ರಾನ್ಸ್ ಡೀಪಿ ನಗರದಲ್ಲಿ ಈ ಅಂತರಾಷ್ಟ್ರೀಯ ಗಾಳಿಪಟ ಉತ್ಸವ ನಡೆಯಲಿದೆ.

ಬೆಳಗಾವಿ: ಬಾನಂಗಳದಲ್ಲಿ ಹಾರಿದ ನಗ್ನ ಚಿತ್ರವುಳ್ಳ ಗಾಳಿಪಟ ಬೆಳಗಾವಿ: ಬಾನಂಗಳದಲ್ಲಿ ಹಾರಿದ ನಗ್ನ ಚಿತ್ರವುಳ್ಳ ಗಾಳಿಪಟ

48 ರಾಷ್ಟ್ರಗಳು ಭಾಗವಹಿಸುವ ಈ ಗಾಳಿಪಟ ಉತ್ಸವದ ಪೋಸ್ಟರ್ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಪ್ರಚಾರಕ್ಕೆ ಬಳಕೆಯಾಗಲಿದೆ. ಅಮೆರಿಕ, ಕೆನಡಾ, ಆಸ್ಟ್ರೇಲಿಯಾ , ಯುರೋಪಿನ ದೇಶಗಳ ಕಲಾವಿದರು ಈ ಗಾಳಿಪಟ ಉತ್ಸವದ ಪೋಸ್ಟರ್ ವಿನ್ಯಾಸ ಮಾಡಿದ್ದರು.

Mangalorean artists poster selected for International Kite festival

ಆದರೆ ಅಂತಿಮವಾಗಿ ಮಂಗಳೂರಿನ ದಿನೇಶ್ ಹೊಳ್ಳ ಅವರ ಪೋಸ್ಟರ್ ಗಾಳಿಪಟ ಉತ್ಸವದ ಅಧಿಕೃತ ಪೋಸ್ಟರ್ ಆಗಿ ಆಯ್ಕೆಯಾಗಿದೆ. ಈ ಪೋಸ್ಟರ್ ನಲ್ಲಿ ಪರಿಸರ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿರುವ ಹಿನ್ನೆಲೆಯಲ್ಲಿ ಆಯ್ಕೆ ಮಾಡಲಾಗಿದೆ.

ಅಂತರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಭಾರತದ ಪ್ರತಿನಿಧಿಗಳಾಗಿ ತೆರಳುವ ಟೀಮ್ ನಲ್ಲಿ ಮಂಗಳೂರಿನ ಸದಸ್ಯರಾಗಿ ದಿನೇಶ್ ಹೊಳ್ಳ ಭಾಗವಹಿಸಲಿದ್ದಾರೆ. ಈ ಬಾರಿ ಫಾನ್ಸ್ ನ ಅಂತರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆಂದೇ ತುಳುನಾಡಿನ ಕೋರಿದ ಕಟ್ಟ ( ಕೋಳಿ ಅಂಕ) ಎಂಬ ಗಾಳಿಪಟವನ್ನು ಟೀಮ್ ಮಂಗಳೂರು ಸಿದ್ದಪಡಿಸಿದೆ.

English summary
Mangaluru artist Dinesh Holla designed poster selected for International Kite Festival
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X