ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫ್ರಾನ್ಸ್ ನಲ್ಲಿ ಹಾರಾಡಿತು ಮಂಗಳೂರಿನ ಗಾಳಿಪಟ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಸೆಪ್ಟೆಂಬರ್ 25: ಫ್ರಾನ್ಸ್‌ನ ಡೀಪಿ ನಗರದಲ್ಲಿ ಆಯೋಜನೆಗೊಂಡ ಅಂತರರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಟೀಂ ಮಂಗಳೂರು ತಂಡ ಭಾಗವಹಿಸಿ, ಮೆಚ್ಚುಗೆಗೆ ಪಾತ್ರವಾಗಿದೆ.

ದಂಪತಿ ಮತ್ತು ಆದಿವಾಸಿ ಗಾಳಿಪಟದೊಂದಿಗೆ ಭಾರತೀಯ ಸಂಸ್ಕೃತಿಯನ್ನು ಡೀಪಿ ಉತ್ಸವದಲ್ಲಿ ಪ್ರತಿನಿಧಿಸಿತ್ತು. ಆ ಮೂಲಕ ಈ ಬಾರಿ ಭಾರತೀಯ ಬುಡಕಟ್ಟು ಜನಾಂಗದ ಬದುಕನ್ನು ಚಿತ್ರ ಕಲೆಯ ಮೂಲಕ ಪ್ರತಿಬಿಂಬಿಸಿದೆ.[ಮ್ಯಾನ್ ಹಂಟ್ ಇಂಟರ್ ನ್ಯಾಷನಲ್ ನಲ್ಲಿ ಕುಡ್ಲದ ಯುವಕ ರನ್ನರ್ ಅಪ್]

France kite festival

ಭಾರತೀಯ ಬುಡಕಟ್ಟು ಜನಾಂಗದ ಕಲೆಯ ಬಗ್ಗೆ 36 ಅಡಿ ಉದ್ದದ ಕಲಾಕೃತಿಯನ್ನು ದಿನೇಶ್ ಹೊಳ್ಳ ಸ್ಥಳದಲ್ಲಿಯೇ ರಚಿಸಿದ್ದಾರೆ. ಅಲ್ಲದೆ 'ರಾಗ ರೇಖಾ' ಎಂಬ ಕಲಾಪ್ರದರ್ಶನದಲ್ಲಿ 36 ಕೃತಿಗಳನ್ನು ಪ್ರದರ್ಶಿಸಲಾಗಿದೆ. ಪಶ್ಚಿಮ ಘಟ್ಟ ಸಂರಕ್ಷಣೆಯ ಬಗ್ಗೆ ಸಹಿ ಅಭಿಯಾನ ಮಾಡಿ, 28 ರಾಷ್ಟ್ರಗಳ ಸಹಿ ಸಂಗ್ರಹಿಸಿ ಡೀಪಿ ಪಟ್ಟಣದ ಮೇಯರ್ ಸೆಬಾಸ್ಟಿಯನ್ ಜುಮೆಲ್ ಮೂಲಕ ಯುನೆಸ್ಕೋಗೆ ಕಳುಹಿಸಲಾಗಿದೆ.[ಎತ್ತಿನಹೊಳೆ: ಪಶ್ಚಿಮ ಘಟ್ಟದ ರಕ್ಷಣೆಗಾಗಿ ಯುನೆಸ್ಕೋಗೆ ಆಗ್ರಹ]

France kite festival

ಉತ್ಸವದ ಪೋಸ್ಟರ್ ಅನ್ನು ಕಲಾವಿದ ದಿನೇಶ್ ಹೊಳ್ಳ ರಚಿಸಿದ್ದು, ಪ್ರೇಕ್ಷಕರು ಹೊಳ್ಳರ ಸಹಿ ಹಾಕಿದ ಪೋಸ್ಟರನ್ನೂ ಪಡೆದು ಸಂಭ್ರಮಿಸಿದರು. ಪೋಸ್ಟರ್ ರಚನೆ ಮತ್ತು 36 ಅಡಿ ಉದ್ದದ ಕಲಾಕೃತಿ ರಚನೆಗೆ ಮೆಚ್ಚುಗೆ ವ್ಯಕ್ತಪಡಿಸಿ , 'ಡೀಪಿ ಕ್ಯಾಪಿಟಲ್ ಆಫ್ ಕೈಟ್ಸ್' ಸಂಘಟಕ ಸ್ಯಾಂಡ್ರಿನ್ ಸಫರ್ಗ್ ಅವರು ದಿನೇಶ್ ಹೊಳ್ಳ ಅವರನ್ನು ವಿಶೇಷವಾಗಿ ಅಭಿನಂದಿಸಿ 'ಕಲಾ ಮಾನ್ಯತಾ' ಪ್ರಶಸ್ತಿ ನೀಡಿದ್ದಾರೆ ಎಂದು ಟೀಂ ಮಂಗಳೂರು ಪ್ರಕಟಣೆ ತಿಳಿಸಿದೆ.

English summary
Dinesh Holla from Mangalore participated in France Kite Festival. 28 countries representatives sent request to UNESCO to save western ghats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X