ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಗುಜರಾತಿಗಿಂತ ಮಂಗಳೂರು ಅಭಿವೃದ್ಧಿ ಕಂಡಿದೆ'

By Mahesh
|
Google Oneindia Kannada News

ಮಂಗಳೂರು, ಏ.15: ಬಿಜೆಪಿ ಅವರು ಗುಜರಾತ್ ಮಾದರಿ ಅಭಿವೃದ್ಧಿ ಕಾಣಲು ಮೋದಿ ಪ್ರಧಾನಿಯಾಗಬೇಕು ಎಂದು ಎಲ್ಲೆಡೆ ಹೇಳುತ್ತಿದ್ದಾರೆ. ಆದರೆ, ಗುಜರಾತಿಗೆ ಹೋಲಿಸಿದರೆ ನಮ್ಮ ಮಂಗಳೂರು ಸಾಕಷ್ಟು ಮುಂದಿದೆ ಎಂದು ಕೇಂದ್ರ ಸಚಿವ ಆಸ್ಕರ್ ಫರ್ನಾಂಡೀಸ್ ಅಭಿಪ್ರಾಯಪಟ್ಟಿದ್ದಾರೆ.

ದಕ್ಷಿಣ ಕನ್ನಡದ ಕಾಂಗ್ರೆಸ್ ಅಭ್ಯರ್ಥಿ ಬಿ.ಜನಾರ್ದನ ಪೂಜಾರಿ ಪರ ಮತಯಾಚನೆ ನಡೆಸಲು ಬಂದಿರುವ ಆಸ್ಕರ್ ಫರ್ನಾಂಡೀಸ್ ಅವರು ಮಂಗಳೂರಿನ ಮೂಲ ಸೌಕರ್ಯ ಅಭಿವೃದ್ಧಿ ಬಗ್ಗೆ ಮಾತನಾಡಿದರು.

ಮಂಗಳೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ, ವಿಮಾನ ನಿಲ್ದಾಣ, ಬಂದರು, ರೈಲ್ವೆ ಹಾಗೂ ಇನ್ನಿತರ ವಿಭಾಗಗಳಲ್ಲಿ ಅಭಿವೃದ್ಧಿ ಕಾಣಲು ಕಾಂಗ್ರೆಸ್ ಸರ್ಕಾರ ಕಾರಣ. ಪೂಜಾರಿ ಅವರನ್ನು ಗೆಲ್ಲಿಸಿದರೆ ಇದೆಲ್ಲವೂ ಮುಂದುವರೆಯಲಿದೆ. ಇತರೆ ಪಕ್ಷದವರು ಗೆದ್ದ ಮೇಲೆ ಕ್ಷೇತ್ರಕ್ಕೆ ಹಿಂತಿರುಗುವುದೇ ಅನುಮಾನ ಎಂದು ಆಸ್ಕರ್ ಫರ್ನಾಂಡೀಸ್ ಹೇಳಿದರು.

ಗೋವಾದ ಮಾಜಿ ಮುಖ್ಯಮಂತ್ರಿ ಲೂಜಿನ್ಹೊ ಫಲೆರೋ ಅವರ ಜತೆಗೂಡಿ ಕಾಂಗ್ರೆಸ್ ಕಚೇರಿಯಲ್ಲಿ ಡಾ.ಅಂಬೇಡ್ಕರ್ ಅವರ ಜಯಂತಿ ಆಚರಿಸಿದರು.ಫೆಲೆರೋ ಅವರು ಮಾತನಾಡಿ ಗುಜರಾತ್ ರಾಜ್ಯ ಶಿಕ್ಷಣ, ಆರೋಗ್ಯ, ಕೃಷಿ ಇನ್ನಿತರ ಕ್ಷೇತ್ರಗಳಲ್ಲಿ ಹಿಂದುಳಿದಿದೆ. ಕೇವಲ ಕೈಗಾರಿಕಾ ಅಭಿವೃದ್ಧಿಯನ್ನು ಅಭಿವೃದ್ಧಿ ಎನ್ನುವುದಾದರೆ ಕರ್ನಾಟಕವೇ ಹೆಚ್ಚಿನ ಅಭಿವೃದ್ಧಿ ಕಂಡಿದೆ ಎಂದರು.

ಜೆಆರ್ ಲೊಬೊ, ಮೊಯಿದ್ದೀನ್ ಬಾವಾ, ಐವಾನ್ ಡಿಸೋಜ, ಕೆ ತಾರಾನಾಥ್ ಶೆಟ್ಟಿ, ಕಾಂಗ್ರೆಸ್ ವಕ್ತಾರರಾದ ಇಬ್ರಾಹಿಂ ಕೊಡಿಯಾಳ್, ಜಿಲ್ಲಾ ಕಾಂಗ್ರೆಸ್ ಮಧ್ಯಂತರ ಅಧ್ಯಕ್ಷ ಸುರೇಶ್ ಬಳ್ಳಾಲ, ಸುನಿಲ್ ಖಾಂಡಕ್ ಇನ್ನಿತರ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು. [ಚಿತ್ರಗಳು: ಐಸಾಕ್ ರಿಚರ್ಡ್]

ಕೇಂದ್ರ ಸಚಿವ ಆಸ್ಕರ್ ಫರ್ನಾಂಡೀಸ್ ಅಭಿಪ್ರಾಯ

ಕೇಂದ್ರ ಸಚಿವ ಆಸ್ಕರ್ ಫರ್ನಾಂಡೀಸ್ ಅಭಿಪ್ರಾಯ

ಗುಜರಾತಿಗೆ ಹೋಲಿಸಿದರೆ ನಮ್ಮ ಮಂಗಳೂರು ಸಾಕಷ್ಟು ಮುಂದಿದೆ ಎಂದು ಕೇಂದ್ರ ಸಚಿವ ಆಸ್ಕರ್ ಫರ್ನಾಂಡೀಸ್ ಅಭಿಪ್ರಾಯಪಟ್ಟಿದ್ದಾರೆ.

ಮಂಗಳೂರಿನ ಮೂಲ ಸೌಕರ್ಯ ಅಭಿವೃದ್ಧಿ

ಮಂಗಳೂರಿನ ಮೂಲ ಸೌಕರ್ಯ ಅಭಿವೃದ್ಧಿ

ಮಂಗಳೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ, ವಿಮಾನ ನಿಲ್ದಾಣ, ಬಂದರು, ರೈಲ್ವೆ ಹಾಗೂ ಇನ್ನಿತರ ವಿಭಾಗಗಳಲ್ಲಿ ಅಭಿವೃದ್ಧಿ ಕಾಣಲು ಕಾಂಗ್ರೆಸ್ ಸರ್ಕಾರ ಕಾರಣ. ಪೂಜಾರಿ ಅವರನ್ನು ಗೆಲ್ಲಿಸಿದರೆ ಇದೆಲ್ಲವೂ ಮುಂದುವರೆಯಲಿದೆ.

ಡಾ.ಅಂಬೇಡ್ಕರ್ ಅವರ ಜಯಂತಿ

ಡಾ.ಅಂಬೇಡ್ಕರ್ ಅವರ ಜಯಂತಿ

ಗೋವಾದ ಮಾಜಿ ಮುಖ್ಯಮಂತ್ರಿ ಲೂಜಿನ್ಹೊ ಫಲೆರೋ ಅವರ ಜತೆಗೂಡಿ ಕಾಂಗ್ರೆಸ್ ಕಚೇರಿಯಲ್ಲಿ ಡಾ.ಅಂಬೇಡ್ಕರ್ ಅವರ ಜಯಂತಿ ಆಚರಿಸಿದರು.

ಕರ್ನಾಟಕವೇ ಹೆಚ್ಚಿನ ಅಭಿವೃದ್ಧಿ ಕಂಡಿದೆ

ಕರ್ನಾಟಕವೇ ಹೆಚ್ಚಿನ ಅಭಿವೃದ್ಧಿ ಕಂಡಿದೆ

ಫೆಲೆರೋ ಅವರು ಮಾತನಾಡಿ ಗುಜರಾತ್ ರಾಜ್ಯ ಶಿಕ್ಷಣ, ಆರೋಗ್ಯ, ಕೃಷಿ ಇನ್ನಿತರ ಕ್ಷೇತ್ರಗಳಲ್ಲಿ ಹಿಂದುಳಿದಿದೆ. ಕೇವಲ ಕೈಗಾರಿಕಾ ಅಭಿವೃದ್ಧಿಯನ್ನು ಅಭಿವೃದ್ಧಿ ಎನ್ನುವುದಾದರೆ ಕರ್ನಾಟಕವೇ ಹೆಚ್ಚಿನ ಅಭಿವೃದ್ಧಿ ಕಂಡಿದೆ ಎಂದರು.

English summary
Union Minister Oscar Fernandes said infrastructural development like National Highway, airport, ports, railways and other sectors have developed during the Congress regime and said Poojary if elected will further contribute to the progress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X