• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಮ ಮಂದಿರದ ವಾಟ್ಸಪ್ ಸ್ಟೇಟಸ್; ಮನೆಗೆ ನುಗ್ಗಿ ಹಲ್ಲೆ, ಜೀವ ಬೆದರಿಕೆ

|
Google Oneindia Kannada News

ಮಂಗಳೂರು, ಮಾರ್ಚ್ 04: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ವಿಚಾರದಲ್ಲಿ ಭಾರೀ ಚರ್ಚೆ ನಡೆದಿತ್ತು. ರಾಮ ಮಂದಿರದ ಬಗ್ಗೆ ವಾಟ್ಸಪ್ ಸ್ಟೇಟಸ್ ಹಾಕಿದ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿದ ಪ್ರಕರಣ ಮಂಗಳೂರಿನಲ್ಲಿ ನಡೆದಿದೆ.

ಉಪ್ಪಿನಂಗಡಿಯ 34ನೇ ನೆಕ್ಕಿಲಾಡಿ ಗ್ರಾಮದ ಆದರ್ಶ ನಗರದ ನಿವಾಸಿ ಮುಕುಂದ ಅವರ ಮನೆಗೆ ನುಗ್ಗಿದ ನಾಲ್ವರು ಹಲ್ಲೆ ನಡೆಸಿದ್ದಾರೆ ಮತ್ತು ಜೀವ ಬೆದರಿಕೆ ಹಾಕಿದ್ದಾರೆ. ಪೊಲೀಸರು ಈ ಪ್ರಕರಣದ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

 ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ ಮುಕ್ತಾಯ: ಒಟ್ಟು ಸಂಗ್ರಹವಾಗಿದ್ದು ಎಷ್ಟು? ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ ಮುಕ್ತಾಯ: ಒಟ್ಟು ಸಂಗ್ರಹವಾಗಿದ್ದು ಎಷ್ಟು?

ಉಬೇದ್ ಮತ್ತು ಆತನ ಸಹಚರರ ತಂಡ ಮಂಗಳವಾರ ರಾತ್ರಿ ಮುಕುಂದ ಅವರ ಮನೆಗೆ ನುಗ್ಗಿದೆ. ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದು, ಮುಕುಂದ ಅವರ ಮೇಲೆ ಹಲ್ಲೆ ಮಾಡಿದೆ. ಮುಕುಂದ ರಾಮ ಮಂದಿರದ ಬಗ್ಗೆ ಸ್ಟೇಟಸ್ ಹಾಕಿದ್ದನ್ನು ತಂಡ ಆಕ್ಷೇಪಿಸಿದೆ.

ಸಿದ್ದರಾಮನಹುಂಡಿಯ ರಾಮ ಮಂದಿರದ ವಿಶೇಷತೆಗಳು! ಸಿದ್ದರಾಮನಹುಂಡಿಯ ರಾಮ ಮಂದಿರದ ವಿಶೇಷತೆಗಳು!

ತಂಡ ಮನೆಗೆ ನುಗ್ಗಿ ಗಲಾಟೆ ಮಾಡುತ್ತಿರುವುದು ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗುಂಪನ್ನು ಚದುರಿಸಿದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

ರಾಮ ಮಂದಿರ ನಿರ್ಮಾಣ; ದೇಣಿಗೆ ನೀಡುವವರಿಗೆ ಟ್ರಸ್ಟ್ ಮನವಿ ರಾಮ ಮಂದಿರ ನಿರ್ಮಾಣ; ದೇಣಿಗೆ ನೀಡುವವರಿಗೆ ಟ್ರಸ್ಟ್ ಮನವಿ

ದುಷ್ಕರ್ಮಿಗಳ ಹಲ್ಲೆಯಿಂದ ಮುಕುಂದ ಗಾಯಗೊಂಡಿದ್ದಾರೆ. ಆಸ್ಪತ್ರೆಗೆ ದಾಖಲಾಗಿರುವ ಅವರು ಪೊಲೀಸರಿಗೆ ದೂರು ಸಹ ನೀಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉಪ್ಪಿನಂಗಡಿ ಎಸ್‌ಐ ಈರಯ್ಯ ಡಿ. ಎನ್. ತಿಳಿಸಿದ್ದಾರೆ.

ಜುಬೇದ್ ಮತ್ತು ಆತನ ಸಹಚರರು ಮನೆಗೆ ಗೇಟ್‌ ಹಾನಿಗೊಳಿಸುವ ಮತ್ತು ಮನೆಯವರನ್ನು ನಿಂದಿಸುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ.

English summary
Gang enters house, attack and life threatened family for whatsapp status about Ayodhya Ram mandir in uppinangady, Mangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X