ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ವಿದ್ಯಾರ್ಥಿ ಎಬೋಲಾಗೆ ಬಲಿ! ಸುಳ್ ಸುದ್ದಿ

By Mahesh
|
Google Oneindia Kannada News

ಮಂಗಳೂರು, ಆ.19: ಕರ್ನಾಟಕಕ್ಕೆ ಮಾರಕ ವೈರಾಣು ಎಬೋಲಾ ಕಾಲಿಟ್ಟಿದೆ. ಸುರತ್ಕಲ್ ನ ಎನ್ ಐಟಿಯ ವಿದ್ಯಾರ್ಥಿ ಮೃತ ಪಟ್ಟಿದ್ದಾನೆ ಎಂಬ ಸುದ್ದಿ ಸಾಮಾಜಿಕ ಜಾಲ ತಾಣಗಳಲ್ಲಿ ಕಳೆದೆರಡು ದಿನಗಳಿಂದ ಹರಿದಾಡುತ್ತಿದೆ. ಇದೊಂದು ಡೋಂಗಿ ಸುದ್ದಿ ಸುಮ್ಮನೆ ಯಾರೋ ಸುದ್ದಿ ಹಬ್ಬಿಸಿ ಮಜಾ ತೆಗೆದುಕೊಂಡಿದ್ದಾರೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.

ಕರ್ನಾಟಕಕ್ಕೂ ಎಬೋಲಾ ರೋಗ ಕಾಲಿಟ್ಟಿಲ್ಲ ಎಂದು ಈ ಕ್ಷಣಕ್ಕೆ ಅಧಿಕೃತವಾಗಿ ಘೋಷಿಸಬಹುದು. ಸುರತ್ಕಲ್ ನ ಎನ್‍ಐಟಿ ವಿದ್ಯಾರ್ಥಿ ಶ್ರೀಜಿತ್ ಈ ರೋಗಕ್ಕೆ ಬಲಿಯಾಗಿದ್ದಾರೆ. ಎಬೋಲಾ ವೈರಸ್ ಬಗ್ಗೆ ಎಲ್ಲರೂ ಎಚ್ಚರ ವಹಿಸಿ ಎಂಬ ವಾಟ್ಸಪ್ ಸಂದೇಶ ಸುಳ್ಳು ಎಂಬುದನ್ನು ಎಲ್ಲೆಡೆ ಹಬ್ಬಿಸಿ. ಈ ಸುದ್ದಿ ಮಂಗಳೂರಿನಲ್ಲಷ್ಟೇ ಅಲ್ಲ ಬೆಂಗಳೂರು ಸೇರಿದಂತೆ ಹಲವೆಡೆ ಆತಂಕ ಸೃಷ್ಟಿಸಿತ್ತು.[ವೈರಾಣು ಭೀತಿ 'ಸೆಕ್ಸ್'ಗೂ ಕೊಕ್ಕೆ]

ಈ ಬಗ್ಗೆ ಪ್ರತಿಕ್ರಿಯಿಸಿರುವ ತಾಂತ್ರಿಕ ವಿದ್ಯಾರ್ಥಿ ಧೃವಚಂದ್ ಈ ಬಗ್ಗೆ ನನಗೆ ಮೊದಲು ಭಾನುವಾರ ನಾಲ್ಕು ಗಂಟೆ ವೇಳೆಗೆ ಸಂದೇಶ ಬಂದಿತು. ಕೊನೆಗೆ ಈ ಬಗ್ಗೆ ವಿಚಾರಣೆ ನಡೆಸಿದಾಗ ಈ ಸಂದೇಶ ಸಂಪೂರ್ಣ ಹುಸಿ ಎಂಬುದು ಗೊತ್ತಾಯಿತು ಎಂದು ಹೇಳಿದ್ದಾನೆ. ಕಾಲೇಜು ಮಂಡಳಿ, ವಿದ್ಯಾರ್ಥಿಗಳ ಪ್ರತಿಕ್ರಿಯೆ ಹೀಗಿದೆ

ವಾಟ್ಸಪ್ ಮೂಲಕ ಹಬ್ಬಿದ ಸುದ್ದಿ ಹೀಗಿತ್ತು

ವಾಟ್ಸಪ್ ಮೂಲಕ ಹಬ್ಬಿದ ಸುದ್ದಿ ಹೀಗಿತ್ತು

ವಾಟ್ಸಪ್ ಮೂಲಕ ಕಳೆದ ಎರಡು ದಿನಗಳ ಹಿಂದೆ ಹಬ್ಬಿದ ಸುದ್ದಿ ಹೀಗಿತ್ತು

"Ebola reached Karnataka unfortunately!! Infected poor Sreejith-M Tech, NIT Surathkal, expired today. Please take precautions against this virus and spread the awareness!!. Friends plz eat Tulsi leaves to safeguard yourself from this virus elobla becz this virus directly effects the human immune system. Tulsi leaves good for the immune system so this is a precaution to save u from Ebola virus...." ಎಂಬ ಸಂದೇಶ ಎಲ್ಲರ ಹುಬ್ಬೇರಿಸಿತ್ತು.

ಅಸಲಿಗೆ ವಿದ್ಯಾರ್ಥಿ ಶ್ರೀಜಿತ್ ಸತ್ತಿದ್ದು ನಿಜ

ಅಸಲಿಗೆ ವಿದ್ಯಾರ್ಥಿ ಶ್ರೀಜಿತ್ ಸತ್ತಿದ್ದು ನಿಜ

ಉತ್ತಮ ಬಾಡ್ಮಿಂಟನ್ ಆಟಗಾರನಾಗಿದ್ದ ಶ್ರೀಜಿತ್ ಎಂಬ ವಿದ್ಯಾರ್ಥಿ ಕಳೆದ ಜುಲೈ 21ರಂದು ಶ್ವಾಸಕೋಶ ಸೋಂಕಿನಿಂದ ನಿಧನನಾಗಿದ್ದ. ಆತನ ಸಾವನ್ನೇ ದುರ್ಬಳಕೆ ಮಾಡಿಕೊಂಡ ದುಷ್ಕರ್ಮಿಗಳು ಶ್ರೀಜಿತ್ ಸಾವನ್ನಪ್ಪಿದ್ದು ಎಬೋಲಾದಿಂದ ಎಂದು ಹುಸಿ ಸಂದೇಶ ಹರಡಿದ್ದಾರೆ. ಇದೆಲ್ಲವೂ ಸುಳ್ಳು ಸುದ್ದಿ ಎಂದು ಸುರತ್ಕಲ್ ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಕರ್ನಾಟಕ)ಯ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗದ ಡೀನ್, ಹಿರಿಯ ಪ್ರೊಫೆಸರ್ ಉದಯ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಹುಸಿ ಸುದ್ದಿ ಬಗ್ಗೆ ವಿದ್ಯಾರ್ಥಿ ನಾಯಕರಿಂದ ಕರೆ

ಹುಸಿ ಸುದ್ದಿ ಬಗ್ಗೆ ವಿದ್ಯಾರ್ಥಿ ನಾಯಕರಿಂದ ಕರೆ

ಕರ್ನಾಟಕಕ್ಕೆ ಎಬೋಲಾ ಕಾಲಿಟ್ಟಿದೆ ಎಂಬ ಹುಸಿ ಸಂದೇಶದ ಮೂಲಕ ಜನರಲ್ಲಿ ಆತಂಕ ಮೂಡಿಸಿರುವ ಕಿಡಿಗೇಡಿಗಳ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶುಭಂ ಅಗರ್ವಾಲ್, ಹುಸಿ ಸಂದೇಶಗಳ ಬಗ್ಗೆ ಜನರಲ್ಲಿ ಆತಂಕ ಹುಟ್ಟುಹಾಕುತ್ತಿರುವ ವ್ಯಕ್ತಿಗಳ ಬಗ್ಗೆ ಸಾರ್ವಜನಿಕರು ಎಚ್ಚರದಿಂದಿರಬೇಕು. ಈ ಬಗ್ಗೆ ಯಾರೂ ಅನಗತ್ಯ ಆತಂಕಕ್ಕೆ ಒಳಗಾಗಬಾರದೆಂದು ಮನವಿ ಮಾಡಿದ್ದಾರೆ.

ಜಿಲ್ಲಾ ಆರೋಗ್ಯ ಅಧೀಕ್ಷಕರ ಸ್ಪಷ್ಟನೆ

ಜಿಲ್ಲಾ ಆರೋಗ್ಯ ಅಧೀಕ್ಷಕರ ಸ್ಪಷ್ಟನೆ

ಜಿಲ್ಲಾ ಆರೋಗ್ಯ ಅಧೀಕ್ಷಕ ಎಚ್.ಎಸ್.ಶಿವಕುಮಾರ್ ಇದುವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಎಬೋಲಾ ಪ್ರಕರಣ ವರದಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಒಂದು ವೇಳೆ ಎಬೋಲಾ ರೋಗಿಗಳು ಪತ್ತೆಯಾದರೆ ಅವರಿಗೆ ಚಿಕಿತ್ಸೆ ಒದಗಿಸಲು ವೆನ್ ಲಾಕ್ ಆಸ್ಪತ್ರೆಯಲ್ಲಿ 10 ಹಾಸಿಗೆಗಳ ವಿಶೇಷ ವಾರ್ಡ್ ಸ್ಥಾಪಿಸಲಾಗಿದೆ ಎಂದಿದ್ದಾರೆ. [ವಿಮಾನ ನಿಲ್ದಾಣದಲ್ಲಿ ಎಬೋಲಾ ತಪಾಸಣೆ]
ಎಬೋಲಾ ಸೋಂಕು ಹರಡುವುದು ಹೇಗೆ?

ಎಬೋಲಾ ಸೋಂಕು ಹರಡುವುದು ಹೇಗೆ?

ಎಬೋಲಾ ವೈರಸ್ ಗಾಳಿ ಅಥವಾ ನೀರಿನ ಮೂಲಕ ಸಾಂಕ್ರಾಮಿಕವಾಗಿ ಹರಡುವುದಿಲ್ಲ. ರೋಗ ಪೀಡಿತ ರಕ್ತ, ಜಿಹ್ವಾರಸ, ಮೂತ್ರ ಮುಂತಾದವುಗಳ ಸೋಕುವಿಕೆಯಿಂದ ಹರಡುತ್ತದೆ.

ಮಲೇರಿಯಾ, ಕಾಲರ, ವೈರಲ್ ಫೀವರ್ ಮಾದರಿಯಲ್ಲೇ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಜ್ವರ, ಗಂಟಲು ನೋವು, ಕೈಕಾಲು ನೋವು, ತಲೆನೋವಿನೊಂದಿಗೆ ಆರಂಭವಾಗಿ ಆಮಶಂಕೆ, ಕರಳು ಬೇನೆ, ಕಿಡ್ನಿ ವೈಫಲ್ಯ ಉಂಟಾಗಲಿದೆ. ಕೊನೆ ಕೊನೆಗೆ ರಕ್ತ ಸ್ರಾವ ಉಂಟಾಗಿ ರೋಗಿ ಸಾವನ್ನಪ್ಪುತ್ತಾನೆ.[24/7 ಭಾರತ ಸಹಾಯವಾಣಿ]

English summary
A rumour which originated on August 17, claiming that the death of a student of National Institute of Technology Karnataka (NITK) Suratkal about three weeks ago had been caused by Ebola virus, had spread like wildfire.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X