• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಗಳೂರು ದಸರಾ ಉತ್ಸವಕ್ಕೆ ಅದ್ಧೂರಿ ಚಾಲನೆ

|

ಮಂಗಳೂರು, ಅಕ್ಟೋಬರ್.10: ಹತ್ತು ದಿನಗಳ ಕಾಲ ನಡೆಯುವ ಮಂಗಳೂರು ದಸರಾ ಉತ್ಸವಕ್ಕೆ ಇಂದು ಬುಧವಾರ (ಅ.10) ಅದ್ಧೂರಿ ಚಾಲನೆ ದೊರೆತಿದೆ.

ಸಂಭ್ರಮದ ದಸರಾ ಮಹೋತ್ಸವಕ್ಕೆ ಸಜ್ಜಾದ ಕಡಲತಡಿಯ ನಗರ ಮಂಗಳೂರು

ಶ್ರೀ ಕ್ಷೇತ್ರ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ದಸರಾ ಉತ್ಸವ ನಡೆಯುತ್ತಿದ್ದು, ಕರ್ಣಾಟಕ ಬ್ಯಾಂಕ್ ನ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಮಂಗಳೂರು ದಸರಾ ಉತ್ಸವ ಉದ್ಘಾಟಿಸಿದರು.

ಈ ಬಾರಿಯ ಮಂಗಳೂರು ದಸರಾ ಉದ್ಘಾಟಿಸಲಿದ್ದಾರೆ ಸಿಎಂ ಕುಮಾರಸ್ವಾಮಿ

ಉತ್ಸವದಲ್ಲಿ ಗಣಪತಿ, ಶಾರದಾ , ಆದಿಶಕ್ತಿ , ಮಹಾಕಾಳಿ , ಮಹಾಗೌರಿ , ಸಿದ್ಧಾತ್ರಿ ಸೇರಿದಂತೆ ನವದುರ್ಗೆಯರ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗಿದೆ.

ಮಂಗಳೂರಿನ ದಸರಾ ಅಂದರೆ ಇಲ್ಲಿನ ಬೆಳಕಿನ ಚಿತ್ತಾರದ ಅಂದ ಚೆಂದವನ್ನು ಕಣ್ತುಂಬಿಕೊಳ್ಳುವುದೇ ಆನಂದ. ಅದರಲ್ಲೂ ನಗರದ ಎಲ್ಲಾ ದೇವಿ ದೇವಾಲಯ ಸುಣ್ಣ ಬಣ್ಣ ಬಳಿದು ವಿದ್ಯುತ್ ಅಲಂಕಾರಗಳಿಂದ ಅಲಂಕೃತಗೊಂಡಿದೆ.

ಮೈಸೂರು ದಸರಾ ಉತ್ಸವವನ್ನು ಮೊಬೈಲ್‌ನಿಂದಲೇ ಲೈವ್‌ ಆಗಿ ನೋಡಿ

ಪ್ರಸಿದ್ಧ ಶ್ರೀ ಮಂಗಳಾದೇವಿ ದೇವಸ್ಥಾನ, ಕಟೀಲು ದುರ್ಗಾಪರಮೇಶ್ವರಿ ದೇವಳ, ಸುಂದರ ಕಟ್ಟೆ ಅಂಬಿಕಾ ಅನ್ನಪೂರ್ಣೇಶ್ವರಿ ದೇವಾಲಯ , ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನ, ಕೊಡಿಯಾಲ್ ಬೈಲ್ ಭಗವತಿ ದೇವಸ್ಥಾನ , ಉರ್ವ ಮಾರಿಯಮ್ಮ ದೇವಸ್ಥಾನ, ಬೋಳೂರು ಮಾರಿಯಮ್ಮ ದೇವಸ್ಥಾನ, ಕುರುಅಂಬಾ ರಾಜರಾಜೇಶ್ವರಿ ದೇವಸ್ಥಾನ ನವರಾತ್ರಿ ಹಬ್ಬದ ಸಡಗರಕ್ಕೆ ಶೃಂಗಾರಗೊಂಡಿವೆ.

English summary
Mangalore Dasara Festival has got a grand start today (October 10). Navadurga statues is installed at the festival.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X