ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪುತ್ತೂರು; ಸರ್ಕಾರಿ ಬಸ್‌ನಲ್ಲಿ ಕೋಳಿಗೂ 50 ರೂ. ಟಿಕೆಟ್!

|
Google Oneindia Kannada News

ಮಂಗಳೂರು, ಫೆಬ್ರವರಿ 11: ಅಗೇಲು ಸೇವೆ ಸಲ್ಲಿಸಲು ಕೆಎಸ್ಆರ್‌ಟಿಸಿ ಬಸ್‌ನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರು 50 ರೂ. ನೀಡಿ ಕೋಳಿಗೂ ಟಿಕೆಟ್ ಪಡೆದುಕೊಂಡಿದ್ದಾರೆ. ಪ್ರಾಣಿಗಳಿಗಳ ಪ್ರಯಾಣಕ್ಕೆ ಹಣ ನೀಡಬೇಕು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ವ್ಯಕ್ತಿ ಚೀಲದಲ್ಲಿ ಕೋಳಿ ಹಿಡಿದುಕೊಂಡಿದ್ದರು. ಇದನ್ನು ಗಮನಿಸಿದ ಕಂಡಕ್ಟರ್ 50 ರೂ. ಪಡೆದು ಟಕೆಟ್ ನೀಡಿದ್ದಾರೆ. ಕೆಎಸ್ಆರ್‌ಟಿಸಿಯ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಭಾಗದಲ್ಲಿ ಈ ಘಟನೆ ನಡೆದಿದೆ.

ಕೋಳಿ, ಕುರಿ, ಬಿಯರ್, ಈರುಳ್ಳಿ ಬಹುಮಾನ; ಕ್ರಿಕೆಟ್ ಪಂದ್ಯ ರದ್ದು! ಕೋಳಿ, ಕುರಿ, ಬಿಯರ್, ಈರುಳ್ಳಿ ಬಹುಮಾನ; ಕ್ರಿಕೆಟ್ ಪಂದ್ಯ ರದ್ದು!

ಬುಧವಾರ ಪುತ್ತೂರಿನಲ್ಲಿ ಸಾರಿಗೆ ಅದಾಲತ್ ನಡೆಯಿತು. ಆಗ ಪುತ್ತೂರು ಶಾಸಕ ಸಂಜೀವ ಮಠಂದೂರು ಈ ಕುರಿತು ವಿಷಯವನ್ನು ಪ್ರಸ್ತಾಪಿಸಿ ಎಲ್ಲರಿಗೂ ಮಾಹಿತಿ ನೀಡಿದರು.

ಗಂಡನ ಕೊಂದು ಆತ್ಮಹತ್ಯೆ ಬಣ್ಣ ಕಟ್ಟಿದ್ದ ಹೆಂಡತಿ, ಆಕೆಯ ಪ್ರಿಯಕರನಿಗೆ ಬಿತ್ತು ಕೋಳಗಂಡನ ಕೊಂದು ಆತ್ಮಹತ್ಯೆ ಬಣ್ಣ ಕಟ್ಟಿದ್ದ ಹೆಂಡತಿ, ಆಕೆಯ ಪ್ರಿಯಕರನಿಗೆ ಬಿತ್ತು ಕೋಳ

KSRTC bus

ಅದಾಲತ್‌ನಲ್ಲಿ ಪುತ್ತೂರು ವಿಭಾಗೀಯ ಸಂಚಾಲನಾಧಿಕಾರಿ ಮುರಳೀಧರ್ ಸಹ ಪಾಲ್ಗೊಂಡಿದ್ದರು. "ಸರ್ಕಾರದ ಸುತ್ತೋಲೆಯಂತೆ ಬಸ್‌ನಲ್ಲಿ ಪ್ರಯಾಣಿಕರನ್ನು ಹೊರತುಪಡಿಸಿ ಪ್ರಾಣಿ, ಪಕ್ಷಿ ಒಯ್ಯುವಂತಿಲ್ಲ" ಎಂದು ಹೇಳಿದರು.

ಕೋಳಿ ಜೂಜು; ಹುಂಜಗಳನ್ನು ಜೈಲಿಗೆ ಹಾಕಿದ ಪೊಲೀಸರು!ಕೋಳಿ ಜೂಜು; ಹುಂಜಗಳನ್ನು ಜೈಲಿಗೆ ಹಾಕಿದ ಪೊಲೀಸರು!

"ಕೋಳಿ ಆದರೂ ಸರಿಯೇ ಒಂದು ಕೋಳಿಗೆ ಒಬ್ಬ ಪ್ರಯಾಣಿಕನಿಗೆ ಇರುವಷ್ಟು ಟಿಕೆಟ್ ದರ ನೀಡಬೇಕು. 50 ರೂ. ಟಿಕೆಟ್ ನೀಡಿದ್ದಾರೆ ಎಂದರೆ 3 ಕೋಳಿ ಇರಬೇಕು. ಸರ್ಕಾರದ ಆದೇಶವೇ ಹಾಗಿದೆ" ಎಂದು ಸ್ಪಷ್ಟಪಡಿಸಿದರು.

"ಶಾಸಕರ ಪತ್ರದ ಮೂಲಕ ಕೋಳಿ ವಿಚಾರದಲ್ಲಿ ವಿನಾಯಿತಿ ನೀಡಬೇಕು ಎಂದು ಸರ್ಕಾರಕ್ಕೆ ಪತ್ರ ಬರೆಯಬಹುದು. ನಾವು ಸುತ್ತೋಲೆಯನ್ನು ಪಾಲನೆ ಮಾಡುತ್ತಿದ್ದೇವೆ" ಎಂದು ಮುರಳೀಧರ್ ಹೇಳಿದರು.

English summary
KSRTC bus conductor in Puttur Dakshina Kannada charged 50 Rs for the hens to travel in bus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X