• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಗಳೂರು; ತಿಥಿ ಮಾಡುವಾಗ ಜೀವಂತವಾಗಿ ಪ್ರತ್ಯಕ್ಷವಾದ ವ್ಯಕ್ತಿ!

|

ಮಂಗಳೂರು, ಫೆಬ್ರವರಿ 17; ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಕುಟುಂಬ ಸದಸ್ಯರು ತಿಥಿ ಮಾಡುವಾಗ ಆತ ಜೀವಂತವಾಗಿ ಪ್ರತ್ಯಕ್ಷವಾದ ಘಟನೆ ನಡೆದಿದೆ. ವೈಕುಂಠ ಸಮಾರಾಧನೆ ದಿನವೇ ವ್ಯಕ್ತಿ ಮನೆಗೆ ವಾಪಸ್ ಆಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಗರ್ಡಾಡಿ ಗ್ರಾಮದ ಶ್ರೀನಿವಾಸ್ ತಿಥಿ ಮಾಡುವ ದಿನವೇ ಪ್ರತ್ಯಕ್ಷರಾಗಿದ್ದಾರೆ. ಜನವರಿ 26ರಂದು ಶ್ರೀನಿವಾಸ್ ನಾಪತ್ತೆಯಾಗಿದ್ದರು. ಕುಟುಂಬದವರು ಎಷ್ಟು ಹುಡುಕಿದರೂ ಯಾವುದೇ ಸುಳಿವು ಪತ್ತೆಯಾಗಿರಲಿಲ್ಲ.

ಚಿನ್ನದ ನಾಲಗೆಯಿದ್ದ ಮಮ್ಮಿ ಪತ್ತೆ; ಇದರ ಹಿಂದಿದೆ ಸತ್ತ ಮೇಲೂ ಮಾತಾಡುವ ಕಥೆ

ಫೆಬ್ರವರಿ 3ರಂದು ಓಡಿಲ್ನಾಳ ಗ್ರಾಮದ ಕಲ್ಲುಂಜಕೆರೆಯಲ್ಲಿ ಅನಾಥ ಶವ ಪತ್ತೆಯಾಗಿತ್ತು. ಶವ ಸಂಪೂರ್ಣ ಕೊಳೆತು ಹೋಗಿದ್ದರಿಂದ ಗುರುತು ಸಹ ಸಿಕ್ಕಿರಲಿಲ್ಲ. ಅದು ಶ್ರೀನಿವಾಸ್ ಶವ ಎಂದು ಕುಟುಂಬದವರು ಅಂತ್ಯ ಸಂಸ್ಕಾರ ಮಾಡಿದ್ದರು.

ಮನಕಲಕುವ ವಿಡಿಯೋ; ಸತ್ತ ಕಂದನ ಏಳಿಸಲು ಶ್ವಾನದ ಮೂಕ ರೋದನೆ

Mangaluru news

ಅಂತ್ಯ ಸಂಸ್ಕಾರದ ಕಾರ್ಯಗಳೆಲ್ಲಾ ಮುಗಿದು ವೈಕುಂಠ ಸಮಾರಾಧನೆ ಏರ್ಪಡಿಸಿದ್ದರು. ಅಂದೇ ಶ್ರೀನಿವಾಸ್ ಮನೆಗೆ ವಾಪಸ್ ಆಗಿದ್ದಾರೆ. ಈಗ ಅಂತ್ಯ ಸಂಸ್ಕಾರ ಮಾಡಿದ ಶವ ಯಾರದ್ದು? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಮಧ್ಯಪ್ರದೇಶ: ಕಾಲುವೆಗೆ ಬಸ್ ಉರುಳಿ 32 ಮಂದಿ ಪ್ರಯಾಣಿಕರ ಸಾವು

ಜ್ಯೋತಿಷಿ ಹೇಳಿದ್ದರು; ಶ್ರೀನಿವಾಸ್ ನಾಪತ್ತೆಯಾದಾಗ ಕುಟುಂಬದವರು ಜ್ಯೋತಿಷಿಯೊಬ್ಬರನ್ನು ಭೇಟಿ ಮಾಡಿದ್ದರು. ಆಗ ಅವರು ಶ್ರೀನಿವಾಸ್ ಸತ್ತಿಲ್ಲ, ವಾಪಸ್ ಬರುತ್ತಾರೆ ಎಂದು ಹೇಳಿದ್ದರು.

ಆದರೆ, ಜ್ಯೋತಿಷಿ ಹೇಳಿ ಎಷ್ಟು ದಿನ ಕಳೆದರೂ ಶ್ರೀನಿವಾಸ್ ಮನೆಗೆ ವಾಪಸ್ ಆಗಿರಲಿಲ್ಲ. ಆಗ ಸಿಕ್ಕ ಅನಾಥ ಶವದ ಅಂತ್ಯ ಸಂಸ್ಕಾರ ಮಾಡಲಾಗಿತ್ತು.

English summary
Srinivas a man form Belthangady, Dakshina Kannada found alive during his tithi rituals. Srinivas missing on January 26 family members performing tithi he is dead.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X