• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಗಳೂರು; ಮದುವೆ ದಿನ ಡಿಜೆ ಪಾರ್ಟಿ, ವರ ಪೊಲೀಸ್ ವಶಕ್ಕೆ!

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಮೇ 11; ಮದುವೆ ದಿನ ಡಿಜೆ ಪಾರ್ಟಿ ಮಾಡಿ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ ಕಾರಣಕ್ಕಾಗಿ ಮದುಮಗನ ಮೇಲೆ ಎಫ್‌ಐಆರ್ ದಾಖಲಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮಂಗಳೂರಿನ ಅಡ್ಯಾರು ನಿವಾಸಿ ದಾಮೋದರ್ ಶೆಟ್ಟಿಗಾರ್ ಪುತ್ರ ರಂಜಿತ್ ಮೇಲೆ ಎಫ್‌ಐಆರ್ ದಾಖಲಾಗಿದೆ. ರಂಜಿತ್ ಮದುವೆಯು ಮೇ 9ರಂದು ಬಂಟ್ವಾಳದ ಸಿದ್ಧಕಟ್ಟೆಯಲ್ಲಿ ನಡೆದಿದೆ. ಮನೆಯವರು 25 ಜನರು ಪಾಲ್ಗೊಳ್ಳಲು ಅವಕಾಶವನ್ನು ಕೋರಿ ಅಡ್ಯಾರು ಪಂಚಾಯತ್‌ನಿಂದ ಅನುಮತಿಯನ್ನು ಪಡೆದುಕೊಂಡಿದ್ದರು.

ಮೇ 10ರಿಂದ ಲಾಕ್ ಡೌನ್; ಮಾರ್ಗಸೂಚಿಯಲ್ಲಿ ಕೆಲವು ಬದಲಾವಣೆಮೇ 10ರಿಂದ ಲಾಕ್ ಡೌನ್; ಮಾರ್ಗಸೂಚಿಯಲ್ಲಿ ಕೆಲವು ಬದಲಾವಣೆ

ಮದುವೆ ಮುಗಿಸಿ ಮನೆಗೆ ಬಂದಿದ್ದರು. ಆದರೆ ಅದೇ ದಿನ ರಾತ್ರಿ ಡಿಜೆ ಹಾಕಿ ಮದುವೆ ಮನೆಯಲ್ಲಿ ಪಾರ್ಟಿ ಮಾಡಿದ್ದು, ಡ್ಯಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿ ಡಾ‌. ರಾಜೇಂದ್ರ ಕೆ.ವಿ ಸ್ಥಳೀಯ ಪಂಚಾಯತ್ ಅಧಿಕಾರಿ ಬಳಿ ವರದಿ ಕೇಳಿದ್ದು, ಇದೀಗ ಪಂಚಾಯತ್ ಪಿಡಿಒ ಕೃಷ್ಣ ನಾಯ್ಕ್ ಮದುಮಗನ ವಿರುದ್ಧ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಾರವಾರ: ಮದುವೆ ಹಿಂದಿನ ದಿನವೇ ಕೊರೊನಾ ಸೋಂಕಿಗೆ ವರ ಬಲಿ!ಕಾರವಾರ: ಮದುವೆ ಹಿಂದಿನ ದಿನವೇ ಕೊರೊನಾ ಸೋಂಕಿಗೆ ವರ ಬಲಿ!

ಕೊರೊನಾ ನಿಯಮವನ್ನು ಉಲ್ಲಂಘಿಸಿ, ಕೊರೊನಾ ಹರಡುವಿಕೆಗೆ ಕಾರಣರಾಗಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ಜೊತೆಗೆ ವೈರಲ್ ಆದ ವಿಡಿಯೋವನ್ನು ದೂರಿನ ಜೊತೆ ದಾಖಲಿಸಿದ್ದಾರೆ.

ಕೋವಿಡ್ ಕರ್ಪ್ಯೂ; ಉಡುಪಿಯಲ್ಲಿ 354 ಸರಳ ಮದುವೆ! ಕೋವಿಡ್ ಕರ್ಪ್ಯೂ; ಉಡುಪಿಯಲ್ಲಿ 354 ಸರಳ ಮದುವೆ!

ಪಿಡಿಒ ದೂರಿನಂತೆ ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ಮದುಮಗನನ್ನು ವಶಕ್ಕೆ ಪಡೆದಿದ್ದು ವಿಚಾರಣೆ ಮಾಡಿದ್ದಾರೆ. ಕೊರೊನಾ ಸೋಂಕು ಹರಡಲು ಕಾರಣರಾಗಿದ್ದಾರೆ ಎಂಬ ಗಂಭೀರ ಪ್ರಕರಣವೂ ದಾಖಲಾಗಿದೆ.

ಸರ್ಕಾರದ ಕಠಿಣ ನಿಯಮದ ಕಾರಣದಿಂದಾಗಿ ಡಿಜೆ ಪಾರ್ಟಿ ಮಾಡಿದ ವರ ಈಗ ಮದುವೆಯಾದ ಎರಡೇ ದಿನದಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರುವಂತೆ ಆಗಿದೆ.

English summary
Mangaluru Rural police field FIR and detained man after his marriage of two days for organizing DJ party and not followed COVID norms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X