ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಲಯಾಳಂ ಕಡ್ಡಾಯ, ಕಾಸರಗೋಡು ಕನ್ನಡಿಗರಿಂದ ಮೇ 23ರಂದು ಪ್ರತಿಭಟನೆ

ಮೇ 23ರಂದು ಕಾಸರಗೋಡಿನ ಜಿಲ್ಲಾಧಿಕಾರಿ ಕಚೇರಿಗೆ ಎಲ್ಲಾ ಕನ್ನಡ ಪರ ಸಂಘಟನೆಗಳು ಮುತ್ತಿಗೆ ಹಾಕಲು ನಿರ್ಧರಿಸಿವೆ. ಇನ್ನು ಇವತ್ತು #KasaragoduKannadaUlisi ಹ್ಯಾಷ್ ಟ್ಯಾಗ್ ಮೂಲಕ ಪ್ರತಿಭಟನಾ ಸಂದೇಶ ಸಾರಲಾಯಿತು.

By Sachhidananda Acharya
|
Google Oneindia Kannada News

ಕಾಸರಗೋಡು, ಮೇ 21: ಕೇರಳ ಸರಕಾರ 10ನೇ ತರಗತಿವರೆಗೆ ಮಲಯಾಳಂ ಭಾಷೆಯನ್ನು ಕಡ್ಡಾಯಗೊಳಿಸಿ ಸುಗ್ರೀವಾಜ್ಞೆ ಜಾರಿಗೆ ತಂದಿದೆ. ಇದನ್ನು ವಿರೋಧಿಸಿ ಕಾಸರಗೋಡಿನ ಕನ್ನಡ ಪರ ಸಂಘಟನೆಗಳು ಮೇ 23ರಂದು ಪ್ರತಿಭಟನೆ ನಡೆಸಲಿವೆ.

ಕನ್ನಡ ಶಾಲೆಗಳು ಹೆಚ್ಚಾಗಿರುವ ಕಾಸರಗೋಡಿನಲ್ಲಿ ಮಲಯಾಳಂ ಭಾಷೆ ಕಡ್ಡಾಯದಿಂದ ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳ ಮೇಲೆ ಹೊಡೆತ ಬೀಳಲಿದೆ. ಕನ್ನಡ ಹಾಗೂ ಪ್ರಾದೇಶಿಕ ಸಂಸ್ಕೃತಿಯೇ ನಾಶವಾಗಲಿದೆ ಎನ್ನುವ ಕಾರಣವನ್ನು ಮುಂದೊಡ್ಡಿ ಕನ್ನಡ ಪರ ಸಂಘಟನೆಗಳು ಮೇ 23ರಂದು ಪ್ರತಿಭಟನೆ ನಡೆಸಲಿವೆ.

Malayalam mandatory in all schools, Kasaragod’s Pro Kannada people organized protest on May 23

ಮೇ 23ರಂದು ಕಾಸರಗೋಡಿನ ಜಿಲ್ಲಾಧಿಕಾರಿ ಕಚೇರಿಗೆ ಎಲ್ಲಾ ಕನ್ನಡ ಪರ ಸಂಘಟನೆಗಳು ಮುತ್ತಿಗೆ ಹಾಕಲು ನಿರ್ಧರಿಸಿವೆ.

ಇನ್ನು ಇವತ್ತು 'ಕಾಸರಗೋಡು ಕನ್ನಡ ಉಳಿಸಿ'

#KasaragoduKannadaUlisi ಹ್ಯಾಷ್ ಟ್ಯಾಗ್ ಮೂಲಕ ಪ್ರತಿಭಟನಾ ಸಂದೇಶ ಸಾರಲಾಯಿತು. ಹಲವಾರು ಜನ ಈ ಮೂಲಕ #KasaragoduKannadaUlisi ಹೆಸರಿನಲ್ಲಿ ಸಂದೇಶಗಳನ್ನು ರವಾನಿಸಿ ತಮ್ಮ ವಿರೋಧವನ್ನು ದಾಖಲಿಸಿದರು.

{promotion-urls}

English summary
Pro Kannada people organized a protest on May 23 against the Kerala government’s ordinance on April 11, making Malayalam compulsory in all the schools up to Class 10. This step is dangerous to the life of Kannada in Kerala's border district of Kasaragod.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X