• search
 • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೆಂದು ಬಂಟ್ವಾಳದಲ್ಲಿ ಮಹಾರುದ್ರ ಯಾಗ

|
   ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲು ಬಂಟ್ವಾಳದಲ್ಲಿ ಮಹಾ ರುದ್ರ ಯಾಗ | Oneindia Kannada

   ಮಂಗಳೂರು, ಡಿಸೆಂಬರ್ 05: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮುಂಬರುವ ಚುನಾವಣೆಯಲ್ಲಿ ಗೆಲುವಿನ ಲೆಕ್ಕಾಚಾರ , ತಂತ್ರಗಾರಿಕೆ ಆರಂಭವಾಗಿದೆ. ಈ ನಡುವೆ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸುವ ನಿಟ್ಟಿನಲ್ಲಿ ಸಂಕಲ್ಪ ಮಾಡಲಾಗುತ್ತಿದೆ.

   ಚುನಾವಣೆಗಾಗಿ ಅತಿರುದ್ರಯಾಗ ಮಾಡಿಸಿಲ್ಲ : ದೇವೇಗೌಡರ ಸ್ಪಷ್ಟನೆಚುನಾವಣೆಗಾಗಿ ಅತಿರುದ್ರಯಾಗ ಮಾಡಿಸಿಲ್ಲ : ದೇವೇಗೌಡರ ಸ್ಪಷ್ಟನೆ

   ಮೋದಿ ಅವರಿಗೆ ಮತ್ತೊಮ್ಮೆ ಪ್ರಧಾನಿಯಾಗುವ ಯೋಗ ಬರುವಂತೆ ಕೋರಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಮಹಾರುದ್ರ ಯಾಗ ನಡೆಸಲಾಗಿದೆ.

   ಬಂಟ್ವಾಳ ತಾಲೂಕಿನ ಕಕ್ಕೆಪದವು ಎಂಬಲ್ಲಿ ಯಾಗ ನಡೆದಿದ್ದು, ಸ್ಥಳೀಯ ಸಂಘಟನೆ ರಾಮಾಂಜನೇಯ ಗೆಳೆಯರ ಬಳಗದ ವತಿಯಿಂದ ಯಾಗ ಆಯೋಜನೆ ಮಾಡಲಾಗಿತ್ತು. ಕಾರಿಂಜ ಕೊಡಂಬೆಟ್ಟು ರಾಘವೇಂದ್ರ ಭಟ್ ಪೌರೋಹಿತ್ಯದಲ್ಲಿ ಈ ಯಾಗ ಮಾಡಲಾಗಿದೆ. ಬೆಳಗ್ಗೆ 7ರಿಂದ ಆರಂಭವಾವ ರುದ್ರ ಯಾಗ 11.30 ಕ್ಕೆ ಪೂರ್ಣಾಹುತಿಯಾಗಿದೆ.

    ಪ್ರಧಾನಿ ಮೋದಿಗೆ ಕಂಟಕ ಕಳೆಯಲು ಕೊಲ್ಲೂರಿನಲ್ಲಿ ಯಾಗ! ಪ್ರಧಾನಿ ಮೋದಿಗೆ ಕಂಟಕ ಕಳೆಯಲು ಕೊಲ್ಲೂರಿನಲ್ಲಿ ಯಾಗ!

   ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆದಿದ್ದು, ಸಂಸದ ನಳಿನ್ ಕುಮಾರ್ ಯಾಗದ ಪೂರ್ಣಾಹುತಿ ನೆರವೇರಿಸಿದ್ದಾರೆ. ಈ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ಮುಖಂಡರು, ಶ್ರೀರಾಮಾಂಜನೇಯ ಗೆಳೆಯರ ಬಳಗದ ಸದಸ್ಯರು ಉಪಸ್ಥಿತರಿದ್ದರು.

   English summary
   Ramanjaneya Geleyara balaga performed Maha Rudhra Yaga for Prime minister Narendra Modi at Bantwal.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X