ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಸರಗೋಡು: ಪೊದೆಯೊಂದರಲ್ಲಿ ಮಾರಕಾಸ್ತ್ರಗಳು ಪತ್ತೆ!

By ಮಂಗಳೂರು ಪ್ರತಿನಿಧಿ
|
Google Oneindia Kannada News

ಕಾಸರಗೋಡು/ಮಂಗಳೂರು, ಮಾರ್ಚ್ 27 : ದುಷ್ಕ್ರತ್ಯ ಎಸಗಲು ಅಪಾರ ಪ್ರಮಾಣ ಮಾರಕಾಸ್ತ್ರಗಳನ್ನು ಸಂಗ್ರಹಿಸಿಟ್ಟಿರುವುದು ಕಾಸರಗೂಡು ಹೊರವಲಯದ ಪೊದೆಯೊಂದರಲ್ಲಿ ಪತ್ತೆಯಾಗಿವೆ.

ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ತಲವಾರು, ಮಚ್ಚು, ಕಬ್ಬಿಣದ ರಾಡ್, ದೊಣ್ಣೆಗಳು, ಮರದ ತುಂಡು, ಬಿಯರ್ ಬಾಟಲ್ ಗಳು, ಪಾತ್ರೆಗಳು ಸೇರಿದಂತೆ ಮತ್ತಿತರ ಸೊತ್ತುಗಳು ಪತ್ತೆಯಾಗಿವೆ.

Machete and other weapons found in a remote place at kasargod

ಮಾರಕಾಸ್ತ್ರಗಳು ಬಿದ್ದಿರುವುದು ಕಂಬಾರ್ ಪೆರಿಯಡ್ಕದ ನಿವಾಸಿಯೊಬ್ಬರಿಗೆ ಸೇರಿದ ಜಾಗ ಎಂದು ಹೇಳಲಾಗುತ್ತಿದೆ. ಗಲಭೆ ಸೃಷ್ಟಿಸುವ ಸಂಚಿನ ಹಿನ್ನೆಲೆಯಲ್ಲಿ ಇಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಮಾರಕಾಸ್ತ್ರಗಳನ್ನು ಸಂಗ್ರಹಿಸಿಡಲಾಗಿತ್ತು ಎಂದು ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ.

ಅಲ್ಲದೆ, ಇಲ್ಲಿಗೆ ಆಗಮಿಸಿದ್ದ ತಂಡ ಒಂದು ರಾತ್ರಿ ಇಲ್ಲಿಯೇ ತಂಗಿದ್ದು, ಮುಂದಿನ ದಿನಗಳಲ್ಲಿ ವ್ಯಾಪಕವಾಗಿ ಗಲಭೆ ಸೃಷ್ಟಿಸುವ ಹುನ್ನಾರ ನಡೆಸಿತ್ತು ಎನ್ನುವುದನ್ನು ಪೊಲೀಸರು ಖಚಿತಪಡಿಸಿದ್ದಾರೆ.

ಈ ಹಿಂದೆ ಕಾಸರಗೋಡಿನ ಸುತ್ತಮುತ್ತ ಗಲಭೆ ನಡೆಸಲು ಸಂಚು ನಡೆದಿದೆ ಎಂದು ಗುಪ್ತಚರ ಇಲಾಖೆ ಖಚಿತಪಡಿಸಿದ ಬೆನ್ನಲ್ಲೇ ಇಷ್ಟೊಂದು ಪ್ರಮಾಣದಲ್ಲಿ ಮಾರಕಾಸ್ತ್ರಗಳು ಕೂಡಾ ಸಿಗುತ್ತಿರುವುದು ಸಂಶಯಕ್ಕೆ ಕಾರಣವಾಗಿದೆ.

ಕಾಸರಗೋಡು ನಗರ ಠಾಣಾ ಸರ್ಕಲ್ ಇನ್ಸ್ ಪೆಕ್ಟರ್ ಅಬ್ದುಲ್ ರಹೀಮ್ ನೇತೃತ್ವದ ಪೊಲೀಸ್ ತಂಡ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದು, ತನಿಖೆ ತೀವ್ರಗೊಳಿಸಿದೆ.

English summary
Machete and other weapons found in a remote place at kasargod. It is said that some activists have gathered up all this to create a communial dispute in Kasargod. The cops are on search to find the culprits.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X