ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿಗೆ ಬಂತು ಲಕ್ಸುರಿ ಹಡಗು; ಕೊರೊನಾ ಆತಂಕ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಫೆಬ್ರವರಿ 05: ನವಮಂಗಳೂರು ಬಂದರಿಗೆ ಆಗಮಿಸಿದ 12 ನೇ ಲಕ್ಸುರಿ ಪ್ರವಾಸಿ ಹಡಗು ಕೋಸ್ಟಾ ವಿಕ್ಟೋರಿಯಾ ಆಗಮಿಸಿದೆ.

ಕೊರೊನಾ ವೈರಸ್‌ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟ್ಟೆಚ್ಚರ ಇರುವ ಹಿನ್ನೆಲೆಯಲ್ಲಿ ಬಂದರಿಗೆ ಮಂಗಳವಾರ ಮುಂಬಯಿಂದ ಆಗಮಿಸಿದ ಪ್ರವಾಸಿ ಹಡಗಿನ ಯಾತ್ರಿಗಳನ್ನು ತೀವ್ರ ತಪಾಸಣೆಗೆ ಒಳಪಡಿಸಲಾಯಿತು.

ಕೊರೊನಾ ವೈರಸ್: ಉತ್ತರ ಕನ್ನಡ ಜಿಲ್ಲೆಯಲ್ಲಿ ಭೀತಿಗೆ ಕಾರಣವೇನು?ಕೊರೊನಾ ವೈರಸ್: ಉತ್ತರ ಕನ್ನಡ ಜಿಲ್ಲೆಯಲ್ಲಿ ಭೀತಿಗೆ ಕಾರಣವೇನು?

ಇದಕ್ಕಾಗಿ ವಿಶೇಷ ತಪಾಸಣಾ ಘಟಕ ತೆರೆಯಲಾಗಿತ್ತು. ಕ್ರೂಸ್ ಟರ್ಮಿನಲ್‌ ಒಳಗೆ ಪ್ರವೇಶಿಸುವ ಸಂದರ್ಭ ಪ್ರವಾಸಿಗರನ್ನು ಸ್ಕ್ಯಾನಿಂಗ್‌ ಮಾಡಲಾಯಿತು. ಪ್ರವಾಸಿಗರು ಆಗಮಿಸುವ ಸಂದರ್ಭದಲ್ಲಿ ಸಾಮಾನ್ಯ ವೈದ್ಯಕೀಯ ನೆರವು ನೀಡಲಾಗುತ್ತದೆ.

Luxury Ship Coming To Mangaluru Port; Corona anxiety

ಆದರೆ ಈ ಬಾರಿ ಕೊರೊನಾ ವೈರಸ್ ಬಗ್ಗೆ ಕಟ್ಟೆಚ್ಚರ ಇರುವುದರಿಂದ ತಪಾಸಣೆ ಬಿಗಿಗೊಳಿಸಲಾಗಿತ್ತು ಎಂದು ಚೇರ್ಮನ್ ಎ.ವಿ.ರಮಣ ತಿಳಿಸಿದರು. ಹಡಗಿನಲ್ಲಿದ್ದ 1,800 ವಿದೇಶಿ ಪ್ರವಾಸಿಗರು ಹಾಗೂ 786 ಸಿಬ್ಬಂದಿ ಇದ್ದು, ತಪಾಸಣೆ ಬಳಿಕ ನಗರದ ಶಾಪಿಂಗ್‌ ಮಾಲ್, ಪ್ರೇಕ್ಷಣೀಯ ಸ್ಥಳಗಳನ್ನು ವಿದೇಶಿ ಪ್ರವಾಸಿಗರು ಸಂದರ್ಶಿಸಿದರು.

English summary
Costa Victoria, the 12th luxury ship to arrive at the port of Navamangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X