ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಪ್ಪಿನಂಗಡಿ ಬಳಿ ಗ್ಯಾಸ್ ಟ್ಯಾಂಕರ್ ಪಲ್ಟಿ, ಬೆಂಕಿ ಹಚ್ಚದಂತೆ ಸೂಚನೆ

|
Google Oneindia Kannada News

ಮಂಗಳೂರು, ಡಿಸೆಂಬರ್. 02:ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿರುವ ಪರಿಣಾಮ ಗ್ಯಾಸ್ ಲೀಕೇಜ್ ಆಗುತ್ತಿರುವ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಉಪ್ಪಿನಂಗಡಿ ಬಳಿ ನಡೆದಿದೆ.

ಉಪ್ಪಿನಂಗಡಿ ಸಮೀಪದ ಬೆದ್ರೋಡಿ ಬಳಿ ಈ ಘಟನೆ ನಡೆದಿದ್ದು, ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬೆದ್ರೋಡಿ ಪ್ರದೇಶದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಹೈವೇ ಬಂದ್ ಮಾಡಲಾಗಿದೆ. ಸ್ಥಳದಲ್ಲಿ ಅಗ್ನಿಶಾಮಕ ದಳ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಮೊಕ್ಕಾಂ ಹೂಡಿದ್ದು, ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ.

LPG tanker rolls over at Uppinangadi

ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಉರುಳಿ ಬಿದ್ದ ಗ್ಯಾಸ್ ಟ್ಯಾಂಕರ್, ತಪ್ಪಿದ ಅನಾಹುತಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಉರುಳಿ ಬಿದ್ದ ಗ್ಯಾಸ್ ಟ್ಯಾಂಕರ್, ತಪ್ಪಿದ ಅನಾಹುತ

ಮಂಗಳೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ಗ್ಯಾಸ್ ಟ್ಯಾಂಕರ್ ಬೆದ್ರೋಡಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಗ್ಯಾಸ್ ಲೀಕೇಜ್ ಆಗುತ್ತಿರುವ ಹಿನ್ನೆಲೆಯಲ್ಲಿ ಬೆದ್ರೋಡಿ ಆಸುಪಾಸಿನ ಎರಡು ಕಿಮೀ ವ್ಯಾಪ್ತಿಯ ಮನೆ ಹಾಗೂ ಪರಿಸರದಲ್ಲಿ ಯಾರು ಬೆಂಕಿ ಹಚ್ಚದಂತೆ ಸೂಚನೆ ನೀಡಲಾಗಿದೆ.

LPG tanker rolls over at Uppinangadi

ವಿಷ ಅನಿಲ ಲೀಕೇಜ್: ನಮ್ಮ ಮೆಟ್ರೋ ವಿರುದ್ಧ ಎಫ್‌ಐಆರ್‌ವಿಷ ಅನಿಲ ಲೀಕೇಜ್: ನಮ್ಮ ಮೆಟ್ರೋ ವಿರುದ್ಧ ಎಫ್‌ಐಆರ್‌

ಅಗ್ನಿಶಾಮಕ ದಳ, ಪೊಲೀಸರಿಂದ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಲೀಕೇಜ್ ತಡೆಯಲು ಯತ್ನಿಸಲಾಗುತ್ತಿದೆ.

English summary
LPG tanker rolls over at Bedrodi near Uppinangadi on early hours of December 02.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X